N Govindaraju: ಪ್ರಚಾರದ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆದ JDS ಅಭ್ಯರ್ಥಿ! ‘ಬಿ’ ಫಾರಂ ಕೊಡದೆ ಪಕ್ಷದಿಂದ ಉಚ್ಛಾಟಿಸಬೇಕೆಂದು ಮಹಿಳೆಯರ ಹೋರಟ
N Govindaraju : ತುಮಕೂರು ನಗರ ಕ್ಷೇತ್ರದ JDS ಅಭ್ಯರ್ಥಿ ಎನ್. ಗೋವಿಂದರಾಜು (N Govindaraju) ಪ್ರಚಾರದ ನೆಪವೊಡ್ಡಿ ಮಹಿಳೆಯರನ್ನು ಮಂಚಕ್ಕೆ ಕರೆದಿದ್ದಾರೆ ಎಂದು ಗೋವಿಂದರಾಜು ವಿರುದ್ಧ ಮಹಿಳೆಯರು ಸಿಡಿದೆದ್ದಿದ್ದು, ತುಮಕೂರಿನ (Tumakuru) ನಗರ ವೃತ್ತದಲ್ಲಿ 5 ಸಾವಿರಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆ (Protest) ನಡೆಸಿದ್ದಾರೆ.
ಹೌದು, ಪ್ರಚಾರದ ನೆಪದಲ್ಲಿ ತುಮಕೂರು ನಗರದ JDS ಅಭ್ಯರ್ಥಿ ಮಹಿಳೆಯರನ್ನು ಮಂಚಕ್ಕೆ ಕರೆದಿದ್ದಾರೆ, ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ರೇಷ್ಮಾ ಎಂಬ ಮಹಿಳೆ ದೂರು ನೀಡಿದ್ದಾರೆ. ಜೊತೆಗೆ ಗೋವಿಂದರಾಜು(N Govindaraju) ಮಾತನಾಡಿದ್ದು ಎನ್ನಲಾದ ಪೋಲಿ ಆಡಿಯೋ ಬಿಡುಗಡೆಯಾಗಿದ್ದು, ಜೆಡಿಎಸ್ (JDS) ಅಭ್ಯರ್ಥಿ ಗೋವಿಂದರಾಜು ವಿರುದ್ಧ ಸಾವಿರಾರು ಮಹಿಳೆಯರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಗೋವಿಂದರಾಜು ಅವರನ್ನ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ಅವರಿಗೆ ʻಬಿʼ ಫಾರಂ ಕೊಡದಂತೆ ಆಗ್ರಹ ಮಾಡಿದ್ದಾರೆ. ಜೊತೆಗೆ ಜೆಡಿಎಸ್‌ಗೆ ಹೆಣ್ಣು ಮಕ್ಕಳ ಮೇಲೆ ಗೌರವ ಇದ್ದರೆ JDS ಪಕ್ಷದಿಂದ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇಂತಹ ವ್ಯಕ್ತಿತ್ವ ಉಳ್ಳವರು ಶಾಸಕರಾದರೆ ಕ್ಷೇತ್ರದ ಮಹಿಳೆಯರು ಹಗಲು ಹೊತ್ತಿನಲ್ಲಿ ಭಯದಿಂದ ಓಡಾಡುವ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮಹಿಳೆಯೊಬ್ಬರನ್ನ ಪ್ರಚಾರಕ್ಕೆ ಕರೆಯುವ ನೆಪದಲ್ಲಿ ಗೋವಿಂದರಾಜು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೇ ಇವರ 8 ಪೋಲಿ ಆಡಿಯೋಗಳು ಬಿಡುಗಡೆಯಾಗಿದ್ದು, ಜನಪ್ರತಿನಿಧಿಯಾಗಲು ಹೊರಟವರ ಬಣ್ಣ ಬಯಲಾಗಿದೆ. ಈ ಕೂಡಲೇ ಗೋವಿಂದರಾಜು ಅವರನ್ನ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಮಹಿಳೆಯರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಎನ್. ಗೋವಿಂದರಾಜು ಅವರು JDSನಿಂದ ನಾಮಪತ್ರ ಸಲ್ಲಿಸಲು ತಯಾರಿ ತಯಾರಿ ನಡೆಸುತ್ತಿರುವ ಬೆನ್ನೆಲೇ ಈ ಆರೋಪ ಕೇಳಿಬಂದಿದೆ. ರೇಷ್ಮಾ ಆಡಿಯೋ ಸಾಕ್ಷ್ಯಗಳನ್ನು ಒದಗಿಸಿದಲ್ಲದೆ, ಕುವೆಂಪು ನಗರದಲ್ಲಿರುವ ಎನ್. ಗೋವಿಂದರಾಜು ಮನೆ ಮುಂದೆ ಗಲಾಟೆ ಕೂಡ ಮಾಡಿದ್ದು, ಹೈಡ್ರಾಮಾ ಸೃಷ್ಟಿಸಿದ್ದಾರೆ.
ಅಂದಹಾಗೆ ಇತ್ತೀಚೆಗೆ ಎನ್. ಗೋವಿಂದರಾಜು ವಿರುದ್ಧ ಹಣ ಹಂಚಿಕೆ ಆರೋಪ ಸಹ ಕೇಳಿಬಂದಿತ್ತು. ತುಮಕೂರು ನಗರ ಹೆತ್ತೆನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಜನರಿಗೆ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ತುಮಕೂರಿನ ಜಯಪುರದ ಮತದಾರರನ್ನು ಬಸ್ನಲ್ಲಿ ಕರೆದೊಯ್ದು ತಲಾ 500, 1,000 ರೂ ಹಂಚಿಕೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು.