IPL Match : RCB vs CSK ಪಂದ್ಯದ ಟಿಕೆಟ್’ಗಾಗಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳ ನೂಕು ನುಗ್ಗಲು, ಲಾಠಿ ಚಾರ್ಜ್

IPL Match : ಬೆಂಗಳೂರು: ಐಪಿಎಲ್ 2023 ( IPL Match) ರ ನಾಳಿನ ರಾಯಲ್ ಚಾಲೆಂಜರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ (RCB vs CSK) ನಡುವಿನ ಪಂದ್ಯಕ್ಕಾಗಿ ಟಿಕೆಟ್ ಖರೀದಿಸುವ ವೇಳೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನೂಕುನುಗ್ಗಲು ಉಂಟಾಗಿ, ಕೊನೆಗೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2023) ಸೋಮವಾರ (ನಾಳೆ, ಏ. 17) ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಐಪಿಎಲ್​ನ ಬದ್ಧವೈರಿಗಳು ಎಂದೇ ಹೇಳಲಾಗುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ತಂಡಗಳ ನಡುವೆ ಆತ ನಡೆಯಲಿದೆ. ಈ ಪಂದ್ಯ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದು, ಈಗಾಗಲೇ ಈ ಪಂದ್ಯದ ಆನ್​ಲೈನ್ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್ ಆಗಿದೆ.

ಹೀಗಾಗಿ ಆಫ್ ಲೈನ್ ನಲ್ಲಿ ಮೈದಾನದಲ್ಲಿ ಟಿಕೆಟ್ ಖರೀದಿಸಲು ಅಭಿಮಾನಿಗಳ ಸಾಗರವೇ ಸ್ಟೇಡಿಯಂಗೆ ಇಂದು ಹರಿದು ಬಂದಿದ್ದು, ಈ ವೇಳೆ ನೂಕು ನುಗ್ಗಲು ಸಂಭವಿಸಿದೆ. ಪರಿಸ್ಥಿತಿ ನಿಭಾಯಿಸಲು ಇಂದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB vs CSK ನಡುವಣ ಪಂದ್ಯದ ಟಿಕೆಟ್ ಇಂದು ಬಾಕ್ಸ್‌ ಆಫೀಸ್​ನಲ್ಲಿ ನೀಡುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಒಂದು ವೈರಲ್ ಆಗಿತ್ತು. ಈ ವೈರಲ್ ಆದ ಪೋಸ್ಟ್ ನೋಡಿ ರಾತ್ರಿಯೆ ಸ್ಟೇಡಿಯಂ ಬಳಿ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸೇರಿದ್ದರು. ಆದರೆ, ರಾತ್ರಿಯೇ ಬಂದು ಟಿಕೆಟ್​ಗಾಗಿ ಕಾದು ನಿಂತಿದ್ದ ಆರ್​ಸಿಬಿ ಅಭಿಮಾನಿಗಳಿಗೆ ಈಗ ನಿರಾಸೆ ಆಗಿದೆ. ಟಿಕೆಟ್ ಆನ್ಲೈನ್ ನಲ್ಲಿ ಈಗಾಗಲೇ ಸೋಲ್ಡ್ ಔಟ್ ಆಗಿದೆ ಎಂದು ಮ್ಯಾನೇಜ್ಮೆಂಟ್ ಹೇಳಿಕೊಂಡಿದೆ.

ಟೆಕೆಟ್ ಇಲ್ಲ ಎಂಬ ವಿಷಯ ತಿಳಿದು ಅಭಿಮಾನಗಳು ಆಕ್ರೋಶಗೊಂಡಿದ್ದಾರೆ. ಏಕಾಏಕಿ ಸ್ಟೇಡಿಯಂಗೆ ನುಗ್ಗಲು ಯತ್ನಿಸಿದ್ದಾರೆ. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಮೂರು ವರ್ಷಗಳ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯಗಳು ನಡೆಯುತ್ತಿವೆ. ಅದರಿಂದಾಗಿ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಕುದುರಿದೆ. ಶನಿವಾರ ನಡೆದ ಆರ್​ಸಿಬಿ ಹಾಗೂ ಡೆಲ್ಲಿ ಪಂದ್ಯದ ಟಿಕೆಟ್ ಕೂಡ ಹೀಗೇ ಸೋಲ್ಡ್ ಔಟ್ ಆಗಿತ್ತು. ಟಿಕೆಟ್ ಸಿಗದೆ ಆಕ್ರೋಶಗೊಂಡ ಅಭಿಮಾನಿಗಳು ಸ್ಟೇಡಿಯಂಗೆ ನುಗ್ಗಲು ಯತ್ನಿಸಿದ್ದಾರೆ. ಇದರಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

Leave A Reply

Your email address will not be published.