National Savings Certificate : ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದಾದ ಯೋಜನೆಯ ಬಡ್ಡಿ ದರವನ್ನು ಇನ್ನಷ್ಟು ಹೆಚ್ಚಿಸಿದ ಸರ್ಕಾರ!
National Savings Certificate : ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು ಯಾಕಂದ್ರೆ ಇಂದಿ ನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೆ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ ಇಂತಹ ಹೂಡಿಕೆಗಾಗಿ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ ಹಣ ಸುರಕ್ಷಿತವಾಗಿರುವುದರ ಜೊತೆಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಪಡೆಯುವಂತಹಹಲವು ಯೋಜನೆಗಳು ಪೋಸ್ಟ್ ಆಫೀಸ್ನಲ್ಲಿವೆ.
ಪೋಸ್ಟ್ ಆಫೀಸ್ ನ ಉತ್ತಮ ಯೋಜನೆಗಳಲ್ಲಿ ಹಲವು ಯೋಜನೆಗಳು ಸೇರಿಕೊಂಡಿದೆ. ಅಂತಹ ಯೋಜನೆಗಳಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (National Savings Certificate) ಯೋಜನೆ ಕೂಡ ಸೇರಿದೆ. ಇತ್ತೀಚೆಗೆ ಸರ್ಕಾರ ಈ ಯೋಜನೆಯ ಮೇಲಿನ ಬಡ್ಡಿ ದರವನ್ನು ಕೂಡ ಗಣನೀಯವಾಗಿ ಹೆಚ್ಚಿಸಿದೆ.
ಬಡ್ಡಿ ದರವು ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಲಭ್ಯವಿರುವ ಬಡ್ಡಿ ದರಕ್ಕಿಂತ ಹೆಚ್ಚಿದ್ದು, ಈ ಯೋಜನೆಯ ಮೂಲಕ ಉತ್ತಮ ಲಾಭವನ್ನು ಗಳಿಸಬಹುದು. ಈ ಯೋಜನೆಯಲ್ಲಿ ಹೂಡಿಕೆದಾರರು ತೆರಿಗೆ ವಿನಾಯಿತಿಯ ಲಾಭವನ್ನೂ ಪಡೆಯುತ್ತಾರೆ. ಎನ್‌ಎಸ್‌ಸಿ ಸರ್ಕಾರಿ ಉಳಿತಾಯ ಯೋಜನೆಯಾಗಿದ್ದು, ಇದನ್ನು ಸರ್ಕಾರವು ಅಂಚೆ ಕಚೇರಿ ಮೂಲಕ ನೀಡಲಾಗುತ್ತದೆ. ಹೂಡಿಕೆಗೆ ಇದು ಸುರಕ್ಷಿತ ಆಯ್ಕೆಯಾಗಿದೆ. ಹಣಕಾಸಿನಲ್ಲಿ ರೂ 1.5 ವರೆಗೆ ಹೂಡಿಕೆ ಮಾಡಲು ನೀವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.
ಅಂಚೆ ಕಚೇರಿಯು NSC ಯೋಜನೆಯಲ್ಲಿ ವಾರ್ಷಿಕವಾಗಿ ಶೇ.7.7 ಬಡ್ಡಿ ದರವನ್ನು ನೀಡಲಾಗುತ್ತಿದೆ. 5 ವರ್ಷಗಳ ನಂತರ ಹಣವನ್ನು ಹಿಂಪಡೆಯಬಹುದು. ಮೆಚ್ಯೂರಿಟಿ ಅವಧಿಯ ಮೊದಲು ಹೂಡಿಕೆ ಮಾಡಿದ ಮೊತ್ತವನ್ನು ಹಿಂಪಡೆಯಲು ಯಾವುದೇ ಸೌಲಭ್ಯವನ್ನು ನೀಡಬೇಕಾಗಿಲ್ಲ. ಇದರಲ್ಲಿ ಸುಮಾರು 5 ವರ್ಷಗಳ ವರೆಗೆ ಹಣವನ್ನು ಹೂಡಿಕೆ ಮಾಡಬಹುದು. ಸರ್ಕಾರದ ಯೋಜನೆಯಾಗಿರುವುದರಿಂದ ಹಣ ಮುಳುಗುವ ಅಪಾಯವಿಲ್ಲ. NSC ಯಲ್ಲಿಯೂ ಸಾಲ ಸೌಲಭ್ಯ ಲಭ್ಯವಿದೆ. ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಸುಲಭವಾಗಿ ಸಾಲ ಪಡೆಯಬಹುದು.