Lumpy skin disease : ಕರಾವಳಿಯ ಬಿಸಿಲಿಗೆ ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ..! ಈ ಅದ್ಭುತ ನಾಟಿ ಔಷಧಿಗಳನ್ನು ಬಳಸಿ
Lumpy skin disease : ರಾಜ್ಯದೆಲ್ಲೆಡೆ ಚರ್ಮಗಂಟು ರೋಗ ಎಂಬ ಮಹಾರೋಗ ಎಲ್ಲೆಡೆ ಹಬ್ಬಿತಯ್ತಿದ್ದು, ಬೇಸಿಗೆಯ ಬಿರು ಬಿಸಲಿನ ಶಾಖಕ್ಕೆ ದಿನದಿಂದ ದಿನಕ್ಕೆ ಜಾನುವಾರುಗಳ ಜೀವ ಹಿಂಡುತ್ತಿದೆ.. ಇದೀಗ ಹೈನುಗಾರಿಕೆ ನಡೆಸುವ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದೀಗ ರಾಜ್ಯದ ಚಿಕ್ಕಮಗಳೂರು, ತುಮಕೂರು ಸೇರಿದಂತೆ ವಿವಿಧೆಡೆ ಜಾನುವಾರುಗಳಲ್ಲಿ ಹರಡುತ್ತಿರುವುದು ಸುದ್ದಿಯಾಗುತ್ತಿದ್ದ ಬೆನ್ನಲ್ಲೆ ಇದೀಗ ಕರಾವಳಿಯ ಮನೆಗಳ ಜನರಿಗೆ ಆತಂಕ ಸೃಷ್ಟಿ ಮಾಡಿದೆ. ಬಹಳ ಸುಂದರವಾಗಿದ್ದ ರಾಸುಗಳ ಮೈಮೇಲೆ ಈ ವಿಚಿತ್ರ ಗುಳ್ಳೆಗಳನ್ನು ಕಂಡು ತಲೆ ಮೇಲೆ ಕೈ ಇಟ್ಟು ನೋಡುವಂತಹ ದುಸ್ಥಿತಿ ಎದುರಾಗಿದೆ . ಇನ್ನೂ ಮೂಕ ಪ್ರಾಣಿಗಳ ಜೀವ ಹಿಂಡುವ ರೋಗ ನಿಯಂತ್ರಣಕ್ಕೆ ಸತತ ಪ್ರಯತ್ನ ಮಾಡಿದ್ರೂ ಪರಿಹಾರವಾಗುತ್ತಿಲ್ಲ ಒಂದಷ್ಟು ಜನರ ಮಾತಾಗಿದೆ.
ಚರ್ಮಗಂಟು ರೋಗ ಲಕ್ಷಣಗಳೇನು?
ಆರಂಭದಲ್ಲಿ ಇದ್ದಕ್ಕಿದ್ದಂತೆ ದನ-ಕರುಗಳ ಮೈ ಮೇಲೆ ಚರ್ಮಗಂಟು ಕಾಣಿಸಿಕೊಳ್ಳುತ್ತದೆ. ಆ ನಂತರ ಗಾಯ. ಗಾಯದಿಂದ ಕೀವು ಉಂಟಾಗಿ ಜ್ವರದ ಮೂಲಕ ನಿತ್ರಾಣಗೊಳ್ಳುತ್ತಿವೆ. ಚರ್ಮಗಂಟಿನಿಂದ ಹಸು ಮತ್ತು ಕರುಗಳಿಗೆ ಜ್ವರ ಕೂಡ ಕಾಣಿಸಿಕೊಳ್ಳುತ್ತಿದೆ. ವಿಪರೀತ ಜ್ವರಕ್ಕೆ ಕೆಲ ಜಾನುವಾರುಗಳು ಕೂಡ ನಿತ್ರಾಣಗೊಳ್ಳುತ್ತಿವೆ.
ಚರ್ಮಗಂಟು ರೋಗವನ್ನು(Lumpy skin disease) ಲಂಪಸ್ಕಿನ್ ಎಂಬ ಸೊಳ್ಳೆಗಳು ಈ ಕಾಯಿಲೆಯನ್ನು ಹೆಚ್ಚು ಹರಡುತ್ತಿವೆ. ಈ ಕಾಯಿಲೆ ಕಾಣಿಸಿಕೊಂಡ ಜಾನುವಾರುಗಳಿಗೆ ದೇಹದ ಎಲ್ಲಾ ಕಡೆಗಳಲ್ಲೂ ಗಂಟುಗಳು ಕಾಣಿಸಿಕೊಳ್ಳುತ್ತವೆ. ಕೆಲ ಗಂಟುಗಳು ದೊಡ್ಡದಾಗಿ ಕೀವು ತುಂಬಿಕೊಂಡು ನಂತರ ಒಡೆದುಕೊಳ್ಳವ ಮೂಲಕ ಗಾಯಗಾಳಾಗುತ್ತಿವೆ. ಈ ವಿಚಿತ್ರ ಕಾಯಿಲೆಯಿಂದ ಅನ್ನದಾತ ಆತಂಕಗೊಂಡು ಕಂಗಾಲಾಗಿದ್ದಾನೆ.
ಚರ್ಮಗಂಟು ರೋಗನಿಯಂತ್ರಣಕ್ಕೆ ಇಲ್ಲಿದೆ ಮನೆ ಮದ್ದು:
ನಿತ್ಯರಾಸುಗಳ ಕೊಟ್ಟಿಗೆ ಶುಚಿಯಾಗಿಡುವ ಜತೆಗೆ ವೀಳ್ಯದೆಲೆ 100 ಗ್ರಾಂ, ಮೆಣಸು 10 ಗ್ರಾಂ, ಉಪ್ಪು 10 ಗ್ರಾಂ, ಅರ್ಧ ಅಚ್ಚು ಬೆಲ್ಲವನ್ನು ರುಬ್ಬಿ ಉಂಡೆ ಮಾಡಿ ಮೂರರಿಂದ ನಾಲ್ಕು ಉಂಡೆಗಳನ್ನು ದಿನಕ್ಕೆ ಎರಡು ಬಾರಿ ರಾಸುಗಳಿಗೆ ತಿನ್ನಿಸಬೇಕು.
ರಾಸುಗಳ ಮೈಮೇಲೆ ಆದ ಗಾಯಗಳಿಗೆ ಮತ್ತು ಗಂಟುಗಳಿಗೆ 500 ಮಿಲಿ ಎಳ್ಳೆಣ್ಣೆ, 20 ಗ್ರಾಂ ಅರಿಶಿನ ಪುಡಿ, 100 ಗ್ರಾಂ ಮೆಹಂದಿ ಸೊಪ್ಪು, 100 ಗ್ರಾಂ ತುಳಸಿ, 100 ಗ್ರಾಂ ಬೇವಿನ ಸೊಪ್ಪನ್ನು ಮಿಶ್ರಣ ಮಾಡಿಸಿ ಕುದಿಸಿ ನಂತರ ಮೈ ಮೇಲಿನ ಗಂಟುಗಳ ಮೇಲೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಚ್ಚುಬೇಕು
ರಾಸುಗಳು ನಿತ್ರಾಣ ಹೊಂದದಂತೆ ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು
ಇದನ್ನು ಓದಿ : Health tips : ನಿಂಬೆ ನೀರು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ?: ಹೇಗೆಂದು ನಿಮಗೆ ತಿಳಿದಿದೆಯೇ?ಇಲ್ಲಿದೆ ಓದಿ