Atiq Ahmed encounter: ಅತೀಕ್ ಅಹ್ಮದ್ ನನ್ನು ಕೊಂದದ್ದು ವೈರತ್ವಕ್ಕೆ ಅಲ್ಲ, ಫೇಮಸ್ ಆಗಲು ತಲೆಗೆ ಬಿದ್ದಿತ್ತು ಗುಂಡು

Atiq Ahmed Encounter: ಮಾಧ್ಯಮದ ಮುಂದೆಯೇ ಗ್ಯಾಂಗ್​ಸ್ಟರ್​, ರಾಜಕಾರಣಿ ಅತೀಕ್ ಅಹ್ಮದ್ (Atiq Ahmed)​ ಮತ್ತು ಅವರ ತಮ್ಮ ಅಶ್ರಫ್​ ಅಹ್ಮದ್​ನನ್ನು ಮಾಧ್ಯಮದವರ ಎದುರಲ್ಲೇ ಹತ್ಯೆ ಮಾಡಲಾಗಿತ್ತು. ಸದ್ಯ, ಈ ಪ್ರಕರಣದಡಿ ಆರೋಪಿತರನ್ನು ಬಂಧಿಸಿರುವ ಖಾಕಿ ಪಡೆಗೆ ರೋಚಕ ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದೆ.

 

ಏಪ್ರಿಲ್ 15ರ ರಾತ್ರಿ ಅತೀಕ್​ ಮತ್ತು ಅಶ್ರಫ್​​ನನ್ನು ಪ್ರಯಾಗ್​ರಾಜ್​​ನ ವೈದ್ಯಕೀಯ ಕಾಲೇಜಿಗೆ ತಪಾಸಣೆಗೆ ಕರೆದೊಯ್ಯುತ್ತಿದ್ದ ಸಂದರ್ಭ ತಾವು ಮಾಧ್ಯಮದವರು ಎಂದು ಹೇಳಿಕೊಂಡು ಬಂದಿದ್ದ ಮೂವರು ದುಷ್ಕರ್ಮಿಗಳು ತಲೆಗೆ ಗುಂಡು ಹಾರಿಸಿದ್ದರು ಎನ್ನಲಾಗಿದೆ. ಅತೀಕ್ ಮತ್ತು ಅಶ್ರಫ್​ಗೆ ಗುಂಡು ಹಾರಿಸುವ ಸಂದರ್ಭದಲ್ಲಿ ಆರೋಪಿಗಳು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು ಎನ್ನಲಾಗಿದೆ. ಫೈರಿಂಗ್ ಮಾಡಿದ ಮೂವರನ್ನೂ ಪೊಲೀಸರು ಸ್ಥಳದಲ್ಲಿಯೇ ಬಂಧಿಸಿದ್ದರು. ಈ ಹತ್ಯೆ (Murder Case)ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲೊವ್ಲೇಶ್‌ ತಿವಾರಿ, ಅರುಣ್‌ ಮೌರ್ಯ ಹಾಗೂ ಸನ್ನಿ ಎಂಬ ಮೂವರನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಆರೋಪಿಗಳು ಕೊಲೆಗೆ ನೈಜ ಕಾರಣವೇನು ಎಂಬ ಸತ್ಯ ಬಾಯಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಲೊವ್ಲೇಶ್‌ ತಿವಾರಿ, ಅರುಣ್‌ ಮೌರ್ಯ ಹಾಗೂ ಸನ್ನಿ ವಿರುದ್ಧ ಸುಮಾರು ಸಣ್ಣಪುಟ್ಟ ಕೇಸ್ ಗಳಿದ್ದು, ಕ್ರಿಮಿನಲ್ ಗಳು ಎಂಬುದು ಮೊದಲೇ ಬಹಿರಂಗವಾಗಿದೆ. ಆದರೆ, ಅತೀಕ್ ಮತ್ತು ಅಶ್ರಫ್ ಅವರಿಗೆ ಗುಂಡು ಹಾರಿಸಲು ಕಾರಣವೇನು ಎಂದು ವಿಚಾರಣೆ ನಡೆಸಿದ ಖಾಕಿ ಪಡೆಗೆ ಆರೋಪಿಗಳು ನಮಗೆ ಪ್ರಸಿದ್ಧಿ ಬೇಕಾಗಿತ್ತು. ಜನಪ್ರಿಯತೆ ಗಳಿಸುವ ಸಲುವಾಗಿ ಅತೀಕ್​ ಮತ್ತು ಅಶ್ರಫ್​​ನನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅತೀಕ್ ಅಹ್ಮದ್​ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ 2004ರಲ್ಲಿ ಸಂಸದರಾಗಿದ್ದರು. 2005ರಲ್ಲಿ ರಾಜುಪಾಲ್ ಹತ್ಯೆಯಲ್ಲಿ ಇವರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದ ಬಳಿಕ ಸಮಾಜವಾದಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. 2005ರಲ್ಲಿ ನಡೆದಿದ್ದ ಬಹುಜನ ಸಮಾಜ ಪಾರ್ಟಿ ಶಾಸಕ ರಾಜು ಪಾಲ್ ಹತ್ಯೆ ಕೇಸ್​​ನಲ್ಲಿ ಆರೋಪಿಗಳಾಗಿರುವ ಅತೀಕ್ ಅಹ್ಮದ್​ ಮತ್ತು ಅಶ್ರಫ್​ ಅಹ್ಮದ್​ 2017ರಿಂದಲೂ ಸೆರೆಮನೆ ವಾಸ ಖಾಯಂ ಆಗಿತ್ತು. 2017ರಿಂದ ಸೆರೆಮನೆವಾಸದಲ್ಲಿದ್ದ ಇವರನ್ನು ಗುಜರಾತ್​ನ ಸಬರಮತಿ ಜೈಲಲ್ಲಿ ಇರಿಸಲಾಗಿತ್ತು. ಉಮೇಶ್ ಪಾಲ್​ ಹತ್ಯೆಯ ಬಳಿಕ ಕೋರ್ಟ್​ನಲ್ಲಿ ವಿಚಾರಣೆಗಾಗಿ ಪ್ರಯಾಗ್​ರಾಜ್​ಗೆ ಆಗಾಗ ಕರೆದುಕೊಂಡು ಬರಲಾಗುತ್ತಿತ್ತು ಎನ್ನಲಾಗಿದೆ. ಈ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಉಮೇಶ್​ ಪಾಲ್​ ಅಪಹರಣ ಕೇಸ್​​ನಲ್ಲಿ ಇತ್ತೀಚೆಗೆ ಅತೀಕ್ ಅಹ್ಮದ್​ಗೆ ಪ್ರಯಾಗ್​ರಾಜ್ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿದೆ.

ಉಮೇಶ್ ಪಾಲ್​ ಹತ್ಯೆಯಲ್ಲಿ ಕೂಡ ತನ್ನ ಕೈವಾಡವಿದೆ ಎಂದು ಅತೀಕ್ ಅಹ್ಮದ್​ ಏಪ್ರಿಲ್​ 12ರಂದು ಪೊಲೀಸರಿಗೆ ಲಿಖಿತವಾಗಿ ಮಾಹಿತಿ(Written Statment) ನೀಡಿದ್ದ ಎನ್ನಲಾಗಿದೆ. ಇದಲ್ಲದೇ, ಅತೀಕ್ ಅಹ್ಮದ್ ಲಷ್ಕರೆ ತೊಯ್ಬಾ ಉಗ್ರಸಂಘಟನೆ, ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್​ಐ ಜೊತೆಗೂ ಕೂಡ ಸಂಪರ್ಕವಿರುವ ಬಗ್ಗೆ ತಪ್ಪು ಒಪ್ಪಿಕೊಂಡಿದ್ದ ಎನ್ನಲಾಗಿದೆ. ಉತ್ತರ ಪ್ರದೇಶದ ಪೊಲೀಸರು ಆತನನ್ನು ಎನ್​ಕೌಂಟರ್(Atiq Ahmed Encounter) ಮಾಡಿಬಿಡುತ್ತಾರೆ ಎಂಬ ಭಯದಲ್ಲಿದ್ದ ಎನ್ನಲಾಗಿದೆ.

ಇದನ್ನೂ ಓದಿ: Jagadish Shettar :ಟಿಕೆಟ್ ವಂಚಿತ ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ BIG BIG ಆಫರ್ !

Leave A Reply

Your email address will not be published.