Tirumala Darshan Tokens : ಭಕ್ತರ ಗಮನಕ್ಕೆ! ತಿರುಪತಿಯಲ್ಲಿ ಈ ತಪ್ಪು ಮಾಡಬೇಡಿ! ದೇವರ ದರ್ಶನ ಖಂಡಿತ ಸಿಗಲ್ಲ
Tirumala Darshan Tokens : ಚಿನ್ನ, ಬೆಳ್ಳಿ, ವಜ್ರ ವೈಢೂರ್ಯ, ನಗದು ಹಣ, ಅಮೂಲ್ಯ ರತ್ನ ಗಳಿಂದ ಶೋಭಿಸುವ, ಕಲಿಯುಗದ ವೈಕುಂಠ ಎಂದು ಕರೆಯಲ್ಪಡುವ ತಿರುಪತಿಯು ತಿಮ್ಮಪ್ಪನ (Tirupati) ದೇವಸ್ಥಾನ (temple ) ಕ್ಕೆ ಬೇಸಿಗೆ ರಜೆ ಹಿನ್ನೆಲೆ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ತಿರುಮಲಕ್ಕೆ ಹೋಗಲು ಪ್ಲಾನ್ ಮಾಡಿಕೊಂಡಿರುವ ಭಕ್ತರು ಖಂಡಿತವಾಗಿಯೂ ಕೆಲವು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದು ಉತ್ತಮ.
ಈಗಾಗಲೇ ತಿರುಮಲ ದರ್ಶನ್ ಟೋಕನ್‌ಗಳ (Tirumala Darshan Tokens)ವಿಷಯದಲ್ಲಿ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ.
ಅಲಿಪಿರಿಯಿಂದ ಕಾಲ್ನಡಿಗೆಯ ಮೂಲಕ ದೇವರ ದರ್ಶನಕ್ಕೆ ಹೋಗುವ ಭಕ್ತರಿಗೆ ಗಾಲಿ ಗೋಪುರದಲ್ಲಿ ದಿವ್ಯಭಕ್ತರಿಗೆ ಗಾಲಿ ಗೋಪುರದಲ್ಲಿ ದಿವ್ಯ ದರ್ಶನ ಟೋಕನ್‌ಗಳನ್ನು ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಶುಕ್ರವಾರದಿಂದ ದಿವ್ಯ ದರ್ಶನ ಟೋಕನ್‌ಗಳ ವಿತರಣಾ ಕೇಂದ್ರವನ್ನು ಬದಲಾಯಿಸಲಾಗಿದೆ. ಸದ್ಯ ಅಲಿಪಿರಿಯ ಭೂದೇವಿ ಕಾಂಪ್ಲೆಕ್ಸ್‌ನಲ್ಲಿಯೇ ದರ್ಶನದ ಟೋಕನ್ ವಿತರಿಸಲಾಗುತ್ತಿದ್ದು, ಟೋಕನ್ ಪಡೆದ ಭಕ್ತರು ಗಾಲಿ ಗೋಪುರದಲ್ಲಿ ಸ್ಕ್ಯಾನಿಂಗ್ ಮಾಡಿಸಿ ದರ್ಶನ ಪಡೆಯಬೇಕು. ಸ್ಕ್ಯಾನಿಂಗ್ ಮಾಡಿಸಿಕೊಳ್ಳದೆ ಬೇರೆ ಮಾರ್ಗದಲ್ಲಿ ತಿರುಮಲಕ್ಕೆ ಹೋದರೂ ಸ್ವಾಮಿ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ವಾಹನಗಳ ಮೂಲಕ ತಿರುಮಲಕ್ಕೆ ತೆರಳುವ ಭಕ್ತರಿಗೆ ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಶ್ರೀನಿವಾಸಂ, ರೈಲ್ವೆ ನಿಲ್ದಾಣದ ಎದುರಿನ ವಿಷ್ಣುನಿವಾಸ ಮತ್ತು ತಿರುಪತಿ ರೈಲು ನಿಲ್ದಾಣದಲ್ಲಿ ಗೋವಿಂದ ರಾಜಸತ್ರಗಳಲ್ಲಿ ಸರ್ವದರ್ಶನಂ ಟೋಕನ್‌ಗಳನ್ನು ನೀಡಲಾಗುತ್ತದೆ. ಭಕ್ತರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕಾಗಿ ಟಿಟಿಡಿ ಅಧಿಕಾರಿಗಳು ಕೋರಿದ್ದಾರೆ.
ಇನ್ನು ಶ್ರೀವಾರಿ ಮೆಟ್ಟು ಮಾರ್ಗದಿಂದ ತೆರಳುವ ಭಕ್ತರಿಗೆ 1240ನೇ ಮೆಟ್ಟಿಲಲ್ಲಿ ದಿವ್ಯ ದರ್ಶನ ಟೋಕನ್ ನೀಡಲಾಗುವುದು. ಈ ಕೇಂದ್ರವನ್ನು ಬದಲಾಯಿಸಿಲ್ಲ. ಟಿಟಿಡಿ ಅಧಿಕಾರಿಗಳು ಟೈಮ್ ಸ್ಲಾಟ್ ಸರ್ವದರ್ಶನ ಟೋಕನ್‌ಗಳ ಕೇಂದ್ರವನ್ನು ಮಾತ್ರ ಬದಲಾಯಿಸಿದ್ದಾರೆ. ಅಲಿಪಿರಿ ಭೂದೇವಿ ಸಂಕೀರ್ಣವನ್ನು ವಿಷ್ಣು ನಿವಾಸ ಯಾತ್ರಿ ವಸತಿ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗಿದೆ.