Annamalai :ಪ್ರತಿಭಟನೆ ಮಾಡೋದಕ್ಕೂ ರೀತಿ ನೀತಿ ಇದೆ, ಬಳಸೋ ಪದಗಳ ಮೇಲೂ ಸ್ವಲ್ಪ ನಿಗಾ ಇರ್ಲಿ: ಸೈಲೆಂಟ್ ಸುನೀಲನಿಗೆ ಅಣ್ಣಾಮಲೈ ವಾರ್ನಿಂಗ್!
Annamalai : ಕರ್ನಾಟಕ ವಿಧಾನಸಭಾ(Karnataka Assembly Election) ಚುನಾವಣೆಗೆ ಟಿಕೆಟ್ ಘೋಷಿಸಿದ ಬಿಜೆಪಿ(BJP)ಗೆ ಸಂಕಷ್ಟ ಹೆಚ್ಚಾಗುತ್ತಿದೆ. 189 ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ಆದರೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿಯ ಬಂಡಾಯ ಎದುರಿಸುತ್ತಿದೆ. ಇದೀಗ ಚಾಮರಾಜಪೇಟೆ(Chamarajapete) ಯಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗಿದೆ. ಚಾಮರಾಜಪೇಟೆಯಿಂದ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್(Bhaskar Rav) ಗೆ ಟಿಕೆಟ್ ಘೋಷಿಸಲಾಗಿದೆ. ಇದು ಸೈಲೆಂಟ್ ಸುನೀಲ ಹಾಗೂ ಬೆಂಬಲಿಗರ ಆಕ್ರೋಶಕ್ಕೆ ಕಾರಣಾವಾಗಿದೆ. ಇಂದು ಏಕಾಏಕಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ನುಗ್ಗಿ ದಾಂಧಲೆ ಮಾಡಿದ್ದರು.
ಈ ಬಗ್ಗೆ ಗುರುವಾರ ಪ್ರತಿಕ್ರಿಯೆ ನೀಡಿದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಹಾಗೂ ತಮಿಳುನಾಡು(Tamilnadu) ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ(Annamalai), ಪ್ರತಿಭಟನೆ ಮಾಡೋ ಹಕ್ಕು ಎಲ್ಲರಿಗೂ ಇದೆ. ಅದು ಪ್ರಜಾಪ್ರಭುತ್ವವೇ ನೀಡಿದೆ.ಆದರೆ, ಅವರು ಬಳಸೋ ಪದಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ವಾರ್ನಿಂಗ್ ನೀಡಿದ್ದಾರೆ.
ಅಲ್ಲದೆ ಚಾಮರಾಜಪೇಟೆಯಲ್ಲಿ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ನೀಡಿದ್ದಾರೆ. ಹಿಂದೆ ಪೊಲೀಸ್ ಇಲಾಖೆಯಲ್ಲಿ ಕಮೀಷನರ್ ಆಗಿದ್ದವವರು. ಎಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ಇದೇ ವೇಳೆ ಅಣ್ಣಾಮಲೈ ಮನವಿ ಮಾಡಿದ್ದಾರೆ.
ಭಾಸ್ಕರ್ ರಾವ್‌ಗೆ ಟಿಕೆಟ್ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಭಾಸ್ಕರ್ ರಾವ್ ಬದಲು ಸುನೀಲಗೆ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು ಪಟ್ಟು ಹಿಡಿದ್ದಾರೆ. ಸುನೀಲನ ಬೆಂಬಲಿಗರ ನಡೆಯಿಂದ ಬಿಜೆಪಿ ಕಚೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಬಿಜೆಪಿ ಕಚೇರಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಚಾಮರಾಜಪೇಟೆ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಕುರಿತು ಮಾತನಾಡಿದ ರವಿ ಕುಮಾರ್, ಭಾಸ್ಕರ್ ರಾವ್ ಬದಲಾವಣೆ ಮಾಡುವಂತೆ ಮನವಿ ಮಾಡಿದ್ದಾರೆ. ನಿಮ್ಮ ಹಾಗೆ ನಾನೂ ಕೂಡ ಬಿಜೆಪಿ ಕಾರ್ಯಕರ್ತ. ನಿಮ್ಮ ಮನವಿಯನ್ನು ನಿಮ್ಮ ಪ್ರತಿನಿಧಿಯಾಗಿ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸುತ್ತೇನೆ. ನಿಮ್ಮ ಮನವಿಯನ್ನು ಕೇಂದ್ರ ನಾಯಕರಿಗೆ ಕಳುಹಿಸಿಕೊಡುತ್ತೇನೆ. ಚಾಮರಾಜಪೇಟೆ ಸದ್ಯದ ಪರಿಸ್ಥಿತಿ ಕುರಿತು ವರದಿ ನೀಡಿದ್ದೇನೆ. ನಮ್ಮ ಕಾರ್ಯಕರ್ತರಿಗೆ ನ್ಯಾಯ ಕೊಡಿಸಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಚಾಮರಾಜಪೇಟೆಯಲ್ಲಿ ಬಿಜೆಪಿ ಬಾವುಟ ಹಾರಿಸೋಣ ಎಂದು ರವಿಕುಮಾರ್ ಹೇಳಿದ್ದಾರೆ.
ಟಿಕೆಟ್ ಪಡೆದ ಬಳಿಕ ಮಾಧ್ಯಮಕ್ಕೆ ಪ್ರತಿರಕ್ರಿಯೆ ನೀಡಿದ್ದ ಭಾಸ್ಕರ್ ರಾವ್, ಎಲ್ಲರ ಬೆಂಬಲ ಪಡೆದು ಚಾಮರಾಜನಗರದಲ್ಲಿ ಗೆಲುವು ಸಾಧಿಸುತ್ತೇನೆ. ಸುನೀಲ ಜೊತೆ ಚರ್ಚಿಸುತ್ತೇನೆ. ಅವರ ಬೆಂಬಲವೂ ಅಗತ್ಯ ಎಂದಿದ್ದರು.