Underwear: ಮಹಿಳೆಯರೇ ಎಚ್ಚೆತ್ತುಕೊಳ್ಳಿ, ಯೋನಿಯ ಸ್ವಚ್ಛತೆಯನ್ನು ಈ ರೀತಿ ಕಾಪಾಡದಿದ್ದರೆ, ಸಮಸ್ಯೆ ಖಂಡಿತ!

Health tips women  : ಮಹಿಳೆಯರು (women) ತಮ್ಮ ಖಾಸಗಿ ಅಂಗಗಳ ಸ್ವಚ್ಛತೆ ಕಡೆಗೆ ತುಂಬಾನೇ ಗಮನ ಹರಿಸಬೇಕು, ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಉಂಟಾಗುವುದು. ಅದರಲ್ಲೂ ಅಂಡರ್‌ವೇರ್‌ (underwear) ವಿಷಯದಲ್ಲಿ ಸ್ವಚ್ಛತೆ ಕಡೆಗೆ ತುಂಬಾನೇ ಗಮನ ನೀಡಬೇಕು. ನೀವು ಧರಿಸುವ ಅಂಡರ್‌ವೇರ್‌ನಲ್ಲಿ ಕಂಡು ಬರುವ ಕೆಲವು ಬದಲಾವಣೆಯಿಂದ ದೇಹದಲ್ಲಿ ಏನು ಬದಲಾವಣೆಯಾಗಿದೆ (Health tips women) ಎಂಬುದು ತಿಳಿಯುತ್ತದೆ.

ಪ್ರತಿಯೊಬ್ಬ ಮಹಿಳೆಯು ತನ್ನ ಅಂಡರ್‌ವೇರ್‌ನಲ್ಲಿ ಕೆಲವೊಂದು ಬದಲಾವಣೆ ಕಾಣುತ್ತಾಳೆ. ಅದು ಬಿಳುಪು ಇರಬಹುದು ಅಥವಾ ಇತರ ಅಂಶಗಳಿರಬಹುದು. ನಿಮ್ಮ ಅಂಡರ್‌ವೇರ್‌ನಲ್ಲಿ ಕಂಡು ಬರುವ ಈ 3 ಬದಲಾಣೆಯಿಂದ ನಿಮ್ಮ ಆರೋಗ್ಯದ ಬಗ್ಗೆ ತಿಳಿಯಿರಿ.

ಬಿಳುಪು ಹೋಗುವುದು: ಋತುಚಕ್ರದ ಅವಧಿ ಪ್ರಾರಂಭವಾಗಿ ಮೆನೋಪಾಸ್‌ ಹಂತ ತಲುಪುವವರೆಗೂ ಬಿಳುಪು ಹೋಗುವುದು ಸಹಜ ಪ್ರಕ್ರಿಯೆ. ಇದರಲ್ಲಿ ಹಲವು ವಿಧಗಳಿವೆ. ಓವ್ಯೂಲೇಷನ್‌ ಅಂದರೆ ಅಂಡೋತ್ಪತ್ತಿ ಸಮಯದಲ್ಲಿ ಮೊಟ್ಟೆಯ ಬಿಳಿಯಂತೆ ಬಿಳುಪು ಹೋಗುತ್ತದೆ. ಈ ಸಮಯದಲ್ಲಿ ಮಿಲನ ಕ್ರಿಯೆ ನಡೆದರೆ ವೀರ್ಯಾಣು ಅಂಡಾಣು ಜೊತೆ ಸೇರಿ ಗರ್ಭಧಾರಣೆಯಾಗುತ್ತದೆ.

ಮೊಟ್ಟೆಯ ಬಿಳಿಯಂತೆ ಬಿಳುಪು ಹೋಗುವ ಮುನ್ನ ಹಾಲಿನ ಕೆನೆಯಂತೆ ಬಿಳುಪು ಹೋಗುತ್ತದೆ. ಈ ರೀತಿಯ ಬಿಳುಪು ಹೋಗುವುದು ಸಹಜವಾಗಿದ್ದು, ಇದು ಜನನೇಂದ್ರೀಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಇನ್ನು, ಹಳದಿ ಅಥವಾ ನಿಯೋನ್ ಬಣ್ಣದಲ್ಲಿ ಬಿಳುಪು ಹೋದರೆ, ಅದು ಸೊಂಕು ತಗುಲಿದೆ ಎಂಬುವುದರ ಸೂಚನೆಯಾಗಿದೆ. ಆಗ ಬಿಳುಪು ತುಂಬಾ ದುರ್ವಾಸನೆಯಿಂದ ಕೂಡಿರುತ್ತದೆ. ಜೊತೆಗೆ ಆ ಭಾಗದಲ್ಲಿ ತುರಿಕೆ, ಮೂತ್ರ ಮಾಡುವಾಗ ಉರಿ ಈ ರೀತಿಯ ಸಮಸ್ಯೆ ಕಂಡು ಬರುವುದು. ಬ್ಯಾಕ್ಟಿರಿಯಾ ಸೋಂಕು ಉಂಟಾದಾಗ ಬೂದು ಬಣ್ಣದಲ್ಲಿ ಬಿಳುಪು ಹೋಗುವುದು.

ಮುಟ್ಟಿನ ಸಮಯದಲ್ಲಿ ಕಂದು ಅಥವಾ ರಕ್ತದ ಬಣ್ಣದಲ್ಲಿ ಬಿಳುಪು ಹೋಗುತ್ತದೆ. ಇದು ಸಹಜ ಪ್ರಕ್ರಿಯೆಯಾಗಿದೆ. ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರಲ್ಲಿ ಕೂಡ ಈ ರೀತಿ ಕಂಡು ಬರುವುದು.
ಮುಟ್ಟಾಗುವ ಸ್ವಲ್ಪ ಮುಂಚೆ ಅಥವಾ ಮುಟ್ಟಾಗಿ 4 ದಿನಗಳು ಕಳೆದ ಮೇಲೆ ಪಿಂಕ್ ಬಣ್ಣದಲ್ಲಿ ಬಿಳುಪು ಹೋಗುವುದು. ಉಳಿದ ಸಮಯದಲ್ಲಿ ಕಂಡು ಬಂದರೆ ಗರ್ಭಕೋಶದಲ್ಲಿ ಏನಾದರೂ ಸಮಸ್ಯೆವಿರಬಹುದು, ಹಾಗಾಗಿ ವೈದ್ಯರಿಗೆ ತೋರಿಸಿದರೆ ಉತ್ತಮ.

ಅಂಡರ್‌ವೇರ್ ಒದ್ದೆಯಾಗುವುದು : ಜನನೇಂದ್ರೀಯ ತಾನಾಗಿಯೇ ಶುಚಿಯಾಗುತ್ತದೆ. ಹಾಗಾಗಿ ಆ ಭಾಗದಲ್ಲಿ ತೇವಾಂಶ ಸಹಜವಾಗಿರುತ್ತದೆ. ಬೇಸಿಗೆಯಲ್ಲಿ ತುಸು ಹೆಚ್ಚಾಗಿಯೇ ಇರುತ್ತದೆ. ಇದು ಸಹಜಕ್ರಿಯೆ ಆಗಿದ್ದು, ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಲೈಂಗಿಕ ಆಸಕ್ತಿ ಉಂಟಾದಾಗ ಕೂಡ ಅಂಡರ್‌ವೇರ್ ಒದ್ದೆಯ ಅನುಭವ ಉಂಟಾಗುವುದು.

ರಕ್ತ ಕಲೆ : ಮುಟ್ಟಿನ ಸಮಯದಲ್ಲಿ ರಕ್ತ ಕಲೆ ಕಂಡು ಬರುವುದು ಸಹಜ. ಕೆಲವರಿಗೆ ಗರ್ಭಾವಸ್ಥೆಯಲ್ಲೂ ಈ ರೀತಿ ಕಂಡು ಬರುವುದು. ಗರ್ಭನಿರೋಧಕ ಮಾತ್ರೆ ತೆಗೆದುಕೊಂಡಾಗ ಅಥವಾ ಮೆನೋಪಾಸ್‌ ಹಂತದಲ್ಲಿ ಅಥವಾ ಲೈಂಗಿಕ ಸೋಂಕು ಉಂಟಾದಾಗ ಕೂಡ ಈ ರೀತಿ ಕಂಡು ಬರುವುದು. ಮುಟ್ಟಿನ ಸಮಯದಲ್ಲಿ ಹೊರತು ಪಡಿಸಿ ಇತರ ಸಮಯದಲ್ಲಿ ಈ ರೀತಿ ಕಂಡು ಬರುತ್ತಿದ್ದರೆ ಆಗ ನೀವು ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ.

 

ಇದನ್ನು ಓದಿ : ODI World Cup : BCCI 5 ಸ್ಟೇಡಿಯಂ ದುರಸ್ಥಿಗೆ ಬರೋಬ್ಬರಿ 500 ಕೋಟಿ ನೀಡಲಿದೆ! ಏನಿದು ಹೊಸ ಪ್ಲಾನ್!! 

Leave A Reply

Your email address will not be published.