Free Ration Policy : ಪಡಿತರ ವಿತರಣಾ ಸಮಯದಲ್ಲಿ ಮಹತ್ವದ ಬದಲಾವಣೆ! ಇನ್ನು ಮುಂದೆ ಈ ಸಮಯದಲ್ಲಿ ಮಾತ್ರ ದೊರಕುತ್ತೆ ರೇಶನ್‌!!!

Free Ration Policy : ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಕೇಂದ್ರ ಸರ್ಕಾರ (Central Government) ಪಡಿತರ ವಿತರಣೆಗೆ(Ration Card) ಸಂಬಂಧಿಸಿದಂತೆ ದೇಶದಾದ್ಯಂತ ಹೊಸ ನಿಯಮ ಜಾರಿಗೆ(Ration Card Big Update) ತಂದಿದ್ದು, ಈ ನಡುವೆ ಪಡಿತರ ಚೀಟಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿಯೊಂದು ಹೊರಬಿದ್ದಿದೆ.

 

ಇದೀಗ ಪಡಿತರ ಪಡೆಯುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಸರ್ಕಾರದ ಆದೇಶದ ಅನುಸಾರ ‘ಮೊದಲು ಬಂದವರಿಗೆ ಆದ್ಯತೆ’ಎಂಬ ಆಧಾರದ ಮೇಲೆ ಪಡಿತರ ವಿತರಣೆ(Free Ration Policy) ಮಾಡಲಾಗುತ್ತಿದ್ದು, ಮೊದಲು ಬಂದವರಿಗೆ ಅಕ್ಕಿ, ಗೋಧಿ ಜತೆಗೆ ರಾಗಿಯನ್ನೂ ಉಚಿತವಾಗಿ ನೀಡಲಾಗುತ್ತದೆ.ಪ್ರಸ್ತುತ ಪಡಿತರ ಕಾರ್ಡ್ ದಾರರು ಸಮಯ ಸಿಕ್ಕಾಗ ಅಂಗಡಿಗೆ ತೆರಳಿ ಪಡಿತರ ಪಡೆಯುವುದು ನಿಯಮವಾಗಿದೆ.ಆದರೆ, ಇನ್ನು ಮುಂದೆ ಹಾಗೆ ಮಾಡಲು ಅವಕಾಶವಿಲ್ಲ. ಪಡಿತರ ವಿತರಣೆ ವಿಧಾನ( Ration Distribution System And Timings Changed)ಮತ್ತು ಸಮಯವನ್ನು ಸರ್ಕಾರ ಬದಲಾವಣೆ ಮಾಡಿದೆ.

ಸರ್ಕಾರದ ಆದೇಶದ ಮೇರೆಗೆ ‘ಮೊದಲು ಬಂದವರಿಗೆ ಆದ್ಯತೆ’ ಎಂಬ ಆಧಾರದ ಮೇಲೆ ಪಡಿತರ ವಿತರಣೆ ಮಾಡಲಾಗುತ್ತಿದೆ. ತಡವಾದರೆ ಕಾರ್ಡುದಾರರಿಗೆ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ನೀಡಲಾಗುತ್ತದೆ. PHH ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಉಚಿತ ಅಥವಾ ಅಗ್ಗದ ದರದಲ್ಲಿ ಪಡಿತರವನ್ನು ಒದಗಿಸಲಾಗುತ್ತದೆ.ಸರ್ಕಾರದಿಂದ ಪಡಿತರ ವಿತರಣೆಯ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಈಗ ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಪಡಿತರ ಅಂಗಡಿ ತೆಗೆದಿರಿಸಲುಅವಕಾಶವಿದ್ದು, ಇದರಿಂದ ಎಲ್ಲರೂ ಆರಾಮವಾಗಿ ಪಡಿತರ ಪಡೆಯಲು ಅನುವು ಮಾಡಿಕೊಡಲಾಗಿದೆ. ಇದರ ಜೊತೆಗೆ ಮೊದಲು ಬಂದವರಿಗೆ ಸರಕಾರದಿಂದ ರಾಗಿ ಸಿಗುವ ಅವಕಾಶವಿದ್ದು, ಇನ್ನು ಮುಂದೆ ಪ್ರತಿ ತಿಂಗಳು 13ರಿಂದ 24ರವರೆಗೆ ಪಡಿತರ ವಿತರಿಸಲಾಗುವ ಕುರಿತು ಮಾಹಿತಿ ನೀಡಲಾಗಿದ್ದು, ಉತ್ತರ ಪ್ರದೇಶದಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

ಪ್ರಸ್ತುತ ಕಾರ್ಡ್‌ದಾರರಿಗೆ ಸರ್ಕಾರದಿಂದ ಉಚಿತ ಪಡಿತರ ವಿತರಿಸುತ್ತಿದ್ದು, ಏಪ್ರಿಲ್‌ ತಿಂಗಳ ಪಡಿತರ ವಿತರಣೆ ಕೂಡಾ ಇದೀಗ ಆರಂಭವಾಗಿದೆ. ಪಡಿತರ ವಿತರಣೆಯ ಹೊಸ ನಿಯಮದ ಅನುಸಾರ, ಏಪ್ರಿಲ್ 13 ರಿಂದ 24 ರವರೆಗೆ ಪಡಿತರ ವಿತರಣೆ ಮಾಡಲಾಗುತ್ತದೆ. ‘ಮೊದಲು ಬಂದವರಿಗೆ ಆದ್ಯತೆ’ ಎಂಬ ಆಧಾರದ ಮೇಲೆ ಉಚಿತವಾಗಿ ಪಡಿತರ ವಿತರಣೆ ಮಾಡಲಾಗುತ್ತದೆ. ಇದರಲ್ಲಿ ಅಂತ್ಯೋದಯ ಕಾರ್ಡ್ ದಾರರಿಗೆ 14 ಕೆಜಿ ಗೋಧಿ, 20 ಕೆಜಿ ಅಕ್ಕಿ ಮತ್ತು ಒಂದು ಕೆಜಿ ಬಾಜ್ರಾ ಒದಗಿಸಲಾಗುತ್ತಿದೆ. PHH ಜನರಿಗೆ 2 ಕೆಜಿ ಗೋಧಿ, 2 ಕೆಜಿ ಅಕ್ಕಿ ಮತ್ತು 1 ಕೆಜಿ ಬಾಜ್ರಾ ದೊರೆಯಲಿದೆ. ಬಾಜ್ರಾ ಮುಗಿದ ಬಳಿಕ ಅಕ್ಕಿಯ ಪ್ರಮಾಣವನ್ನು ಹೆಚ್ಚಳ ಮಾಡಲಾಗುತ್ತದೆ.

 

ಇದನ್ನು ಓದಿ : PAN Card : Pan Card ನಲ್ಲಿರೋ ಅಕ್ಷರಕ್ಕೂ ನಿಮ್ಮ ಹೆಸರಿಗೂ ಸಂಬಂಧ ಇದೆ! ಅತ್ಯಂತ ರಹಸ್ಯ ಮಾಹಿತಿ ಇಲ್ಲಿದೆ

Leave A Reply

Your email address will not be published.