Rahul Gandhi-Shah rukh Khan Audio : ರಾಹುಲ್ ಗಾಂಧಿ-ಶಾರುಖ್ ಖಾನ್ ಸಂಭಾಷಣೆ ಆಡಿಯೋ ವೈರಲ್! ಏನಿದೆ ಗೊತ್ತಾ ಅದರಲ್ಲಿ?

Rahul Gandhi-Shah rukh Khan : ಅಪಾರ ಅಭಿಮಾನಿಗಳು ಇರೋ ಸೆಲೆಬ್ರಿಟಿಗಳ ಸಾಲಿನಲ್ಲಿ ಉತ್ತುಂಗದಲ್ಲಿ ನಿಲ್ಲೋ ನಟ ಅಂದ್ರೆ ಅದು ಶಾರುಖ್ ಖಾನ್(Sharuk Khan)ಅವರು. ಅವರಿಗೆ ಕೇವಲ ಜನಸಾಮಾನ್ಯರಷ್ಟೇ ಅಲ್ಲ ಹಿರಿಯ ರಾಜಕಾರಣಿಗಳಯ, ರಾಜಕೀಯ ಮುಖಂಡರುಗಳು ಕೂಡ ಅಭಿಮಾನಿಗಳಾಗಿದ್ದು, ಶಾರುಖ್ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ಅಂತವರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಒಬ್ಬರು. ಆದರೀಗ ರಾಹುಲ್ ಗಾಂಧಿ(Rahul Gandhi)ಹಾಗೂ ಶಾರುಖ್ ಖಾನ್ ( Rahul Gandhi-Shah rukh Khan) ಅವರ ಸಂಭಾಷಣೆಯೊಂದು ವೈರಲ್ ಆಗಿದ್ದು ಸಾಕಷ್ಟು ಸುದ್ಧಿಯಾಗುತ್ತಿದೆ. ವೈರಲ್ ವಿಡಿಯೋದಲ್ಲಿ ಇರೋದೇನು?

 

ಹೌದು, ರಾಹುಲ್ ಗಾಂಧಿ ಹಾಗೂ ಶಾರುಖ್ ಖಾನ್ ಅವರು ಮಾತನಾಡಿರುವ 2008ರ ಸಂಭಾಷಣೆಯೊಂದು ಇದೀಗ ವೈರಲ್ ಆಗಿದೆ. ಅದೇನೆಂದರೆ ಎನ್​ಡಿಟಿವಿಯ ಇಂಡಿಯನ್ ಆಫ್ ದಿ ಇಯರ್ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಶಾರುಖ್ ಹತ್ರ ಒಂದು ಸಲಹೆ ಕೇಳಿದ್ದರು. ಆಗ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಶಾರುಖ್ ಖಾನ್ ಕೊಟ್ಟಿದ್ದ ಉತ್ತರ ಏನಿತ್ತು ಗೊತ್ತಾ? ಇಲ್ಲಿದೆ ನೋಡಿ.

ಅಂದಹಾಗೆ ರಾಹುಲ್ ಅವರು ಶಾರುಖ್ ಬಳಿ, ರಾಜಕಾರಣಿಗಳಿಗೆ ನೀವು ಏನಾದರೂ ಸಲಹೆ ನೀಡೋದಾದ್ರೆ ಯಾವುದರ ಬಗ್ಗೆ ಸಲಹೆ ನೀಡಲು ಇಷ್ಟಪಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಶಾರುಖ್ ಖಾನ್ ಅವರು ಕೊಟ್ಟಂತಹ ರಿಪ್ಲೈ ವೈರಲ್ ಆಗಿದೆ. ಅದೇನೆಂದರೆ ಇದಕ್ಕೆ ಉತ್ತರಿಸಿದ ಶಾರುಖ್ ಇದೊಂದು ಸಿಂಪಲ್ ಪ್ರಶ್ನೆ ಎಂದು ನಿರಾಳ ಭಾವ ತೋರಿಸಿ ಸಭಿಕರೆಲ್ಲ ಜೋರಾಗಿ ನಗುವಂತೆ ಮಾಡಿದರು. ಬಳಿಕ ನಾನು ಸುಳ್ಳು ಹೇಳುತ್ತೇನೆ. ನಟಿಸುತ್ತೇನೆ. ಜೀವನಕ್ಕಾಗಿ ಅಭಿನಯಿಸುತ್ತೇನೆ. ನಾನು ನಟ. ನಾನು ಎಲ್ಲವನ್ನೂ ತೋರಿಸುತ್ತೇನೆ. ನನ್ನಲ್ಲಿ ನೋಡಿದ್ದೆಲ್ಲ ನಿಜವಲ್ಲ ಎಂದಿದ್ದಾರೆ.

ಬಳಿಕ ಮಾತನಾಡಿದ ಅವರು ರಾಜಕಾರಣಿಗಳು ಟೇಬಲ್ ಅಡಿಯಲ್ಲಿ ಹಣವನ್ನು ಎಂದಿಗೂ ತೆಗೆದುಕೊಳ್ಳಬಾರದು. ದೇಶವನ್ನು ನಡೆಸುವ ನಾಯಕರ ಬಗ್ಗೆ ನನಗೆ ಅಪಾರ ಗೌರವ ಇದೆ. ದೇಶವನ್ನು ಮನಸಿನಲ್ಲಿಟ್ಟು ಅವರು ದೇಶ ನಡೆಸುತ್ತಾರೆ. ಇದು ನಿಜಕ್ಕೂ ನಿಸ್ವಾರ್ಥವಾಗಿರುವಂತಹ ಸೇವೆ. ನಾವು ಲಂಚ ಪಡೆದುಕೊಳ್ಳುವುದು ಬೇಡ ಎಂದಿದ್ದಾರೆ.

ನಾವಿದನ್ನು ಸರಿಯಾಗಿ ಮಾಡಿದರೆ ನಾವೆಲ್ಲರೂ ಸಂಪಾದಿಸಬಹುದು. ನಾವೆಲ್ಲರೂ ಖುಷಿಯಾಗಿರಬಹುದು. ನಾವೆಲ್ಲರೂ ಸಂತೋಷದಿಂದ ಈ ದೇಶ ಹೆಮ್ಮೆಪಡುವಂತೆ ಮಾಡಬಹುದು ಎಂದಿದ್ದಾರೆ. ಎಲ್ಲಾ ರಾಜಕಾರಣಿಗಳಿಗೆ ನನ್ನ ಸಲಹೆ ಏನೆಂದರೆ ಪ್ರಾಮಾಣಿಕವಾಗಿರಿ ಎಂದು ಶಾರುಖ್ ಖಾನ್ ಅವರು ತಮ್ಮ ಮಾತು ಕೊನೆಗೊಳಿಸಿದ್ದಾರೆ. ನಟ ಕೊಟ್ಟ ಸಲಹೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Leave A Reply

Your email address will not be published.