JDS Tumkur candidate: ಇವತ್ತಿನ ಪ್ರಚಾರದ ವಿಚಾರ ಏನೆಂದರೆ ಪ್ರಚಾರದ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆದ ವ್ಯಭಿಚಾರ !

 

 

JDS Tumkur candidate : ಪ್ರಚಾರದ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆದ ವಿಚಾರವೊಂದು ದೊಡ್ಡದಾಗಿ ಸುದ್ದಿಯಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ ಒಬ್ಬರು ಪ್ರಚಾರದ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ ಕೇಳಿಬಂದಿದೆ. ( Tumkur JDS candidate incited lady to bed?)

ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ವಿರುದ್ಧ ಪ್ರಚಾರದ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ ಕೇಳಿಬಂದಿದೆ.

ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಚುನಾವಣಾ ಪ್ರಚಾರಕ್ಕೆ ಮಹಿಳೆಯರನ್ನು ಕರೆಸುವ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಂತಹಾ ಆರೋಪ ಮಾಡಿ ಸಹಸ್ರಾರು ಮಹಿಳೆಯರು ಟೌನ್ ಹಾಲ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವ ಗೋವಿಂದರಾಜು ಅವರಿಗೆ ಬಿ ಫಾರಂ ಕೊಡದೆ, ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಪ್ರತಿಭಟನಾನಿರತ ಮಹಿಳೆಯರು ಒತ್ತಾಯಿಸಿದರು. ಈ ಸಂಬಂಧ ರೇಷ್ಮಾ ಎಂಬ ಮಹಿಳೆಯೊಬ್ಬರು ದೂರು ನೀಡಿದ್ದು, ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮಾತನಾಡಿದ್ದು ಎನ್ನಲಾದ ಆಡಿಯೋ ಸಾಕ್ಷ್ಯಗಳನ್ನು ಅವರು ಒದಗಿಸಿದ್ದಾರೆ.

ಅಲ್ಲದೇ, ತುಮಕೂರಿನ ಕುವೆಂಪು ನಗರದಲ್ಲಿರುವ ಗೋವಿಂದರಾಜು ನಿವಾಸದ ಮುಂದೆ ಗಲಾಟೆ ಮಾಡುವ ಮೂಲಕ ಹೈಡ್ರಾಮಾ ಇವತ್ತು ಸೃಷ್ಟಿಯಾಗಿದೆ.

ಮಹಿಳೆಯ ಜೊತೆಗೆ ಅಶ್ಲೀಲ, ಅಸಭ್ಯವಾಗಿ ಗೋವಿಂದರಾಜು ಮಾತನಾಡಿರುವುದು ಎನ್ನಲಾದ ಆಡಿಯೋದಲ್ಲಿ ದಾಖಲಾಗಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಆ ಆರೋಪವನ್ನು ತಳ್ಳಿಹಾಕಿದ್ದಾರೆ. ಈ ಆಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ, ಅದರಲ್ಲಿ ಇರುವುದು ನನ್ನ ಮಾತುಗಳಲ್ಲ. ಈ ಮಹಿಳೆ ಯಾರೆಂಬುದು ಕೂಡಾ ನನಗೆ ಗೊತ್ತಿಲ್ಲ. ಬಿಜೆಪಿ, ಕಾಂಗ್ರೆಸ್ ನವರ ಕುತಂತ್ರದಿಂದ ಆಡಿಯೋ ಹೊರಬಂದಿದೆ ಎಂದು ಗೋವಿಂದರಾಜು ತಿಳಿಸಿದ್ದಾರೆ.

 

ಇದನ್ನು ಓದಿ : Kanakapura Election : ” ನಾ ಬರೋವರೆಗೂ ಮಾತ್ರ ನಿನ್ನ ಹವಾ, ನಾ ಬಂದ್ಮೇಲೆ ನಂದೇ ಹವಾ ” – ಕನಕಪುರದಲ್ಲಿ ಡಿಕೆಶಿ ಉದ್ದೇಶಿಸಿ ಸಚಿವ ಆರ್. ಅಶೋಕ್ ಸಿನಿಮಾ ಡೈಲಾಗ್ ! 

 

 

Leave A Reply

Your email address will not be published.