Pulwama Attack: ಪುಲ್ವಾಮ ಧಾಳಿಗೆ ಮೋದಿ ಸರ್ಕಾರವೇ ಕಾರಣ, ಈ ಬಗ್ಗೆ ಮೋದಿ ಹತ್ತಿರ ಕೇಳಿದಾಗ ನನಗೆ ಮೌನವಾಗಿರುವಂತೆ ಸೂಚಿಸಿದ್ರು! ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಜಮ್ಮು-ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್!
Pulwama Attack : ದೇಶವೇ ಮರುಗುವಂತಹ ಪುಲ್ವಾಮ ಧಾಳಿ(Pulwama Attack) ನಡೆದು 4 ವರ್ಷಗಳು ಕಳೆದಿದ್ದರು, ಇಂದಿಗೂ ಅದು ಬೂದಿ ಮುಚ್ಚಿದ ಕೆಂಡದಂತಿಯೇ ಅಗಾಗ ಹೊಗೆಯಾಡುತ್ತಿರುತ್ತದೆ. ಸಂಸತ್ತಿನಲ್ಲಾಗಲಿ, ಮಾಧ್ಯಮಗಳೆದುರಾಗಲಿ ಅದರ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ಕೆಣಕುತ್ತಲೇ ಇರುತ್ತದೆ. ಅಂತೆಯೇ ಇದೀಗ ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್(Styapal Mallik) ಈ ಧಾಳಿ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದು, ಪ್ರಧಾನಿ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಫೆಬ್ರವರಿ 14, 2019 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಮೃತಟ್ಟಿದ್ದು, ಈ ಒಂದು ದುರ್ಘಟನೆಗೆ ಇಡೀ ದೇಶವೇ ಮಮ್ಮಲ ಮರುಗಿತ್ತು. ಅಂದಹಾಗೆ ಆ ಘಟನೆ ನಡೆದು ನಿನ್ನೆಗೆ 4 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಪ್ರಧಾನಿ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಪುಲ್ವಾಮಾ ಘಟನೆಯ ಆಪಾದಿತ ಲೋಪಗಳ ಬಗ್ಗೆ ಮೌನವಾಗಿರಲು ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಶುಕ್ರವಾರ ದಿನ ಕರಣ್ ಥಾಪರ್ ಅವರಿಗೆ ದಿ ವೈರ್ ವೆಬ್ಸೈಟ್ಗೆ ಆಗಸ್ಟ್ 2018 ರಿಂದ ಅಕ್ಟೋಬರ್ 2019 ರವರೆಗೆ ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿದ್ದ ಸತ್ಯಪಾಲ್ ಮಲಿಕ್ ಅವರಿಗೆ ನೀಡಿದ ಸಂದರ್ಶನದಲ್ಲಿ “ಅಂದು ರಕ್ಷಣಾ ಇಲಾಖೆಯು ತನ್ನ ಸಿಬ್ಬಂದಿಯನ್ನು ಸಾಗಿಸಲು ಸಿಆರ್ಪಿಎಫ್ 5 ವಿಮಾನಗಳನ್ನು ಕೇಳಿತ್ತು, ಆದರೆ ಕೇಂದ್ರ ಗೃಹ ಸಚಿವಾಲಯ ವಿಮಾನಗಳನ್ನು ಕಳಿಸಲು ನಿರಾಕರಿಸಿತ್ತು ಎಂದು ಹೇಳಿದ್ದಾರೆ. ಗೃಹ ಸಚಿವಾಲಯದ ಬೇಜವಾಬ್ದಾರಿಯಿಂದ ಬೆಂಗಾವಲು ಪಡೆ ರಸ್ತೆಯ ಮೂಲಕ ಚಲಿಸುವಂತಾಯ್ತು ಮತ್ತು ಮಾರಣಾಂತಿಕ ಭಯೋತ್ಪಾದಕ ಹೊಂಚುದಾಳಿಯ ಗುರಿಯಾಗಿದೆ. ಇದು ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯ ಹತ್ಯೆಗೆ ಕಾರಣವಾಯಿತು” ಎಂದು ಹೇಳಿದ್ದಾರೆ.
ಒಂದು ವೇಳೆ, ಅವರು ನನ್ನನ್ನು ಕೇಳಿದ್ದರೆ, ನಾನು ಅವರಿಗೆ ವಿಮಾನವನ್ನು ನೀಡುತ್ತಿದ್ದೆ. ಹೇಗಾದರೂ ಸರಿ ಕೊಡುತ್ತಿದ್ದೆ. ಅವರಿಗೆ ಐದು ವಿಮಾನಗಳು ಬೇಕಾಗಿದ್ದವು. ಅದನ್ನು ಒದಗಿಸಲಾಗಿಲ್ಲ. ಅಲ್ಲದೆ, ಅದೇ ಸಂಜೆ ನಾನು (ಇದನ್ನು) ಪ್ರಧಾನ ಮಂತ್ರಿಯವರಿಗೆ ಹೇಳಿದೆ. ನಮ್ಮ ತಪ್ಪಿನಿಂದ ಇದು ಸಂಭವಿಸಿದೆ. ನಾವು ವಿಮಾನವನ್ನು ಒದಗಿಸಿದ್ದರೆ ಹೀಗಾಗುತ್ತಿರಲಿಲ್ಲ ಎಂದು ನಾನು ಹೇಳಿದೆ. ಅವರು ನನಗೆ ಮೌನವಾಗಿರಲು ಹೇಳಿದರು. ಅಲ್ಲದೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಮೌನವಾಗಿರುವಂತೆ ಹೇಳಿದ್ರು ಎಂದೂ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಹಾಗೆ, ಪಾಕಿಸ್ತಾನದ ಮೇಲೆ ಸಂಪೂರ್ಣ ಜವಾಬ್ದಾರಿಯನ್ನು ಹೊರಿಸಲಾಗುತ್ತಿದೆ ಎಂದು ನಾನು ಆಗಲೇ ಭಾವಿಸಿದೆ ಎಂದು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬಲ್ಲೆ. ಆದ್ದರಿಂದ ನಾನು ಮೌನವಾಗಿರಬೇಕಾಗುತ್ತದೆ ಎಂದುಕೊಂಡೆ” ಹೇಳಿಕೊಂಡಿದ್ದಾರೆ.
ಹೀಗಾಗಿ ಫೆಬ್ರವರಿ 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕಳೆದ ಲೋಕಸಭೆ ಚುನಾವಣೆಯ ಪೂರ್ವದಲ್ಲಿ ತನ್ನ ಪ್ರಮುಖ ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ಒಂದನ್ನಾಗಿ ಮಾಡಿಕೊಂಡಿದ್ದ ಕಾಂಗ್ರೆಸ್, ಸತ್ಯಪಾಲ್ ಮಲಿಕ್ ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಂತೆ ಮೋದಿ ಸರ್ಕಾರಕ್ಕೆ ಆಗ್ರಹಿಸಿದೆ.
ಇದರೊಂದಿಗೆ ಎನ್ಎಸ್ಎ ಅಜಿತ್ ದೋವಲ್ ಮತ್ತು ಆಗಿನ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಯಾವ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ? ಇಷ್ಟು ದೊಡ್ಡ ಭಯೋತ್ಪಾದನಾ ದಾಳಿಯ ನಂತರ, ಪ್ರಧಾನಿ ಮೋದಿಯವರು ರಾಜ್ಯಪಾಲರನ್ನು ಏಕೆ ಸುಮ್ಮನಿರಿ ಎಂದು ಕೇಳಿದರು? ದೇಶದ್ರೋಹದ ಪ್ರಮಾಣಪತ್ರಗಳನ್ನು ನೀಡುವ ಜನರು ಇದು ದೇಶದ್ರೋಹವೋ ಅಲ್ಲವೋ ಎಂದು ಉತ್ತರಿಸಬೇಕಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.