Fuel Price: ಕಚ್ಚಾತೈಲ ಉತ್ಪಾದನೆ ಕಡಿತ; ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸಾಧ್ಯತೆ!

Fuel price : ದೇಶದಲ್ಲಿ ಚಿನ್ನದ ಬೆಲೆ (gold rate)ಜಾಸ್ತಿ ಆಗಿ ಕೈಗೆಟುಕದ ರೀತಿ ಆಗಿ ಬಿಟ್ಟಿದೆ. ಏನಾದರೂ ಕಾರ್ಯಕ್ರಮ (program)ಇದ್ದರೆ ಈಗಿನ ದಿನಗಳಲ್ಲಿ ಚಿನ್ನ ಖರೀದಿಸಲು ಅಸಾಧ್ಯವಾಗಿ ಜನರಿಗೆ ದೊಡ್ಡ ಮಟ್ಟದ ಬಿಕ್ಕಟ್ಟು ಎದುರಾಗಿದೆ. ಹಾಗೆಯೇ ಇದರ ಜೊತೆಗೆ ಮಹಾ ತೈಲದ(oil)ಬಿಕ್ಕಟ್ಟು ಎದುರಾಗಲಿದೆಯೇ? ಯಾವ ರೀತಿ ಜನಗಳಿಗೆ ಪರಿಸ್ಥಿತಿ ಎದುರಾಗಲಿದೆ ಎಂಬುದನ್ನು ನೋಡಿದ್ರೆ ನೀವೇ ಬೆಚ್ಚಿ ಬೀಳ್ತೀರಾ.

 

ಹೌದು, ಇಂಟರ್‌ನ್ಯಾಷನಲ್‌(international) ಎನರ್ಜಿ ಏಜೆನ್ಸಿಯ ಮಾಸಿಕ ವರದಿಯ ಪ್ರಾಕಾರ ಪೆಟ್ರೋಲ್‌ ರಫ್ತುದಾರ (Petrol and Diesel) ರಾಷ್ಟ್ರಗಳ ಸಂಘಟನೆಯಾದ ಒಪೆಕ್‌ನ ಕೆಲವು ಸದಸ್ಯ ರಾಷ್ಟ್ರಗಳು (Opec Countries) ಊಹೆ ಮಾಡಲಾಗದಷ್ಟು ತೈಲ(fuel) ಉತ್ಪಾದನೆ ಕಡಿಮೆ ಮಾಡುತ್ತಿವೆ.

ಈ ಕಾರಣದಿಂದಾಗಿ ಜಗತ್ತಿನಲ್ಲಿ ಯಾರೂ ಊಹಿಸದಂತಹ ಮಹಾ ತೈಲ (Fuel Price) ಬಿಕ್ಕಟ್ಟು (oil crisis) ಎದುರಾಗಲಿದೆ ಎಂದು ಪ್ಯಾರಿಸ್‌ ಮೂಲದ ಅಂತಾರಾಷ್ಟ್ರೀಯ ಎನರ್ಜಿ ಏಜೆನ್ಸಿಯೊಂದು ಶುಕ್ರವಾರ ತನ್ನ ಮಾಸಿಕ ವರದಿಯಲ್ಲಿ ಈ ರೀತಿಯ ಮಾಹಿತಿಯನ್ನು ನೀಡಿ ಎಲ್ಲರನ್ನೂ ಒಮ್ಮೆ ಎಚ್ಚರಿಸಿದೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ (market)ಕಚ್ಚಾ ತೈಲದ ಲಭ್ಯತೆ ಮತ್ತು ಇಂಧನ ಬೇಡಿಕೆ ಹೆಚ್ಚಳದ ನಡುವಿನ ಅಂತರವು ವರ್ಷದ ಮೂರನೇ ತ್ರೈಮಾಸಿಕದ ವೇಳೆಗೆ ದಿನಕ್ಕೆ 2 ಮಿಲಿಯನ್ ಬ್ಯಾರೆಲ್‌ಗಳನ್ನು ತಲುಪುತ್ತದೆ ಎಂದು ಈ ರೀತಿಯ ವರದಿಯನ್ನು ತಿಳಿಸಿದೆ. ಈ ಬೇಡಿಕೆಯನ್ನು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯ (ಒಪೆಕ್‌) ಹೊರಗಿನ ತೈಲ (oil)ಉತ್ಪಾದಕರು ತುಂಬಲು ಸಾಧ್ಯವಾಗದೇ ಅಸಮರ್ತರಾಗುತ್ತಾರೆ. ಅಥವಾ ತೈಲವನ್ನು ತುಂಬಲು ಇಷ್ಟಪಡದೇ ಇರುವ ಮನಸ್ಸುಗಳು ಹೆಚ್ಚಾಗಬಹುದು.

ಈ ಎಲ್ಲಾ ಪರಿಸ್ಥಿತಿ ಇಂದ ಕಚ್ಚಾ ತೈಲಗಳ ಬೆಲೆಗಳು(rate) ದೊಡ್ಡ ಮಟ್ಟದಲ್ಲಿ ಜಾಸ್ತಿ ಆಗುವ ಪರಿಸ್ಥಿತಿ ಒಮ್ಮೆನೇ ಎದುರಾಗಬಹುದು ಎಂಬುದರ ಬಗ್ಗೆ ವರದಿಯನ್ನು ತಿಳಿಸಿದೆ.

ಸೌದಿ ಅರೇಬಿಯಾ ಮತ್ತು ಒಪೆಕ್‌ನ (opec)ಕೆಲವು ದೊಡ್ಡ ತೈಲ ಉತ್ಪಾದಕರು ಈ ತಿಂಗಳ ಆರಂಭದಲ್ಲಿ ತೈಲ ಉತ್ಪಾದನೆಯನ್ನು ದಿನಕ್ಕೆ ಸರಿ ಸುಮಾರು ಅಂದರೆ 1.2 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಡಿಮೆ ಮಾಡಬೇಕು ಎಂದು ಹೇಳಿದರು. ಇದು ಬಹಳಷ್ಟು ತೈಲ ಮಾರುಕಟ್ಟೆಗೆ ಆಕಸ್ಮಿಕವಾಗಿ ಒಮ್ಮೆಗೇ ಭಯ ಬೀರುವಂತೆ ಮಾಡಿದೆ. ಚೀನಾದಲ್ಲಿ ಹೆಚ್ಚುತ್ತಿರುವ ಜನರ ಬೇಡಿಕೆಯನ್ನು ಪೂರೈಸಲು ಮತ್ತು ಇಂಧನ ತೈಲದ ಏರಿಕೆ(High) ಪ್ರಮಾಣವನ್ನು ತಡೆಯಲು ಇದೀಗ ಹೆಚ್ಚಿನ ಇಂಧನ ಪೂರೈಕೆಯ ಅಗತ್ಯತೆ ನಮಗೆ ಬಹಳಷ್ಟು ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

ಒಪೆಕ್ ಪ್ಲಸ್‌(opec plus) ಎಂದು ಕರೆಯಲ್ಪಡುವ ಒಕ್ಕೂಟದಲ್ಲಿ ಒಪೆಕ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ರಷ್ಯಾ, ಈ ವರ್ಷದ ಕೊನೆಯ ವರೆಗೆ ಒಂದು ಸುತ್ತಿನ ತೈಲ ಉತ್ಪಾದನೆಯ ಕಡಿಮೆ ಮಾಡುವುದನ್ನು ಮುಂದುವರೆಸುವುದಾಗಿ ತಿಳಿಸಿದೆ. ದಿನಕ್ಕೆ ಸರಿಸುಮಾರು 1.6 ಮಿಲಿಯನ್ ಬ್ಯಾರೆಲ್‌ ಇಂಧನ ಕಡಿತ ಮಾಡಲು ರಷ್ಯಾ(rashyaa) ಉದ್ದೇಶಿಸಿದೆ.

ಈ ವರ್ಷದ ಅಂತ್ಯದ ನಡುವೆ ದಿನಕ್ಕೆ 1.4 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಡಿಮೆ ತೈಲ ಉತ್ಪಾದನೆಯಾಗಲಿದೆ ಎಂದು ಐಇಎ( IEA)ಶುಕ್ರವಾರ ಈ ರೀತಿಯ ಮಾಹಿತಿಯನ್ನು ತಿಳಿಸಿದೆ. ಯೋಜಿತ ಉತ್ಪಾದನಾ ಕಡಿತವು ಮುಂದಿನ ತಿಂಗಳು ಪ್ರಾರಂಭವಾಗುತ್ತದೆ ಮತ್ತು ವರ್ಷದ (year)ಅಂತ್ಯದವರೆಗೆ ಅದು ಇರಲಿದೆ ಎಂದು ತಿಳಿಸಿದೆ.

ಒಪೆಕ್‌ನ ಭಾಗವಾಗಿರದ ತೈಲ-ಉತ್ಪಾದಿಸುವ ರಾಷ್ಟ್ರಗಳು ಅದೇ ಅವಧಿಯಲ್ಲಿ ತಮ್ಮ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿವೆ. ಇದರಿಂದ ತೈಲ ಬಿಕ್ಕಟ್ಟಿನ ಪರಿಣಾಮ ಕಡಿಮೆಯಾಗಬಹುದು. ಇದು ಗಯಾನಾ ಮತ್ತು ನೈಜೀರಿಯಾದಂತಹ ಸಣ್ಣ ತೈಲ ಉತ್ಪಾದಕರ ಗುಂಪನ್ನು ಒಳಗೊಂಡಿದೆ. ಆದರೆ, ಇವುಗಳ ಪೂರೈಕೆಯು ಸೌದಿಯಂತಹ ದೇಶಗಳಿಂದ ಉಂಟಾದ ಕೊರತೆಯನ್ನು ಸರಿಮಾಡಲಾಗದು

ಅಮೆರಿಕದ(America) ಬೇನಾಮಿ ತೈಲ(oil) ಉತ್ಪಾದಕರು ಇಂಧನ ಪೂರೈಕೆಯನ್ನು ಹೆಚ್ಚಿಸುವ ಯಾವುದೇ ರೀತಿಯ ಸಾಧ್ಯತೆಯಿಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳು ಪಳೆಯುಳಿಕೆ ಇಂಧನ ಪೂರೈಕೆಯಲ್ಲಿ ಹೆಚ್ಚು ಹೂಡಿಕೆ ಮಾಡಲು ಇಷ್ಟಪಡುವುದಿಲ್ಲ.

ಇಂತಹ ಹಲವು ಕಾರಣಗಳಿಂದ ಮುಂದಿನ ದಿನಗಳು(days) ಇಂಧನ ಕ್ಷೇತ್ರಕ್ಕೆ ಕಷ್ಟವಾಗಿರಲಿದೆ. ಇದು ಜಾಗತಿಕ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿ ತೊಂದರೆ ಎದುರಾಗಬಹುದು ಎಂದು ಅನೇಕ ತಜ್ಞರು ಅಂದಾಜಿಸಿದ್ದಾರೆ.

 

ಇದನ್ನು ಓದಿ : Train speed : ರಾತ್ರಿಯಲ್ಲಿ ರೈಲಿನ ವೇಗ ಏಕೆ ಹೆಚ್ಚಾಗುತ್ತದೆ? ಕಾರಣ ತಿಳಿದರೆ ಆಶ್ಚರ್ಯ ಆಗ್ತೀರ!

Leave A Reply

Your email address will not be published.