Shocking News: ಫೋನ್ ಬ್ಯಾಟರಿ ಕಡಿಮೆ ಇದ್ದಾಗ ಕ್ಯಾಬ್ ಬುಕ್ ಮಾಡಿದ್ರೆ ಬೆಲೆ ಹೆಚ್ಚಾಗುತ್ತಂತೆ! ಇಲ್ಲಿದೆ ನೋಡಿ ಸಾಕ್ಷಿ ಸಮೇತ ಶಾಕಿಂಗ್ ರಿಪೋರ್ಟ್

Cab fare: ನೀವು ಉಬರ್ ಕ್ಯಾಬ್ ಬುಕ್ ಮಾಡುವಾಗ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಕಡಿಮೆ ಇರುತ್ತದೆಯಾ? ಇಂತ ಸಮಯದಲ್ಲೇನಾದರೂ ನೀವು ಹೆಚ್ಚು ಹಣವನ್ನು ಪಾವತಿಸಿದ್ದು ನೆನಪಿದೆಯಾ ಅಥವಾ ಗಮನಕ್ಕೆ ಬಂದಿದೆಯಾ? ಅಯ್ಯೋ ಇದೇನು ವಿಚಿತ್ರ ಪ್ರಶ್ನೆ ಕೇಳ್ತಿದ್ದಾರೆ ಅಂತಾ ಯೋಚಿಸ್ತಿದ್ದೀರಾ? ಇದನ್ನು ಕೇಳಿ ನಿಮಗೆ ಸ್ವಲ್ಪ ಕಸಿವಿಸಿ ಆಗಬಹುದು. ಆದರೆ ಇಂತಹದೊಂದು ಆರೋಪವನ್ನು ಬೆಲ್ಜಿಯನ್ ಪತ್ರಿಕೆಯೊಂದು ವರದಿ ಮಾಡಿದೆ.

 

ಹೌದು, ಬೆಲ್ಜಿಯನ್ ದೇಶದ ‘ಡೆರ್ನಿಯರ್ ಹ್ಯೂರ್’ ಎಂಬ ಪತ್ರಿಕೆಯು ಇಂತಹ ಒಂದು ವರದಿಯನ್ನು ಪ್ರಕಟಿಸಿದ್ದು, ನಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದ್ದ ವೇಳೆ ಉಬರ್ ಕ್ಯಾಬ್ ಬುಕ್ಕಿಂಗ್ ದರವನ್ನು (Cab fare) ಹೆಚ್ಚಿಸುತ್ತದೆ. ಸ್ಮಾರ್ಟ್‌ಫೋನಿನಲ್ಲಿ ಬ್ಯಾಟರಿ ಶಕ್ತಿ ಕಡಿಮೆ ಇದ್ದಷ್ಟು ಕ್ಯಾಬ್ ದರಗಳು ಹೆಚ್ಚಾಗುತ್ತವೆ. ಈ ಮೂಲಕ ಉಬರ್ ಸಂಸ್ಥೆ ಜನರಿಗೆ ಮೋಸ ಮಾಡುತ್ತಿದೆ ಎಂಬ ಅರ್ಥದಲ್ಲಿ ಸಾಕ್ಷಿಯುತ ವರದಿಯೊಂದನ್ನು ಮಾಡಿದೆ. ಇದರಿಂದ ಉಬರ್ ಸಂಸ್ಥೆ ತನ್ನ ಗ್ರಾಹಕರ ಸಂಕಷ್ಟದ ಸ್ಥಿತಿಯನ್ನು ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆಯಾ ಎಂಬ ಅನುಮಾನ ಕೂಡ ಮೂಡಿದೆ.

ಅಂದಹಾಗೆ ಈ ಮೊದಲೇ ಪತ್ರಿಕೆಯು ಈ ಕುರಿತು ಅನುಮಾನ ವ್ಯಕ್ತಡಿಸಿತ್ತು. ಅದಕ್ಕಾಗಿ, ಈ ಪತ್ರಿಕೆಯವರು ಬ್ರಸೆಲ್ಸ್‌ನಲ್ಲಿರುವ ತಮ್ಮ ಕಚೇರಿಯಿಂದ ನಗರ ಕೇಂದ್ರದಲ್ಲಿರುವ ಸ್ಥಳಕ್ಕೆ ಎರಡು ಫೋನ್‌ಗಳ ಮೂಲಕ ಒಂದೇ ಸಮಯದಲ್ಲಿ ಕ್ಯಾಬ್ ಬುಕ್ ಮಾಡಿದ್ದಾರೆ. ಈ ವೇಳೆ ಒಂದು ಫೋನ್ 84 ಪ್ರತಿಶತ ಮತ್ತು ಇನ್ನೊಂದು ಫೋನ್ 12 ಪ್ರತಿಶತ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದ ಫೋನ್ ಗಳಿಂದ ಉಬರ್ ಕ್ಯಾಬ್ ಬುಕ್ ಮಾಡಲಾಯಿತು.

ವಿಚಿತ್ರ ಎಂದರೆ ಒಂದೇ ಸಮಯದಲ್ಲಿ 12 ಪ್ರತಿಶತ ಸಾಮರ್ಥ್ಯದ ಬ್ಯಾಟರಿ ಇರುವ ಫೋನ್‌ಗಳಲ್ಲಿ 17.56 ಯುರೋ (1,585 ರೂ.) ದರ ವಿಧಿಸಲಾಗಿದ್ದರೆ, ಇತ್ತ 84 ಪ್ರತಿಶತ ಬ್ಯಾಟರಿ ಹೊಂದಿರುವ ಫೋನ್‌ನಲ್ಲಿ ಅದೇ ದೂರದ ಪ್ರಯಾಣಕ್ಕೆ 16.6 ಯುರೋ (1,498 ರೂ.) ದರ ಕಂಡುಬಂದಿದೆ. ಇದನ್ನು ಸಾಕ್ಷಿ ಸಮೇತ ಪ್ರಕಟಿಸಿರುವ ಪತ್ರಿಕೆಯು, ಬೆಲೆ ನಿರ್ಧರಿಸಲು ಬ್ಯಾಟರಿ ಮಟ್ಟದಂತಹ ಬಳಕೆದಾರರ ವೈಯಕ್ತಿಕ ಡೇಟಾವನ್ನು ಬಳಸುವ ನೈತಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿಸಿದೆ.

ಉಬರ್ ಫೋನ್‌ ಮೇಲೆ ನಿಯಂತ್ರಣ ಹೊಂದುವ ಮೂಲಕ ತಂತ್ರಜ್ಞಾನವನ್ನು ಅಪಾಯಕಾರಿಯಾಗಿ ಬಳಸಿಕೊಳ್ಳುತ್ತಿರಬಹುದು. ಈ ಮೂಲಕ ಬಳಕೆದಾರರನ್ನು ವಂಚಿಸುತ್ತಿರಬಹುದು ಎಂದು ಹೇಳಿದೆ. ಆದರೆ, ಇತ್ತ ಉಬರ್ ಮಾತ್ರ ಬೆಲೆಯನ್ನು ಲೆಕ್ಕಾಚಾರ ಮಾಡಲು ಫೋನ್‌ನ ಬ್ಯಾಟರಿ ಮಟ್ಟವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಬರ್ ಸಂಸ್ಥೆ ಬಳಕೆದಾರರ ಬ್ಯಾಟರಿಯನ್ನು ಅಳೆಯಲು ಅಪ್ಲಿಕೇಶನ್‌ಗೆ ಸಾಧ್ಯವಾಗುವುದಿಲ್ಲ. ‘ಉಬರ್ ಮೂಲಕ ಬುಕ್ ಮಾಡಲಾದ ಟ್ರಿಪ್‌ಗಳಿಗೆ ಅನ್ವಯವಾಗುವ ಡೈನಾಮಿಕ್ ಬೆಲೆಯನ್ನು ರೈಡ್‌ಗಳಿಗೆ ಅಸ್ತಿತ್ವದಲ್ಲಿರುವ ಬೇಡಿಕೆ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ಚಾಲಕರ ಪೂರೈಕೆಯಿಂದ ನಿರ್ಧರಿಸಲಾಗುತ್ತದೆ” ಎಂದು ಹೇಳಿದೆ.

ಆದರೆ, ಬಳಕೆದಾರರ ಫೋನ್‌ನ ಬ್ಯಾಟರಿ ಅವಧಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಉಬರ್ ಸಂಸ್ಥೆಯ ಮೇಲೆ ಆರೋಪಿಸುತ್ತಿರುವುದು ಇದೇ ಮೊದಲಲ್ಲ ಎಂಬುದನ್ನು ಸಹ ಇಲ್ಲಿ ಗಮನಿಸಬೇಕು. 2016 ರಲ್ಲಿ ಉಬರ್ ಕಂಪನಿಯ ಆರ್ಥಿಕ ಸಂಶೋಧನೆಯ ಮಾಜಿ ಮುಖ್ಯಸ್ಥ ಕೀತ್ ಚೆನ್ ಅವರು ಕಡಿಮೆ ಬ್ಯಾಟರಿ ಮಟ್ಟವನ್ನು ಹೊಂದಿರುವ ಜನರು ಹೆಚ್ಚು ಬೆಲೆ ಪಾವತಿಸಲು ಸಿದ್ಧರಿದ್ದಾರೆ ಎಂದು ಕಂಪನಿಯು ಕಂಡುಕೊಂಡಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Woman married Bhaiya: ಭಯ್ಯಾ ಭಯ್ಯಾ ಎನ್ನುತ್ತಲೇ ಆತನ ಮಗುವಿಗೆ ಜನ್ಮ ನೀಡಿದ ಮಹಿಳೆ! ವಿಡಿಯೋ ನೋಡಿ ಬೆರಗಾದ ಸೋಷಿಯಲ್ಸ್!

Leave A Reply

Your email address will not be published.