Draupadi Murmu : ಕರ್ನಾಟಕದ ದ್ರೌಪದಿ ಮುರ್ಮು ಭಾಗೀರಥಿ ಮುರುಳ್ಯ – ಕೋಟ

Draupadi Murmu  : ಸುಳ್ಯ : ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕು. ಭಾಗೀರಥಿ ಮುರುಳ್ಯರ ಮನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಏ 15ರಂದು ಭೇಟಿ ನೀಡಿದ್ದಾರೆ.

 

ಅವರನ್ನು ಭಾಗೀರಥಿ ಮುರುಳ್ಯ ಹಾಗೂ ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ಸ್ವಾಗತಿಸಲಾಯಿತು.

ಬಳಿಕ ಭಾಗೀರಥಿ ಮರುಳ್ಯ ಅವರ ಮನೆಯಲ್ಲಿ ಸೇರಿದ್ದ ಬಿಜೆಪಿ ಪ್ರಮುಖರು ಹಾಗೂ ಊರವರನ್ನುದ್ದೇಶಿಸಿ ಮಾತನಾಡಿದ ಸಚಿವರು ಭಾರತದಲ್ಲಿ ದ್ರೌಪದಿ (Draupadi Murmu ) ಮುರ್ಮು ಹೇಗೆ ರಾಷ್ಟ್ರಪತಿಯಾದರೋ ಹಾಗೇ ಕು. ಭಾಗೀರಥಿ ಮುರುಳ್ಯರವರನ್ನೂ ಪಕ್ಷ ಗುರುತಿಸಿದೆ.ಬಿಜೆಪಿ ಸಮಾಜದ ಕಟ್ಟಕಡೆಯ ಕಾರ್ಯಕರ್ತರನ್ನೂ ಗುರುತಿಸಿದೆ ಎನ್ನುವುದಕ್ಕೆ ಭಾಗೀರಥಿ ಮುರುಳ್ಯ ಸಾಕ್ಷಿ. ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಹೆಮ್ಮೆ ಇದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಭಾಗೀರಥಿ ಮುರುಳ್ಯ ಅವರನ್ನು ಆರಿಸಬೇಕು ಎಂದರು.

ಈ ಸಂದರ್ಭದಲ್ಲಿ ಭಾಗೀರಥಿ ಮುರುಳ್ಯ ಮತದಾರರ ಸಹಕಾರ ಬಯಸಿದರು.

ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮೀನುಗಾರಿಕಾ ನಿಗಮ ಅಧ್ಯಕ್ಷ ಎ.ವಿ. ತೀರ್ಥರಾಮ, ಮಂಡಲ ಸಮಿತಿ ಸದಸ್ಯ ಅನೂಪ್ ಬಿಳಿಮಲೆ, ಸಾಮಾಜಿಕ ಜಾಲತಾಣ ಸಂಚಾಲಕ ಪ್ರಸಾದ್ ಕಾಟೂರ್, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಪ್ರಮುಖ್ ವಿನಯ್ ಕುಮಾರ್ ಮುಳುಗಾಡು, ಬಿಜೆಪಿ ಬೆಳ್ಳಾರೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ವಸಂತ ನಡುಬೈಲು, ಎಣ್ಣೂರು ಮುರುಳ್ಯ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ವಸಂತ ಹುದೇರಿ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಕು. ಜಾನಕಿ ಮುರುಳ್ಯ, ಉಪಾಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ, ಬೂತ್ ಸಮಿತಿ ಅಧ್ಯಕ್ಷರಾದ ಮೋನಪ್ಪ ಆಲೇಕಿ, ಬೂತ್ ಕಾರ್ಯದರ್ಶಿ ಕರುಣಾಕರ ಕಳತ್ತಜೆ, ನೇಮೀಶ್ ಕಡೀರ, ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ರೈ, ಊರುಸಾಗು, ಮುರುಳ್ಳ ಗ್ರಾ.ಪಂ. ಸದಸ್ಯರುಗಳಾದ ಕರುಣಾಕರ ಗೌಡ, ಶೀಲಾವತಿ ಗೋಳ್ತಿಲ, ಪುಷ್ಪಾವತಿ ಕುಕ್ಕಟೆ, ಸೋಮನಾಥ ಪೂಜಾರಿ, ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ ಬೂತ್ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಅಲೇಕಿ, ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ನಿಂತಿಕಲ್ಲು ವನದುರ್ಗಾ ಸಾನಿಧ್ಯ ಸಮಿತಿ ಅಧ್ಯಕ್ಷ ರೂಪರಾಜ್ ರೈ ಕೆ, ಸಮಿತಿ ಸದಸ್ಯ ಉಮೇಶ್ ರೈ ಮರುವಂಜ, ಪೂದೆ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ವರ ಪೂದೆ, ಬೆಳಂದೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅನೂಪ್ ಆಳ್ವ, ಸಾಮಾಜಿಕ ಜಾಲತಾನದ ರವಿವರ್ಮ, ಅರುಣ್ ರೈ ಗೆಜ್ಜೆ, ಕರುಣಾಕರ ರೈ ಮರಿಕೈ ಮತ್ತಿತರ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಸಂತ ನಡುಬೈಲು ವಂದಿಸಿದರು.

Leave A Reply

Your email address will not be published.