Honey Trap : ಅನಾರೋಗ್ಯ ಎಂದ ಮಹಿಳೆಯ ನೋಡಲು ಹೋದ ಡಾಕ್ಟರ್ ಗೆ ಕಾದಿತ್ತು ಬಿಗ್ ಶಾಕ್!
Honey Trap : “ವೈದ್ಯೋ ನಾರಾಯಣ ಹರಿ” ಎಂಬುದನ್ನು ನಾವು ಎಲ್ಲರೂ ಕೇಳಿದ್ದೇವೆ. ಏನೇ ತೊಂದರೆಯಾದರೂ ವೈದ್ಯರ ಬಳಿ ಕೇಳಿ ಸಲಹೆ ಪಡೆಯುತ್ತಾರೆ ಆಗ ರೋಗಿಗಳು ಹಣವನ್ನು ಪಾವತಿಸಿ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲಿ ರೋಗಿಯೇ (patient) ವೈದ್ಯನಿಂದ(doctor) ಹಣವನ್ನು ವಸೂಲಿ ಮಾಡಿದ್ದಾಳೆ. ಇದನ್ನು ಕೇಳಿದ್ರೆ ಎಲ್ಲರೂ ಬೆಚ್ಚಿ ಬೀಳೋದಂತು ನಿಜ. ಅದೇನಪ್ಪಾ ಅಂದ್ರೆ.
ಮಹಿಳೆಯು ಚಿಕಿತ್ಸೆಗಾಗಿ ಮೊದಲ ಬಾರಿಗೆ ವೈದ್ಯರನ್ನು ಭೇಟಿಯಾದ ಬಳಿಕ ತನಗೆ ತುಂಬಾನೇ ಅನಾರೋಗ್ಯದ ಸಮಸ್ಯೆ ಇದೆ ಹಾಗಾಗಿ ಪಣಂಪಳ್ಳಿ (panampally) ನಗರದಲ್ಲಿರುವ ತನ್ನ ಮನೆಗೆ ಬಂದು ನೋಡಬೇಕು ಎಂದು ವೈದ್ಯರಲ್ಲಿ ಮಹಿಳೆ ಕೇಳಿಕೊಂಡಾಗ. ರೋಗಿಯ ಒಪ್ಪಿಗೆಯ ಮೇರೆಗೆ ವೈದ್ಯರು ಅವಳ ಮನೆಗೆ ಧಾವಿಸಿ ಚಿಕಿತ್ಸೆಯನ್ನು ನೀಡುತ್ತಿರುವಾಗ. ಮಹಿಳೆ ಮತ್ತು ಅವಳ ಸ್ನೇಹಿತನೊಬ್ಬ ವೈದ್ಯನ ಮೇಲೆ ದೊಡ್ಡ ಜೇನು ಬಲೆಯನ್ನೇ(Honey trap) ಹಾಸಿದ್ದರು. ಅದೇನೆಂದರೆ, ಈ ಇಬ್ಬರು ವೈದ್ಯರ ಬಳಿ ತನ್ನ ಮೊಬೈಲ್ನಲ್ಲಿ(mobile) ತೆಗೆದ ಖಾಸಗಿ ಚಿತ್ರಗಳನ್ನು ತೋರಿಸಿ ಅವರನ್ನು ಬ್ಲಾಕ್ಮೇಲ್ (blackmail)ಮಾಡಿದ್ದಾರೆ. ಹಾಗೆಯೇ ವೈದ್ಯನ ಕಾರು ಮತ್ತು 4 ಸಾವಿರ ರೂಪಾಯಿಯನ್ನು ಕೊಡಬೇಕು ಎಂದು ಬ್ಲಾಕ್ ಮೇಲ್ ಮಾಡಿ ಹಣವನ್ನು ಕಸಿದುಕೊಂಡಿದ್ದಾರೆ.
ಮರುದಿನ ಮಹಿಳೆಯು ಕಾರನ್ನು ಹಿಂತಿರುಗಿಸುತ್ತೇವೆ ಆದರೆ ನಮಗೆ 5 ಲಕ್ಷ ರೂಪಾಯಿಗಳನ್ನು ನೀನು ನೀಡಬೇಕು ಎಂದು ಬೇಡಿಕೆ ಇಟ್ಟಾಗ ವೈದ್ಯರು ಎರ್ನಾಕುಲಂ (Ernakulam)ಸೌತ್ ಪೊಲೀಸ್ ಠಾಣೆಯಲ್ಲಿ(police station) ದೂರು ದಾಖಲಿಸಿದರು. ಬಳಿಕ ದೂರಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ಹನಿಟ್ರ್ಯಾಪ್ ಬಲೆಗೆ ಬೀಳಿಸಿ 5 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಸ್ನೇಹಿತನೊಬ್ಬನನ್ನು (friend)ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗುಡಲೂರ್ (gudaloor)ಮೂಲದ ನಾಸೀಮಾ ಮತ್ತು ಆಕೆಯ ಸ್ನೇಹಿತ ಮುಹಮ್ಮದ್ ಆಮೀನ್ ಎಂದು ಗುರುತಿಸಲಾಗಿದೆ. ಈ ಘಟನೆ ಏಪ್ರಿಲ್ 5 ರಂದು ನಡೆದಿದೆ.