Employee Know about these PF Forms : ನಿಮ್ಮ ಸಂಬಳದಲ್ಲಿ ಪಿಎಫ್‌ ಕಡಿತವಾಗುತ್ತಿದ್ದರೆ , ಖಂಡಿತ ಇದನ್ನು ಓದಿ!

About these PF Forms  : ಉದ್ಯೋಗಿಗಳಿಗೆ ಭವಿಷ್ಯ ನಿಧಿ(ಪಿಎಫ್)ಯು ಕಷ್ಟದ ಸಮಯದಲ್ಲಿ ಕೈ ಹಿಡಿಯುವ ಆಧಾರ ಸ್ತಂಭವಾಗಿದೆ. ಈ ಭವಿಷ್ಯ ನಿಧಿಯು ಉದ್ಯೋಗಿಗಳಿಗೆ ಹಲವಾರು ಉಪಯೋಗಗಳನ್ನು ನೀಡಿದೆ. ಹಾಗೂ ಹಲವು ಆನ್ ಲೈನ್ (online) ಸೇವೆಗಳನ್ನು ಒದಗಿಸಿದೆ. ನೌಕರರು ಮೊದಲು ಪಿಎಫ್ (About these PF Forms ) ನ ಫಾರ್ಮ್ ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಸೂಕ್ತ. ಈ ಭವಿಷ್ಯ ನಿಧಿ ಯ ಫಾರ್ಮ್ಗಳ ಬಗ್ಗೆ ತಿಳಿಯಲು ಮುಂದೆ ಓದಿ.

ಫಾರ್ಮ್ 10C : ಉದ್ಯೋಗಿಗಳ ಪಿಂಚಣಿ ಯೋಜನೆಗಾಗಿ: ಈ ಫಾರ್ಮ್(form) ನೌಕರರು ಪಾವತಿಸಿದ ಕೊಡುಗೆಯ ಮೊತ್ತವನ್ನು ಕ್ರೈಮ್ (craim)ಮಾಡಲು ಸಹಾಯ ಮಾಡುತ್ತದೆ.
ಫಾರ್ಮ್ 10D: ಮಾಸಿಕ ಪಿಂಚಣಿ ಪಡೆಯಲು : ಈ ಫಾರ್ಮ್(form) ನೌಕರರು ಮಾಸಿಕ ಪಿಂಚಣಿ ಪಡೆಯಲು ಸೂಕ್ತವಾಗಿದೆ.
ಫಾರ್ಮ್ 13: ನೌಕರರು ಕಂಪನಿ ಬದಲಾಯಿಸಿದಾಗ ಪಿಎಫ್(PF) ವರ್ಗಾಯಿಸಲು : ಈ ಫಾರ್ಮ್ (form) ನೌಕರರು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ನೌಕರಿ ಬದಲಾಯಿಸಿದಾಗ PF ಹಣವನ್ನು ವರ್ಗಾಯಿಸಲು ಸಹಾಯಕವಾಗಿದೆ.

ಫಾರ್ಮ್ 20: ಇಪಿಎಫ್‌ಒ (EPFO)ನ ಹಣ ಪಡೆಯಲು : ಈ ಫಾರ್ಮ್ (form) ಫಲಾನುಭವಿಯ ಮರಣದ ಸಂದರ್ಭದಲ್ಲಿ ಅವರ ಕುಟುಂಬ, ಉತ್ತರಾಧಿಕಾರಿ ಅಥವಾ ನಾಮಿನಿ ಪಿಎಫ್ ಹಣವನ್ನು ಪಡೆಯಲು ನೆರವಾಗುತ್ತದೆ.
ಫಾರ್ಮ್ 31: ಇಪಿಎಫ್ (EPF) ಖಾತೆಯಿಂದ ಸಾಲಕ್ಕಾಗಿ: ಈ ಫಾರ್ಮ್ (form) ಇಪಿಎಫ್ (EPF) ಖಾತೆಯಿಂದ ಹಣ ಹಿಂಪಡೆಯಲು ಮತ್ತು ಸಾಲಕ್ಕಾಗಿ ಈ ಸೂಕ್ತವಾಗಿದೆ.
ಫಾರ್ಮ್ 51 ಎಫ್: ಈ ಫಾರ್ಮ್ (form) ಅನ್ನು ಇಪಿಎಫ್‌ಒ ಫಲಾನುಭವಿ ಮರಣಹೊಂದಿದರೆ ವಿಮಾ ಯೋಜನೆಯಡಿ ಹಣವನ್ನು ಪಡೆಯಲು ಕುಟುಂಬದ ಸದಸ್ಯರು, ವಾರಸುದಾರರು ಅಥವಾ ನಾಮಿನಿಗಳು ಬಳಸಬೇಕು.

ಬಳಕೆದಾರರು ತಮ್ಮ UAN ನೊಂದಿಗೆ ಇ- ನಾಮನಿರ್ದೇಶನವನ್ನು ಸಲ್ಲಿಸಲು ಈ ಕ್ರಮ ಅನುಸರಿಸಿ:
ನೀವೇನಾದರೂ ನಿಮ್ಮ UAN ನೊಂದಿಗೆ ಇ- ನಾಮನಿರ್ದೇಶನವನ್ನು ಸಲ್ಲಿಸಲಿದ್ದಾರೆ. ಈ ಕ್ರಮ ಕೈಗೊಳ್ಳಿ.
-ಮೊದಲಿಗೆ ಇಪಿಎಫ್ಒ (EPFO) ವೆಬ್‌ಸೈಟ್ (website) ತೆರೆಯಿರಿ (https://epfindia.gov.in/)
-ಬಳಿಕ ನಿಮ್ಮ ಸೇವೆಗಳನ್ನು ಆಯ್ಕೆಮಾಡಿ ಮತ್ತು ‘ಉದ್ಯೋಗಿಗಳಿಗಾಗಿ” ಕ್ಲಿಕ್ (ಕ್ಲಿಕ್) ಮಾಡಿ.

-ಇದು ನಿಮ್ಮನ್ನು “ಉದ್ಯೋಗಿಗಳಿಗಾಗಿ” ಪುಟಕ್ಕೆ ಮರುನಿರ್ದೇಶಿಸುತ್ತದೆ. ಅಲ್ಲಿಂದ, ಸೇವೆಗಳ ವಿಭಾಗಕ್ಕೆ ಹೋಗಿ ಮತ್ತು “ಸದಸ್ಯ UAN/ಆನ್‌ಲೈನ್ ಸೇವೆ (OCS/OTCP)” ಆಯ್ಕೆಮಾಡಿ.
-ಬಳಿಕ ಮೇಲಿರುವ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ UAN ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ (login) ಮಾಡಿರಿ.
-ನಂತರ ಮ್ಯಾನೇಜ್ ಟ್ಯಾಬ್‌(tab) ಗೆ ಹೋಗಿ ಮತ್ತು ನಾಲ್ಕನೇ ಆಯ್ಕೆಯಾದ – ಇ-ನಾಮನಿರ್ದೇಶನ ಆರಿಸಿ.
-‘ವಿವರಗಳನ್ನು ಒದಗಿಸಿದ ನಂತರ ‘ ಟ್ಯಾಬ್ ನಿಮ್ಮ ಪರದೆಯ * ಮೇಲೆ ಕಾಣಿಸುತ್ತದೆ. ಸೇವ್ ಆಯ್ಕೆಯ ಮೇಲೆ ಕ್ಲಿಕ್ (click) ಮಾಡಿರಿ.

-ನೀವು ಕುಟುಂಬದ ಘೋಷಣೆಯನ್ನು ನವೀಕರಿಸಲು ಬಯಸಿದರೆ ‘ಹೌದು’ ಎಂಬುದನ್ನು ಕ್ಲಿಕ್ (click) ಮಾಡಿ, ನಂತರ “ಕುಟುಂಬದ ವಿವರಗಳನ್ನು ಸೇರಿಸಿ” ಕ್ಲಿಕ್ (click) ಮಾಡಿ ಅಲ್ಲಿ ನೀವು ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದಾಗಿದೆ.
-‘ನಾಮನಿರ್ದೇಶನ ವಿವರಗಳು’ ಆಯ್ಕೆ ಮಾಡಿ.
-‘ಸೇವ್ ಇಪಿಎಫ್(EPF)/ಇಡಿಎಲ್‌ಐ (EDLI) ನಾಮಿನೇಷನ್‌’ ಮೇಲೆ ಕ್ಲಿಕ್ ಮಾಡಿರಿ.

-ಒನ್-ಟೈಮ್ ಪಾಸ್ವರ್ಡ್ (OTP) ಅನ್ನು ರಚಿಸಲು ‘e-sign’ ಅನ್ನು ಕ್ಲಿಕ್ (click) ಮಾಡಿ ಮತ್ತು ಅದನ್ನು ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಸಲ್ಲಿಸಿರಿ.
ನಿಮ್ಮ UAN ನೊಂದಿಗೆ ಇ- ನಾಮನಿರ್ದೇಶನವನ್ನು ಸಲ್ಲಿಸಲಾಗುತ್ತದೆ.
-ನಿಮ್ಮ ಪಿಎಫ್ (PF) ಬ್ಯಾಲೆನ್ಸ್ ಚೆಕ್ (balance check) ಮಾಡಲು ಹೀಗೆ ಮಾಡಿ
-ಅಧಿಕೃತ ಇಪಿಎಫ್ಒ(EPFO) ವೆಬ್‌ಸೈಟ್‌ಗೆ ಬೇಟಿ ನೀಡಿ.
-ನಂತರ ಡ್ಯಾಶ್‌ಬೋರ್ಡ್‌ನ ಮೇಲ್ಬಾಗದಲ್ಲಿ ಉಲ್ಲೇಖಿಸಲಾದ ‘ಸರ್ವೀಸ್’ ವಿಭಾಗದ ಮೇಲೆ ಕ್ಲಿಕ್ ಮಾಡಿ. ಈ ವಿಭಾಗದಲ್ಲಿಯೇ, ‘ಉದ್ಯೋಗಿಗಳಿಗಾಗಿ’ ಆಯ್ಕೆಯ ಮೇಲೆ ಕ್ಲಿಕ್(click) ಮಾಡಿರಿ.

-ಬಳಿಕ, ಹೊಸ ಪೇಜ್ ತೆರೆಯುತ್ತದೆ, ‘ಸರ್ವೀಸ್’ ಆಯ್ಕೆಯಲ್ಲಿ ಕಾಣಿಸುವ ‘ಸದಸ್ಯ ಪಾಸ್‌ಬುಕ್’ ಆಯ್ಕೆಯ ಮೇಲೆ ಕ್ಲಿಕ್ (click) ಮಾಡಿ.
-‘ಸದಸ್ಯ ಪಾಸ್‌ಬುಕ್’ ಅನ್ನು ಆಯ್ಕೆ ಮಾಡಿದ ನಂತರ, ಚಂದಾದಾರರನ್ನು ಲಾಗಿನ್ (login) ಪೇಜ್‌ಗೆ ನಿರ್ದೇಶಿಸುತ್ತದೆ.
-ಪಾಸ್‌ವರ್ಡ್‌ನೊಂದಿಗೆ UAN ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಟಾ ಕೋಡ್‌(captcha code)ಗೆ ಸರಿಯಾದ ಉತ್ತರ ಹಾಕಿ. ನಂತರ ‘ಲಾಗಿನ್’ (login)ಗೆ ಕ್ಲಿಕ್(click) ಮಾಡಿ.
-ಇದರ ನಂತರ, ಚಂದಾದಾರರನ್ನು ಮುಖ್ಯ ಇ ಪಿಎಫ್ (EPF) ಖಾತೆಗೆ ನಿರ್ದೇಶಿಸಲಾಗುತ್ತದೆ, ಅಲ್ಲಿ ಉದ್ಯೋಗಿಗಳು ನಿಮಗೆ ಬೇಕಾದ ಮಾಹಿತಿ ನೋಡಿ ತಿಳಿದುಕೊಳ್ಳಬಹುದು.

 

ಇದನ್ನು ಓದಿ : Congress Candidate List : ವಿಧಾನಸಭಾ ಚುನಾವಣೆ; ಕಾಂಗ್ರೆಸ್ ಪಕ್ಷದಿಂದ 3 ನೇ ಪಟ್ಟಿ ಬಿಡುಗಡೆ! 

Leave A Reply

Your email address will not be published.