Cheapest Flights at Just 85 Rs : 1975 ಇಸವಿಯ ಮುಂಬೈ ಟು ಗೋವಾ ಫ್ಲೈಟ್ ಟಿಕೆಟ್ ವೈರಲ್ ! ಟಿಕೆಟ್ ದರ ಕೇಳೆದ್ರೆ ಬೆರಗ್ತಾಗ್ತೀರ!
Flight at Rs 85 : ಮತ್ತೊಂದು ಹಳೆಯ ಟಿಕೆಟ್ ಈಗ ಸುಮಾರು 50 ವರ್ಷಗಳ ನಂತರ ಎದ್ದು ಕೂತಿದೆ. ಇತ್ತೀಚೆಗೆ ಹಲವು ದಶಕಗಳ ಹಿಂದಿನ ಟ್ರೈನ್ ಟಿಕೆಟ್, ಮಸಾಲಾ ದೋಸೆ ಬೆಲೆ ಮುಂತಾದ ಹಲವು ವಸ್ತುಗಳು ಮತ್ತು ಸರ್ವಿಸ್ ಗಳ ಬೆಲೆಗಳು ವೈರಲ್ ಆಗಿದ್ದವು. ಈಗ ಹಳೆಯ ವಿಮಾನಯಾನದ ಟಿಕೆಟ್ ಒಂದು ವೈರಲ್ ಆಗಿದೆ. (Cheap flight ticket goes viral)
1975 ರ ಇಸವಿಯಲ್ಲಿ ಮುಂಬೈ ನಿಂದ ಗೋವಾಕ್ಕೆ(Mumbai to Goa cheap flights) ಹೋಗುವ ವಿಮಾನ ಟಿಕೆಟ್ ನ ಬೆಲೆ ಇದ್ದದ್ದು ಕೇವಲ 85 ರೂಪಾಯಿಗಳು (Flight at Rs 85). ಅಷ್ಟು ಕಮ್ಮಿಬೆಲೆಯಾ ಎಂದು ನೀವು ಹುಬ್ಬೇರಿಸಬಹುದು. ಹೌದು, ಇಂದಿನ ಒಂದು ಮಸಾಲೆ ದೋಸೆಯ ಬೆಲೆಯಲ್ಲಿ ಅಂದು ವಾಣಿಜ್ಯ ನಗರಿ ಮುಂಬೈ ನಿಂದ ಗೋವಾಕ್ಕೆ ಟ್ರಿಪ್ ಹೋಗಬಹುದಿತ್ತು.
ಅಂದಹಾಗೆ ಇದೀಗ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು 1975ರಲ್ಲಿ ಮುಂಬೈನಿಂದ ಗೋವಾಕ್ಕೆ ಪ್ರಯಾಣಿಸಿದ ವಿಮಾನ ಯಾನದ ಟಿಕೆಟ್ ಅನ್ನು ಹಂಚಿಕೊಂಡಿದ್ದು, ಸದ್ಯ ಅದು ವೈರಲ್ ಆಗಿದೆ. ಅದಕ್ಕೆ ಕಾರಣ ಅಂದು ಮುಂಬೈ ಟು ಗೋವಾಕ್ಕೆ ವಿಮಾನ ಪ್ರಯಾಣದ ಟಿಕೆಟ್ ಬೆಲೆ ಕೇವಲ 85 ರೂಪಾಯಿಯಾಗಿರುವುದು!
“1975ರಲ್ಲಿನ ಇಂಡಿಯನ್ ಏರ್ ಲೈನ್ಸ್ ಟಿಕೆಟ್” ಎಂಬ ಕ್ಯಾಪ್ಶನ್ ಮೂಲಕ ಈ ಟಿಕೆಟ್ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಾಂಬೆ ಟು ಗೋವಾ ವಿಮಾನಯಾನದ ಟಿಕೆಟ್ ಬೆಲೆ 85 ರೂಪಾಯಿ! ಬಣ್ಣ ಮಾಸಿದ ಹಳೆಯ ಆ ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ಸುಮಾರು 45 ವರ್ಷಕ್ಕೂ ಹಿಂದಿನ ವಿಮಾನ ಪ್ರಯಾಣದ ಟಿಕೆಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರಿಂದ ಹಲವಾರು ಮಂದಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹೌದು, ನನಗೂ ಕೂಡಾ ನೆನಪಿರುವಂತೆ 1988 ರಲ್ಲಿ ಬಾಂಬೆ ಟು ಗೋವಾಕ್ಕೆ ಟಿಕೆಟ್ ಬೆಲೆ 435 ರೂಪಾಯಿ ಇತ್ತು ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ನೆನಪಿಸಿಕೊಂಡಿದ್ದಾರೆ. 1974 ರಲ್ಲಿ ಮೊದಲ ಬಾರಿಗೆ ಮಂಗಳೂರಿನಿಂದ ಬಾಂಬೆಗೆ ವಿಮಾನದಲ್ಲಿ ತೆರಳಿದ್ದ ವೇಳೆ ಟಿಕೆಟ್ ಬೆಲೆ 280 ರೂಪಾಯಿ ಇತ್ತು. ನನ್ನ 8 ವರ್ಷದ ಮಗನಿಗೆ 140 ರೂಪಾಯಿ ಟಿಕೆಟ್ ಚಾರ್ಜ್ ವಿಧಿಸಿರುವುದಾಗಿ ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ.
ಮೊದಲ ಬಾರಿಗೆ ವಿಮಾನಯಾನ ಭಾರತದಲ್ಲಿ ಆರಂಭವಾದದ್ದು1932ರಲ್ಲಿ. ಆಗ ಇದ್ದದ್ದು ಒಂದೇ ಸಂಸ್ಥೆ – ಭಾರತ ಸರ್ಕಾರದ ನೇರ ಆಡಳಿತದಲ್ಲಿದ್ದ ಇಂಡಿಯನ್ ಏರ್ ಲೈನ್ಸ್. ನಂತರ ಭಾರತೀಯ ವಾಯುಯಾನ ಸಂಸ್ಥೆ ಬಹಳಷ್ಟು ಬದಲಾವಣೆ ಕಂಡಿದೆ. ಹಲವು ಪ್ರೈವೇಟ್ ವಿಮಾನಯಾನದ ಸಂಸ್ಥೆಗಳು ಹುಟ್ಟಿಕೊಂಡು ಬೆಳೆದಿವೆ. ವಿಮಾನಯಾನದ ದರದಲ್ಲಿ ಆಮೂಲಾಗ್ರ ಬದಲಾವಣೆ ಆಗಿದ್ದು, ಅಂದು ಶ್ರೀಮಂತರು ಮಾತ್ರ ಪ್ರಯಾಣಿಸಬಹುದಾದ ವಿಮಾನದಲ್ಲಿ ಇಂದು ಜನಸಾಮಾನ್ಯರು ಕೂಡಾ ಹೋಗಿ ಬರುವಂತೆ ಆಗಿದೆ. ಹಾಗೆ ನೋಡಿದರೆ, ಹಿಂದೆ ವಿಮಾನ ಪ್ರಯಾಣದ ಬೆಲೆ ಜಾಸ್ತಿನೇ ಆಯ್ತು. ಈಗಲೇ ವಿಮಾನಗಳು ಕಮ್ಮಿ ದರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೆಲವೊಮ್ಮೆ ಕೆಲವೇ ನೂರು ರೂಪಾಯಿಗಳಲ್ಲಿ ಕೂಡಾ ಪ್ರಯಾಣಿಸಬಹುದು ಎಂದು ಗ್ರಾಹಕರೊಬ್ಬರು ತಮ್ಮಅಭಿಪ್ರಾಯ ಹಂಚಿ ಕೊಂಡಿದ್ದಾರೆ.
ಇದನ್ನೂ ಓದಿ : Export of monkeys : ಚೀನಾಕ್ಕೆ 1 ಲಕ್ಷ ಮಂಗಗಳನ್ನು ರಫ್ತು ಮಾಡಲು ಮುಂದಾದ ಶ್ರೀಲಂಕಾ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!