UP Encounter : ಮಗನ ಮುಖ ನೋಡಲೂ ಸಿಗಲಿಲ್ಲ ಅವಕಾಶ, ಅಂತ್ಯಕ್ರಿಯಾ ಬೆನ್ನಲ್ಲೇ ಅತೀಕ್ ಅಹ್ಮದ್ ಹತ – ದುಷ್ಟ ಬುದ್ದಿಗೆ ಕುಟುಂಬವೇ ಸರ್ವ ನಾಶ

Asad Ahmed Funeral : ಇದೀಗ ಗ್ಯಾಂಗ್‌ಸ್ಟರ್ ಅತೀಕ್ ಅಹಮದ್ ಅಪರಿಚಿತರಿಂದ ಹತ್ಯೆ ಆಗಿದೆ. ಆತನ ಮಗ ಅಸದ್ ಮೊನ್ನೆ ಗುರುವಾರ ಪೊಲೀಸರ ಎನ್‌ಕೌಂಟರ್‌ನಲ್ಲಿ (Encounter) ಅಸುನೀಗಿದ್ದ. ಮೂಲತಹ ಅಹ್ಮದ್ ಉತ್ತರ ಪ್ರದೇಶದ ಪಾತಕಿ-ರಾಜಕಾರಣಿ, ಸದ್ಯ ತಲೆಗೆ ಗುಂಡು ತಗುಲಿ ಹತ್ಯೆಯಾದ ಅತೀಖ್ ಅಹ್ಮದ್ ಅನುಪಸ್ಥಿತಿಯಲ್ಲಿ ಅವರ ಪುತ್ರ, ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತನಾದ ಗ್ಯಾಂಗ್‌ಸ್ಟರ್ ಅಸದ್ ಅಹ್ಮದ್ ಅಂತ್ಯಕ್ರಿಯೆ (Asad Ahmed Funeral) ಶನಿವಾರ ನಡೆದಿತ್ತು.

 

ತನ್ನ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಶುಕ್ರವಾರ ಅತೀಖ್ ಅನುಮತಿ ಕೋರಿದ್ದ. ಆದರೆ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಕೋರ್ಟ್‌ಗೆ ರಜೆ ಇತ್ತು. ಹೀಗಾಗಿ ಅನುಮತಿ ದೊರೆಯುವ ಮೊದಲೇ ಅಸದ್ ಅಂತ್ಯಕ್ರಿಯೆ ಪೂರ್ಣಗೊಂಡಿತು. ಅದಲ್ಲದೆ ಅಂದು ಮಾಧ್ಯಮದವರಿಗೂ ಸಹ ಸ್ಮಶಾನದ ಒಳಗೆ ಪ್ರವೇಶ ನಿರಾಕರಿಸಲಾಗಿತ್ತು. ಈಗ ಮಗನ ಪೊಲೀಸ್ ಎನ್ಕೌಂಟರ್ ಆದ ಬೆನ್ನಲ್ಲೇ ಅಪ್ಪ ಅತೀಕ್ ಮೇಲೆ ಶೂಟ್ ಔಟ್ ನಡೆದು ಹೋಗಿದೆ. ತಲೆಯ ಹಿಂದಿನಿಂದ ನುಗ್ಗಿದ್ದ ಬುಲ್ಲೆಟ್ ಮೆದುಳನ್ನು ಚಿದ್ರ ಮಾಡಿ ಹಾಕಿದೆ.

ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಅಸದ್ ಮತ್ತು ಗುಲಾಮ್ ತಲೆಮರೆಸಿಕೊಂಡಿದ್ದ. ಝಾನ್ಸಿ ಸಮೀಪ ಗುರುವಾರ ಪೊಲೀಸರು ಮತ್ತು ಅಸದ್ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಅಸದ್ ಅಸು ನೀಗಿದ್ದ. ಇನ್ನು ಅತೀಖ್ ಪುತ್ರರ ಪೈಕಿ ಹಿರಿಯನಾದ ಉಮರ್ ಲಕ್ಕೋ ಜೈಲಿನಲ್ಲಿದ್ದಾನೆ. ಎರಡನೆಯವನಾದ ಅಲಿ, ನೈನಿ ಕೇಂದ್ರ ಕಾರಾಗೃಹದಲ್ಲಿ ಹಾಗೂ ಅಜಂ ಮತ್ತು ಅಬನ್ ಪ್ರಯಾಗ್‌ರಾಜ್‌ನ ಬಾಲಾಪರಾಧಿ ಗೃಹದಲ್ಲಿ ಇದ್ದಾನೆ. ಆತನ ಮನೆಯಲ್ಲಿ ಸಾಲು ಸಾಲು ಹತ್ಯೆಗಳು ನಡೆದುಹೋಗಿದೆ. ಒಟ್ಟಾರೆ ಅಪ್ಪನ ದುಷ್ಟ ಬುದ್ದಿಗೆ ಇಡೀ ಕುಟುಂಬ ಸರ್ವನಾಶವಾಗಿದೆ.

ಇತ್ತೀಚೆಗೆ ಮಗ ಅಸಾದ್ ಹತ್ಯೆಯಾದಾಗ ಅತೀಕ್ ಅಹಮದ್ ಬಿಕ್ಕಿ ಬಿಕ್ಕಿ ಅತ್ತಿದ್ದ. ಇದೆಲ್ಲ ತನ್ನಿಂದಲೇ ಆದದ್ದು ಎಂದು ಮಮ್ಮಲ ಮರುಗಿದ್ದ. ತದನಂತರ ಕೋಪಗೊಂಡಿದ್ದ ಆತ, ತಾನು ಜೈಲ್ ನಿಂದ ಹೊರಬಂದ ಕೂಡಲೇ ಮಗನನ್ನು ಎನ್ಕೌಂಟರ್ ಮಾಡಿದ ಪೊಲೀಸರನ್ನು ನೋಡಿಕೊಳ್ಳುತ್ತೇನೆ ಎಂದಿದ್ದ. ಅಷ್ಟರಲ್ಲಿ ಕೈಯಲ್ಲಿ ಹತನಾಗಿ ಹೋಗಿದ್ದಾನೆ ಗ್ಯಾಂಗ್ ಸ್ಟರ್ ಅತೀಕ್ ಅಹಮದ್.

ಆದರೆ ಅಸದ್ ಅಹ್ಮದ್ ಎನ್ಕೌಂಟರ್ ನಕಲಿ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಒವೈಸಿ, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದೀಗ ಅತೀಕ್ ಅಹ್ಮದ್ ಮತ್ತು ಸಹೋದರನ ಹತ್ಯೆ ಪೂರ್ವ ನಿಯೋಜಿತ ಎಂಬ ಆಪಾದನೆ ಕೇಳಿ ಬಂದಿದೆ.

Leave A Reply

Your email address will not be published.