Basavaraj Bommai : ಮುಖ್ಯಮಂತ್ರಿ ಬೊಮ್ಮಾಯಿ ಬರೋಬ್ಬರಿ 497,000,000 ರೂ. ಆಸ್ತಿವಂತ, ಆದರೆ ಅವರ ಬಳಿ ಸ್ವಂತ ಕಾರು ಇಲ್ಲವಂತೆ !

CM Basavaraj Bommai : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಬಳಿ ಇರುವ ಆಸ್ತಿ ನೋಡಿದರೆ ನಿಮಗೆ ಆಶ್ಚರ್ಯ ಆಗಬಹುದು. ಆದರೆ ಅವರ ಬಳಿ ಯಾವುದೇ ಕಾರು ಇಲ್ಲ. ನನ್ನ ಬಳಿ ಯಾವುದೇ ಸ್ವಂತ ಕಾರು ಇಲ್ಲ ಎಂದು ಬೊಮ್ಮಾಯಿ ಅವರೇ ಸ್ವತಃ ಚುನಾವಣಾ ಆಯೋಗಕ್ಕೆ (Election Commission) ತಿಳಿಸಿದ್ದಾರೆ.

ಇಂದು ಮಧ್ಯಾಹ್ನ ಹಾವೇರಿಯ (Haveri) ಶಿಗ್ಗಾಂವಿಯ ತಹಶೀಲ್ದಾರ್ ಕಚೇರಿಯಲ್ಲಿ ಸಿಎಂ ಬೊಮ್ಮಾಯಿಯವರು ನಾಮಪತ್ರ ಸಲ್ಲಿಸಿದ್ದಾರೆ. ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆಗೂ ಮುನ್ನ ಅವರು ಅಲ್ಲಿನ ಗ್ರಾಮದೇವತೆ ದರ್ಶನ ಪಡೆದು ನಂತರ ಪೂಜೆ ಸಲ್ಲಿಸಿದರು. ಬಳಿಕ ಪುರಸಭೆ ಬಳಿಯ ಕಿತ್ತೂರು ಚನ್ನಮ್ಮ ಮೂರ್ತಿಗೆ ಅವರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಿಎಂಗೆ ಪತ್ನಿ, ಪುತ್ರ ಭರತ್ ಸಾಥ್ ನೀಡಿದರು.

ಸಿಎಂ ಬಳಿ ಆಸ್ತಿ ಎಷ್ಟಿದೆ ಗೊತ್ತ ?
ಸಿಎಂ ಬೊಮ್ಮಾಯಿ ಬಳಿ ಬರೋಬ್ಬರಿ 49.70 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಅದರಲ್ಲಿ 5.98 ಕೋಟಿ ರೂ. (ಅವಿಭಕ್ತ ಕುಟುಂಬದಿಂದ ಬಂದ ಆಸ್ತಿ 1.57 ಕೋಟಿ ರೂ.). ಒಟ್ಟು ಚರಾಸ್ತಿ : 42.15 ಕೋಟಿ ರೂಪಾಯಿ ( ಅದರಲ್ಲಿ ಅವಿಭಕ್ತ ಕುಟುಂಬದಿಂದ ಬಂದ ಆಸ್ತಿ 19.2 ಕೋಟಿ ರೂ.) ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಬೊಮ್ಮಾಯಿ ಅವರು ಹುಬ್ಬಳ್ಳಿಯ ತಾರಿಹಾಳ ಬಳಿ 2022 ರ ಮಾರ್ಚ್‌ 26 ರಂದು 3 ಎಕರೆ ಜಮೀನು ಖರೀದಿಸಿದ್ದಾರೆ. ಒಟ್ಟು 1.50 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದು, ಕೈಯಲ್ಲಿ 3 ಲಕ್ಷ ರೂ. ನಗದು ಇದೆ. ಅವರು ಒಟ್ಟು 5.79 ಕೋಟಿ ರೂ. ಸಾಲ ಮಾಡಿದ್ದಾರೆ. ಅಲ್ಲದೆ ಅವರು ತಮ್ಮ ಪುತ್ರ ಭರತ್‌ಗೆ 14.74 ಲಕ್ಷ ರೂಪಾಯಿಗಳನ್ನು, ಪುತ್ರಿ ಸುಗಣಗೆ 2 ಲಕ್ಷ ರೂ. ಸಾಲ ನೀಡಿದ್ದಾರೆ.

Leave A Reply

Your email address will not be published.