Makeup :ಮೇಕಪ್ ಬಳಸೋ ಮಹಿಳೆಯರೇ ಹುಷಾರ್ : ಸಂಶೋಧನೆಯಲ್ಲಿ ಬಯಲಾಗಿದೆ ಅಚ್ಚರಿಯ ಮಾಹಿತಿ!
Makeup : ಸುಂದರವಾಗಿ ಕಾಣಬೇಕು ಎಂಬುದು ಪ್ರತಿಯೊಂದು ಹೆಣ್ಣಿನ ಕನಸೇ ಸರಿ. ಹೀಗಾಗಿ ತನ್ನ ಅಂದ ಹೆಚ್ಚಿಸಿಕೊಳ್ಳಲು ವಿವಿಧ ಮೇಕಪ್ (Makeup)ಗಳನ್ನು ಬಳಸುತ್ತಾರೆ. ಇಂದು ಅಂತೂ ಮೇಕಪ್ ಬಳಸದೆ ಇರೋ ಹುಡುಗಿಯರೇ ಇಲ್ಲ ಎನ್ನಬಹುದು. ಆದ್ರೆ, ಮೇಕಪ್ ಬಳಸೋ ಹುಡುಗಿಯರೇ, ನೀವು ಮೇಕಪ್ ಬಳಸೋ ಮುಂಚೆಯು ಯೋಚಿಸಬೇಕು.
ಹೌದು. ನಿಮ್ಮ ಅಂದವನ್ನು ಹೆಚ್ಚಿಸಲು ಹೋಗಿ ನಿಮ್ಮ ಸೌಂದರ್ಯವನ್ನೇ ಹಾಳು ಮಾಡಿಕೊಳ್ಳಬೇಕಾದಿತು ಹುಷಾರು. ಹೌದು. ಮೇಕಪ್ ಹಚ್ಚಿಕೊಳ್ಳುವಾಗ ಮೇಕಪ್ ಬ್ರೆಷ್ ಬಳಸೋದು ಕಾಮನ್. ಬ್ಯೂಟಿ ಟಿಪ್ಸ್ಗೆ ಬ್ರಷ್ಗಳು ಮತ್ತು ಸ್ಪಂಜುಗಳನ್ನು ಬಳಸುವಾಗ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಚರ್ಮಕ್ಕೆ ಹಾನಿಯಾಗಬಹುದು.
ಮೇಕಪ್ ಬ್ರಷ್ ಅನ್ನು ಬಳಸಿದರೆ ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಕೊಳಕು ಬ್ರಷ್ ಅನ್ನು ಬಳಸುವುದರಿಂದ ಚರ್ಮಕ್ಕೆ ಹಾನಿಕಾರಕವಾಗಿದೆ. ಕೊಳಕು ಮೇಕಪ್ ಬ್ರಷ್ಗಳು ಎಣ್ಣೆಯುಕ್ತ ಮೇಕಪ್ ಅವಶೇಷಗಳು, ಸತ್ತ ಚರ್ಮದ ಕೋಶಗಳು ಮತ್ತು ಚರ್ಮದ ಸೋಂಕುಗಳು ಮತ್ತು ಅಲರ್ಜಿಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆ.
ಕಾಸ್ಮೆಟಿಕ್ ವಿಜ್ಞಾನಿ ಕಾರ್ಲೆ ಮುಸ್ಲೆಹ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಪೆಕ್ಟ್ರಮ್ ಕಲೆಕ್ಷನ್ನ ಹೊಸ ಸಂಶೋಧನೆಯ ಪ್ರಕಾರ, ಮೇಕಪ್ ಬ್ರಷ್ಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಅವು ನಮ್ಮ ಟಾಯ್ಲೆಟ್ ಸೀಟ್ಗಳಂತೆಯೇ ಬ್ಯಾಕ್ಟೀರಿಯಾವನ್ನು ಆಶ್ರಯಿಸಬಹುದು.
ಈ ಕುರಿತಂತೆ ಎರಡು ಸೆಟ್ ಫೌಂಡೇಶನ್ ಬ್ರಷ್ಗಳ ಅಧ್ಯಯನ ಕೂಡ ನಡೆಸಿದ್ದು, ಒಂದು ಕ್ಲೀನ್ ಮತ್ತು ಇನ್ನೊಂದು ಕೊಳಕು ಎರಡನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ಎರಡೂ ಬ್ರಶ್ಗಳನ್ನು ಹೋಲಿಸಿದಾಗ, ಟಾಯ್ಲೆಟ್ ಸೀಟಿನಿಂದ ತೆಗೆದ ಸ್ವ್ಯಾಬ್ ಅನ್ನು ಕೊಳಕು ಬ್ರಷ್ ಜೊತೆಗೆ ಪರೀಕ್ಷಿಸಲಾಯಿತು. ಈ ವೇಳೆ ಮೇಕಪ್ ಬ್ರಷ್ಗಳು ಟಾಯ್ಲೆಟ್ ಸೀಟ್ಗಳಿಗಿಂತ ಹೆಚ್ಚು ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ ಎಂದು ಕಂಡು ಬಂದಿದೆ. ಹಾಗಾಗಿ ಮೇಕಪ್ ಬ್ರಷ್ ಬಗ್ಗೆ ಕಾಳಜಿ ವಹಿಸುವುದು ಉತ್ತಮ.