Bigg Boss Winner MC Stan : ಬಿಗ್ ಬಾಸ್ ವಿನ್ನರ್ ಎಂಸಿ ಸ್ಟಾನ್​ಗೆ ದುಬಾರಿ ಗಿಫ್ಟ್‌ ಕೊಟ್ಟ ಸಾನಿಯಾ ಮಿರ್ಜಾ

Bigg-Boss Winner MC Stan : ಹಿಂದಿ ಬಿಗ್‌ ಬಾಸ್‌ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆ ಸಮಯಕ್ಕೆ ಸರಿಯಾಗಿ ಟಿವಿ ಮುಂದೆ ಕೂಳಿತುಕೊಳ್ಳುವವರೇ ಹೆಚ್ಚು. ಆ ಶೋ ಜನರಿಗೆ ಸಿಕ್ಕಾಪಟ್ಟೆ ಇಂಟ್ರಸ್ಟಿಂಗ್‌ ಆಗಿರುತ್ತದೆ. ಇದೀಗ ಬಿಗ್‌ ಬಾಸ್‌ ನ ವಿನ್ನರ್‌ ನ ಇಂಟ್ರಸ್ಟಿಂಗ್‌ ವಿಷಯ ಹೇಳುತ್ತೇವೆ ಕೇಳಿ. ಹಿಂದಿ ಬಿಗ್ ಬಾಸ್ ಸೀಸನ್ 16’ರ ವಿನ್ನರ್ (Bigg-Boss Winner MC Stan) ಎಂಸಿ ಸ್ಟಾನ್ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ದುಬಾರಿ ಬೆಲೆಯ ಬಟ್ಟೆ ಹಾಗೂ ಶೂ ತೊಟ್ಟು ಅವರು ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಗ್ಗೆ ತುಂಬಾ ಸಂದರ್ಶನಗಳಲ್ಲಿ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಅವರು ಉತ್ತರ ನೀಡಿದ್ದರು. ಈಗ ಇವರ ಕಲೆಕ್ಷನ್​ಗೆ ಹೊಸ ಶೂ ಸೇರ್ಪಡೆ ಆಗಿದೆ. ಇದನ್ನು ಕೊಟ್ಟಿದ್ದು ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಎಂದು ಹೇಳಿದ್ದಾರೆ. ಈ ಬಗ್ಗೆ ಎಂಸಿ ಸ್ಟಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

 

ಎಂಸಿ ಸ್ಟಾನ್ ರ್ಯಾಪ್ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಲೈವ್ ಒಂದರಲ್ಲಿ ಮಾತನಾಡುತ್ತಾ ಅವರ ಶೂ ಬಗ್ಗೆ ಪ್ರಶ್ನೆ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದರು. ‘ಇದು 80 ಸಾವಿರ ರೂಪಾಯಿಯ ಶೂ. ಇದರಲ್ಲಿ ನಿಮ್ಮ ಮನೆ ನಡೆಯುತ್ತೆ’ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಅವರು ಕತ್ತಿಗೆ ಹಾಕುವ ಚಿನ್ನದ ಸರವೂ ಎಲ್ಲರ ಗಮನ ಸೆಳೆದಿತ್ತು. ಈಗ ಅವರು ಸದಾ ಸುದ್ದಿಯಲ್ಲಿದ್ದಾರೆ.
ಅಂದಹಾಗೆ, ಎಂಸಿ ಸ್ಟಾನ್ ಹಾಗೂ ಸಾನಿಯಾ ಮಿರ್ಜಾ ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅವರಿಗೆ ಸಾನಿಯಾ ಅಕ್ಕ ಇದ್ದಂತೆ. ತಮ್ಮನಿಗೆ ಸಾನಿಯಾ ಪ್ರೀತಿಯಿಂದ ಶೂ ಹಾಗೂ ಗ್ಲಾಸ್ ನೀಡಿದ್ದಾರೆ. ಇದರ ಬೆಲೆ 1.21 ಲಕ್ಷ ರೂಪಾಯಿ. ಫೋಟೋ ಶೇರ್ ಮಾಡಿಕೊಂಡಿರುವ ಸ್ಟಾನ್, ಸಾನಿಯಾಗೆ ಧನ್ಯವಾದ ಹೇಳಿದ್ದಾರೆ. ‘ಧನ್ಯವಾದಗಳು ಸಾನಿಯಾ’ ಎಂದು ಬರೆದುಕೊಂಡಿದ್ದಾರೆ.

 

ಇದನ್ನು ಓದಿ : Selling tobacco : ಬಂತು ನೋಡಿ ತಂಬಾಕು ಮಾರಾಟಕ್ಕೆ ಹೊಸ ನಿಯಮ !!!  

Leave A Reply

Your email address will not be published.