Women Health : ಮಹಿಳೆಯರೇ ಎಚ್ಚರ!! 30 ವರ್ಷ ದಾಟಿದರೆ ಬೇಡ ಎಂದರೂ ಈ ಕಾಯಿಲೆಗಳು ನಿಮ್ಮನ್ನು ಕಾಡಲಿವೆ!

Women Health : ಮಹಿಳೆಯರ ಆರೋಗ್ಯವು (Women Health) ಹಲವು ರೀತಿಯಲ್ಲಿ ಪುರುಷರಿಗಿಂತ ಭಿನ್ನವಾಗಿದೆ. ಮಹಿಳೆಯರಲ್ಲಿ ಖಿನ್ನತೆ ಮತ್ತು ಆತಂಕವು ಹೆಚ್ಚಾಗಿ ಕಾಡುತ್ತದೆ. ಮೂತ್ರನಾಳದ ಪರಿಸ್ಥಿತಿಗಳು , ಗರ್ಭ ಧರಿಸುವಿಕೆ ಸಮಸ್ಯೆ , ಮಗು ಹೆರುವಿಕೆ, ಲೈಂಗಿಕವಾಗಿ ಹರಡುವ ರೋಗಗಳು ಈ ಎಲ್ಲಾ ಕಾರಣದಿಂದ ಮಹಿಳೆಯರಿಗೆ ಹೆಚ್ಚಾಗಿ ಹಾನಿಯುಂಟು ಮಾಡಬಹುದು. ವಿಶೇಷವಾಗಿ ಮಹಿಳೆಯರು ಕೆಲವು ಮಾರಣಾಂತಿಕವಾದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇದಕ್ಕೆ ಪ್ರಮುಖವಾದ ಕಾರಣ ಕೆಲವು ಕಾಯಿಲೆಗಳು ಅನುವಂಶೀಯವಾಗಿ ಬಂದರೆ ಇನ್ನು ಕೆಲವು ಜೀವನ ಶೈಲಿಯ ಹಾಗೂ ಆಹಾರ ಪದ್ಧತಿಯ ಕಾರಣದಿಂದ ಕಂಡು ಬರುತ್ತವೆ. ಇದರ ಜೊತೆಗೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಕೂಡ ಆಗಿರಬಹುದು.

 

ಅದರಲ್ಲೂ 30 ದಾಟಿದ ಮಹಿಳೆಯರು ಇಂದು ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿ ಕೊಂಡಿದ್ದಾರೆ. ಈ ಬಗ್ಗೆ ಸ್ತ್ರೀರೋಗ ತಜ್ಞರಾದ Dr Gurpreet Kaur Virk, Senior Consultant- Obstetrics and Gynecology, Manipal Hospital,ಅವರು TheHealthSite.com ಜೊತೆಗೆ ಹಂಚಿಕೊಂಡಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಥೈರಾಯಿಡ್ ಸಮಸ್ಯೆಗಳು : ಗಂಟಲಿನ ಭಾಗದಲ್ಲಿ ಕಂಡುಬರುವ ಥೈರಾಯ್ಡ್ ಗ್ರಂಥಿ ಪುರುಷರಿಗಿಂತ ಮಹಿಳೆಯರಿಗೆ ತೊಂದರೆ ನೀಡುತ್ತದೆ. ಅಯೋಡಿನ್ ಕೊರತೆಯಿಂದ ದೇಹದ ರೋಗ ನಿರೋಧಕ ಶಕ್ತಿಯಮೇಲೆ ಇದು ಪ್ರಭಾವ ಬೀರಿ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ಪಾರ್ಶ್ವವಾಯು: ಪಾರ್ಶ್ವವಾಯುವಿಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಎರಡು ಸಾಮಾನ್ಯವಾದ ಕಾರಣವಾಗಿದ್ದರೆ, ಜಂಕ್‌ ಫುಡ್‌ಗಳು, ದೇಹದಂಡನೆಯ ಅಭಾವ, ಅತಿಯಾದ ಕೆಲಸದಿಂದಾಗಿ ಒತ್ತಡ, ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವನೆ ಮಾಡದಿರುವುದರಿಂದ ಕೂಡ ಸಂಭವಿಸುತ್ತದೆ.

ಹೃದಯದ ಕಾಯಿಲೆಗಳು : ಪುರುಷರ ಹೃದಯದ ಗಾತ್ರಕ್ಕೆ ಹೋಲಿಸಿದರೆ ಮಹಿಳೆಯರ ಹೃದಯ ಸ್ವಲ್ಪ ಚಿಕ್ಕದಿರುತ್ತದೆ. ಹಾಗಾಗಿ ಅವರ ಹೃದಯ ಬಡಿತ ಯಾವಾಗಲೂ ಸ್ವಲ್ಪ ಹೆಚ್ಚೇ ಇರುತ್ತದೆ. ಅಂದರೆ ನಿಮಿಷಕ್ಕೆ 78ರಿಂದ 82 ಬಾರಿ ಹೃದಯ ಬಡಿದು ಕೊಳ್ಳುತ್ತದೆ. ಹಾಗಾಗಿ ಬಹಳಷ್ಟು ಮಹಿಳೆಯರಿಗೆ ಹೃದಯದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಮಧುಮೇಹ : ಸಕ್ಕರೆ ಕಾಯಿಲೆ ಈಗಿನ ಕಾಲದಲ್ಲಿ ಕಾಮನ್. ಅದರಲ್ಲೂ 30 ವರ್ಷ ದಾಟಿದ ಮಹಿಳೆಯರಿಗೆ ಬೊಜ್ಜು ಅಥವಾ ಹಾರ್ಮೋ ನುಗಳ ಬದಲಾವಣೆ, ಕೌಟುಂಬಿಕ ಇತಿಹಾಸ ಇವೆಲ್ಲದರ ಕಾರಣಗಳಿಂದ ಗರ್ಭವಸ್ಥೆಯಲ್ಲಿ ಸಕ್ಕರೆ ಕಾಯಿಲೆಯನ್ನು ಹೊಂದುವ ಸಾಧ್ಯತೆ ಇರುತ್ತದೆ. ಮಹಿಳೆಯರಲ್ಲಿ ಕಂಡುಬರುವ ಮಧುಮೇಹ ಸಮಸ್ಯೆಯನ್ನು ಅವರು ಸರಿಯಾಗಿ ನಿರ್ವಹಣೆ ಮಾಡಿಕೊಳ್ಳದೆ ಹೋದರೆ ಮೂತ್ರನಾಳದ ಸೋಂಕು ಎದುರಾಗುವ ಸಾಧ್ಯತೆ ಇರುತ್ತದೆ.

ಇದರ ಜೊತೆಗೆ ರಕ್ತದಲ್ಲಿ ಶುಗರ್ ಲೆವೆಲ್ ಬದಲಾಗುತ್ತದೆ ಮತ್ತು ಮುಟ್ಟಿನ ಅವಧಿ ಸಂದರ್ಭದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ದೇಹದ ಫಿಟ್ನೆಸ್ ನಿರ್ವಹಣೆ ಮಾಡಿಕೊಳ್ಳು ವುದರಿಂದ ಮತ್ತು ಉತ್ತಮ ಆಹಾರ ಪದ್ಧತಿ ಹೊಂದುವುದರಿಂದ ಈ ಜೀವನ ಪರ್ಯಂತ ಕಾಡುವ ಸಮಸ್ಯೆಯಿಂದ ಪಾರಾಗಬಹುದು.​​

ಕ್ಯಾನ್ಸರ್ : ತುಂಬಾ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಸಮಸ್ಯೆ ಕೂಡ ಮಾರಕವಾಗಿ ಕಂಡು ಬರುತ್ತಿದೆ. ಇತ್ತೀಚಿನ ಒಂದು ಸರ್ವೆ ಪ್ರಕಾರ ಯಾವುದೇ ಕೌಟುಂಬಿಕ ಇತಿಹಾಸ ಇಲ್ಲದೆ ಇದ್ದರೂ ಇಂತಹ ತೊಂದರೆಗಳು ಮಹಿಳೆಯರಿಗೆ ಎದುರಾಗುತ್ತವೆ. ತಮ್ಮ ಮುಟ್ಟಿನ ಅವಧಿಯ ನಂತರದ ಕೆಲವು ದಿನಗಳಲ್ಲಿ ಮಹಿಳೆಯರು ಈ ನಿಟ್ಟಿನಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಮುಖ್ಯವಾಗಿ 40ವರ್ಷ ದಾಟಿದ ಮಹಿಳೆಯರು ಪ್ರತಿ ಎರಡು ವರ್ಷ ಕ್ಕೊಮ್ಮೆ ತಮ್ಮ ಸ್ತನಗಳ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿ ಕೊಳ್ಳುವುದು ಒಳ್ಳೆಯದು.​

ಮೂಳೆಗಳ ಸಮಸ್ಯೆ : ಮಹಿಳೆಯರಿಗೆ ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳುತ್ತವೆ. ಸಣ್ಣ ಪ್ರಮಾಣದಲ್ಲಿ ಏಟು ಬಿದ್ದರೆ ಮೂಳೆಗಳು ಮುರಿದುಕೊಳ್ಳುವ ಸಾಧ್ಯತೆ ಇರುತ್ತದೆ. ಋತುಬಂಧದ ನಂತರದಲ್ಲಿ ಮಹಿಳೆಯರಿಗೆ ಹೀಗಾಗುತ್ತದೆ. ಈ ಸಂದರ್ಭದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಸಮರ್ಪಕವಾಗಿ ಸಿಕ್ಕರೆ ಮೂಳೆಗಳ ಸಾಂದ್ರತೆ ಅತ್ಯುತ್ತಮವಾಗಿ ನಿರ್ವಹಣೆ ಯಾಗುತ್ತದೆ. ಆರೋಗ್ಯಕರವಾದ ಮೂಳೆಗಳನ್ನು ಹೊಂದಲು ಚಿಕ್ಕ ವಯಸ್ಸಿನಿಂದ ಕ್ಯಾಲ್ಸಿಯಂ ಹೊಂದಿದ ಆಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ.

ಈ ಎಲ್ಲಾ ಅಂಶಗಳು ಗಮನದಲ್ಲಿ ಇಟ್ಟುಕೊಂಡು ತಮ್ಮ ದೇಹದ ಆರೈಕೆ ಮಾಡಬೇಕು ಮತ್ತು ಕೆಟ್ಟ ಜೀವನ ಶೈಲಿಯಿಂದ ಅಂದರೆ ಧೂಮಪಾನ ಮತ್ತು ಮಧ್ಯಪಾನ ಸೇವನೆಯಿಂದ ದೂರ ಉಳಿಯುವುದರಿಂದ ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು.​

 

ಇದನ್ನು ಓದಿ : Software employees : ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಗುಡ್ ನ್ಯೂಸ್! ನಿಮಗೆ ಸಂಬಳ ಹೆಚ್ಚಾಗುತ್ತಂತೆ! 

 

 

Leave A Reply

Your email address will not be published.