SBI Asha Scholarship : ಎಸ್‌ಬಿಐ ನೀಡುತ್ತಿದೆ ವಿದ್ಯಾರ್ಥಿಗಳಿಗಾಗಿ ಆಶಾ ಸ್ಕಾಲರ್ಶಿಪ್!
SBI Asha Scholarship :ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಎಸ್‌ಬಿಐ ಬ್ಯಾಂಕ್ ಆಶಾ ಸ್ಕಾಲರ್ಶಿಪ್(SBI Asha Scholarship) ನ್ನು ಎಸ್‌ಬಿಐ ಖಾತೆ ಹೊಂದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಈ ವಿದ್ಯಾರ್ಥಿ ವೇತನವನ್ನು ವಾರ್ಷಿಕವಾಗಿ ನೀಡಲು ಮುಂದಾಗಿದ್ದು, ಪದವಿ, ಡಿಗ್ರಿ, ಪೋಸ್ಟ್ ಗ್ರಾಜುಯೇಟ್ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಅರ್ಹತೆ ವಿವರ:
*ಕಡ್ಡಾಯವಾಗಿ ವಿದ್ಯಾರ್ಥಿಗಳು ಭಾರತೀಯ ಪ್ರಜೆಯಾಗಿರಬೇಕು.
*ವಿದ್ಯಾರ್ಥಿಗಳು ಪಿಯುಸಿಯಲ್ಲಿ ಶೇ 75 ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು.
*ಈ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು ಪ್ರಥಮ ವರ್ಷದ ಪದವಿಯನ್ನು ಓದುತ್ತಿರಬೇಕು ಹಾಗೂ ಪೋಸ್ಟ್ ಗ್ರಾಜುಯೇಷನ್ ಕೂಡ ಅನ್ವಯವಾಗುತ್ತದೆ.
*ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕಿಂತ ಕಡಿಮೆ ಇರಬಾರದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
*ಆಧಾರ್ ಕಾರ್ಡ್/ರೇಷನ್ ಕಾರ್ಡ್/ಗುರುತಿನ ಚೀಟಿ
*ದ್ವಿತೀಯ ಪಿಯುಸಿ ಶೈಕ್ಷಣಿಕ ಅಂಕ ಪಟ್ಟಿ
*ವಿದ್ಯಾರ್ಥಿಯ ಹಾಗೂ ಪೋಷಕರ ಬ್ಯಾಂಕ್ ದಾಖಲೆಗಳು
*ಪ್ರಸಕ್ತ ಪದವಿಗೆ ಸೇರಿದ ಪ್ರವೇಶ ಪ್ರಮಾಣ ಪತ್ರ
*ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ.