Revanna : ರೇವಣ್ಣ ಭವಾನಿ ದಂಪತಿಗಳಿಗೆ ತೀವ್ರ ಹಿನ್ನಡೆ, ಹಾಸನದಲ್ಲಿ ಸ್ವರೂಪ್ ಗೆ ಟಿಕೆಟ್ ಘೋಷಿಸಿದ ಕುಮಾರಸ್ವಾಮಿ

Revanna : ತೀವ್ರ ಕುತೂಹಲ ಕೆರಳಿಸಿದ್ದಂತಹಾ ಹಾಸನ ಕ್ಷೇತ್ರದ ಟಿಕೆಟ್ ಅನ್ನು ಪಡೆಯುವಲ್ಲಿ ಭವಾನಿ ರೇವಣ್ಣ (Revanna) ಅವರು ವಿಫಲರಾಗಿದ್ದಾರೆ.

 

ಕೊನೆಗೂ ಕುಮಾರಸ್ವಾಮಿ (Kumaraswamay ) ತನ್ನ ಹಠ ಸಾಧಿಸಿ ಜೆಡಿಎಸ್ (JDS) ಪಕ್ಷದ ನಿಷ್ಠಾವಂತ ಪ್ರಬಲ ಆಕಾಂಕ್ಷಿಯಾಗಿದ್ದಂತ ಸ್ವರೂಪ್ ಗೆ ಅಲ್ಲಿನ ಘೋಷಣೆ ಮಾಡಲಾಗಿದೆ. ಈ ಮೂಲಕ ರೇವಣ್ಣ ಮತ್ತು ಭವಾನಿ ರೇವಣ್ಣ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಈ ಬಗ್ಗೆ ಬೆಂಗಳೂರಿನ ಜೆಡಿಎಸ್ ಪಕ್ಷದ ಅಧಿಕೃತ ಕಚೇರಿ ಜೆಪಿ ಭವನದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಸನ ಕ್ಷೇತ್ರದ (Hassan) ಅಭ್ಯರ್ಥಿಯಾಗಿ ಸ್ವರೂಪ್ ಗೆ ಟಿಕೆಟ್ ನೀಡುತ್ತಿರುವುದಾಗಿ ಘೋಷಣೆ ಮಾಡಿದರು. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ.

ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಹಾಸನ ಕ್ಷೇತ್ರದಿಂದ ಯುವಕ ಸ್ವರೂಪ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಹಾಸನದಲ್ಲಿ ಸ್ವರೂಪ್ ಅಭಿಮಾನಿಗಳು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದ್ದಾರೆ. ಸಿಹಿ ತಿನ್ನಿಸಿ ಜೆಡಿಎಸ್ ಪಕ್ಷಕ್ಕೆ ಮತ್ತು ನಾಯಕರಿಗೆ ಜೈಕಾರ ಕೂಗಿದ್ದಾರೆ.

ಭವಾನಿ ರೇವಣ್ಣ ಅವರಿಗೆ ಹಾಸನ ಜೆಡಿಎಸ್ ಟಿಕೆಟ್ ಗಾಗಿ ಕೊನೆಯ ಕ್ಷಣದವರೆಗೂ ಹೆಚ್.ಡಿ. ರೇವಣ್ಣ ಅವರು ಮಾಡಿದ ಪ್ರಯತ್ನ ವಿಫಲವಾಗಿದೆ. ಈ ಘಟನೆಯಿಂದ. ಈಗ ಅವಮಾನಕ್ಕೆ ಒಳಗಾಗಿರುವ ರೇವಣ್ಣ ದಂಪತಿಗಳ ಮುಂದಿನ ನಡೆ ಏನಿರಬಹುದು ಎನ್ನುವುದನ್ನು ಕಾದು ನೋಡಬೇಕಿದೆ.

ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇಂದು ಜೆಡಿಎಸ್ ಪಕ್ಷದ 49 ಕ್ಷೇತ್ರಗಳಿಗೆ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಈ ಕೆಳಗಿನಂತೆ ಇದ್ದಾರೆ ಎಂದರು.

ಹೀಗಿದೆ ಜೆಡಿಎಸ್ ಪಕ್ಷದ 49 ಕ್ಷೇತ್ರಗಳ ಅಭ್ಯರ್ಥಿಗಳ 2ನೇ ಪಟ್ಟಿ

ಕುಡುಚಿ – ಆನಂದ್ ಮಾಳಗಿ
ರಾಯಭಾಗ ಎಸ್ಟಿ ಕ್ಷೇತ್ರ – ಪ್ರದೀಪ್ ಮಾಳಗಿ
ಸವದತ್ತಿ – ಸೌರಬ್ ಆನಂದ್ ಚೌಧ್ರ
ಅಥಣಿ- ಪೂಜ್ಯ ಶಶಿಕಾಂತ್ ಪಡಸಲಗಿ ಗುರುಗಳು
ಕಲಬುರ್ಗಿ ಉತ್ತರ – ನಾಸೀರ್ ಹುಸೇನ್ ಉಸ್ತಾದ್
ಬಳ್ಳಾರಿ ನಗರ – ಅಲ್ಲಾ ಭಕ್ಷ್
ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರ – ಪರಮೇಶ್ವರಪ್ಪ
ಹರಪ್ಪನಹಳ್ಳಿ – ಎಂ ಎನ್ ನೂರ್ ಅಹ್ಮದ್
ಸಿರಗುಪ್ಪ ಎಸ್ಟಿ – ಪರಮೇಶ್ವರ್ ನಾಯಕ್
ಕಂಪ್ಲಿ ಎಸ್ಟಿ – ರಾಜಾನಾಯಕ್
ಕೊಳ್ಳೇಗಾಲ ಎಸ್ಸಿ – ಪುಟ್ಟಸ್ವಾಮಿ
ಗುಂಡ್ಲುಪೇಟೆ – ಕಡಬೂರು ಮಂಜುನಾಥ್
ಕಾಪೂ- ಕು.ಸಬೀನಾ ಸಮಥ್
ಕಾರ್ಕಳ-ಶ್ರೀಕಾಂತ್ ಕೊಚ್ಚು
ಉಡುಪಿ – ದಕ್ಷತ್ ಆರ್ ಶೆಟ್ಟಿ
ಬೆಂದೂರು – ಮನ್ಸೂರ್ ಇಬ್ರಾಹಿಂ
ಕುಂದಾಪುರ – ರಮೇಶ್ ಕುಂದಾಪುರ
ಕನಕಪುರ – ನಾಗರಾಜ್
ಯಲಹಂಕ – ಎಂ.ಮುನೇಗೌಡ
ಸರ್ವಜ್ಞನಗರ – ಮೊಹಮ್ಮದ್ ಮುಸ್ತಾಫ್
ಯಶವಂತಪುರ – ಜವರೇಗೌಡ
ಪುತ್ತೂರು – ಶಾಂತಕುಮಾರ್
ಶಿರಾ-ಆರ್ ರುದ್ರೇಶ್
ಸಿಂದಗಿ- ಶ್ರಿಮತಿ ವಿಶಾಲಾಕ್ಷಿ ಶಿವಾನಂದ್
ಗಂಗಾವತಿ-ಹೆಚ್ ಆರ್ ಚೆನ್ನಕೇಶವ
ಹೆಚ್ ಡಿ ಕೋಟೆ- ಜಯಪ್ರಕಾಶ್ ಸಿ
ಜೇವರ್ಗಿ – ದೊಡ್ಡಪ್ಪ ಗೌಡ ಶಿವಲಿಂಗಪ್ಪಗೌಡ
ಶಾ ಪುರ – ಗುರುಲಿಂಗಪ್ಪ ಗೌಡ
ಕಾರವಾರ – ಚೈತ್ರ ಕೋಟಾಕಾರ್
ಪುತ್ತೂರು – ದಿವ್ಯಪ್ರಭಾ
ಕಡೂರು – ವೈಎಸ್ ವಿ ದತ್ತಾ
ಹೊಳೇನರಸೀಪುರ – ಹೆಚ್ ಡಿ ರೇವಣ್ಣ
ಬೇಲೂರು -ಕೆಎಸ್ ಲಿಂಗೇಶ್
ಸಕಲೇಶಪುರ – ಹೆಚ್ ಕೆ ಕುಮಾರಸ್ವಾಮಿ
ಅರಕಲಗೂಡು – ಎ ಮಂಜು
ಶ್ರವಣಬೆಳಗೋಳ – ಸಿಎನ್ ಬಾಲಕೃಷ್ಣ
ಮಹಾಲಕ್ಷ್ಮೀಲೇಔಟ್ – ರಾಜಣ್ಣ
ಹಿರಿಯೂರು – ರವೀಂದ್ರಪ್ಪ
ಮಾಯಕೊಂಡ ಎಸ್ಸಿ – ಆನಂದಪ್ಪ
ಯಲ್ಲಾಪುರ- ಡಾ.ನಾಗೇಶ್ ನಾಯಕ್
ಹಾಸನ- ಸ್ವರೂಪ್ ಪ್ರಕಾಶ್
ಕುಮಾರಸ್ವಾಮಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು, ಹಾಸನ ಕ್ಷೇತ್ರದ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಎಲ್ಲವೂ ಗೊತ್ತಿದೆ. ಕಳೆದ ಎರಡು ವರ್ಷಗಳಿಂದ ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ನಿಲ್ಲಬೇಕು ಅಂತ ಪ್ರಯತ್ನಿಸಿದರು ಎಂದರು.

ಹಾಸನದಲ್ಲಿ ಜೆಡಿಎಸ್ ಪಕ್ಷ ಒಡೆಯಬೇಕು ಎನ್ನುವ ಪ್ರಯತ್ನ ನಡೆಯುತ್ತಿತ್ತು. ಆದ್ರೇ ಅದು ಯಾವುದು ಸಾಧ್ಯವಾಗಲಿಲ್ಲ. ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ವರೂಪ್ ಅವರಿಗೆ ಟಿಕೆಟ್ ನೀಡಲಾಗುತ್ತಿದೆ. ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬುದಾಗಿ ತಿಳಿಸಿದರು.

Leave A Reply

Your email address will not be published.