Bhavani Revanna: ಭವಾನಿ ರೇವಣ್ಣನ ಸಮಾಧಾನಕ್ಕಾಗಿ ಹೊಸ ಸೂತ್ರ ಹೆಣೆದ JDS ವರಿಷ್ಠರು! ಈ ಕ್ಷೇತ್ರದಿಂದ ಸ್ಪರ್ಧಿಸಲು ಭವಾನಿಗೆ ಸೂಚನೆ!

JDS – Bhavani Revanna :ಚುನಾವಣೆ ಹತ್ತಿರವಾದರೂ ಹಾಸನ(Hassan) ದ ಜೆಡಿಎಸ್(JDS) ತಿಕ್ಕಾಟ ಮಾತ್ರ ಕಗ್ಗಂಟಾಗಿಯೇ ಉಳಿದಿದೆ. ಈ ವಿಚಾರಕ್ಕೆ ಬ್ರೇಕ್ ಹಾಕಲು ಜೆಡಿಎಸ್ ವರಿಷ್ಠರು ಹೊಸ ಸೂತ್ರ ಹೆಣೆಯುತ್ತಿದ್ದು, ಇದರಿಂದ ಭವಾನಿ ರೇವಣ್ಣನ(Bhavani Revanna) ವರನ್ನು ಸಮಾಧಾನ ಪಡಿಸಲು ದೇವೇಗೌಡ(Devegowda) ಹಾಗೂ ಕುಮಾರಸ್ವಾಮಿ(Kumaraswamy) ಪ್ಲಾನ್ ಮಾಡಿದ್ದಾರೆ

ಜೆಡಿಎಸ್​(JDS) ಈಗಾಗಲೇ ತನ್ನ ಅಭ್ಯರ್ಥಿಗಳ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನಡೆಸಿದ್ದರೂ ಅವಥಿಗೆ ಹಾಸನ ಟಿಕೆಟ್​ ಕಗ್ಗಂಟಾಗಿದೆ. ಹಾಸನ ಟಿಕೆಟ್ ವಿಚಾರಕ್ಕೆ ಸಹೋದರರು ಜಿದ್ದಿಗೆ ಬಿದ್ದಿದ್ದಾರೆ. ಪತ್ನಿ ಭವಾನಿಗೆ(JDS – Bhavani Revanna) ಟಿಕೆಟ್ ಕೊಡಿಸಲು ಹೆಚ್‌.ಡಿ ರೇವಣ್ಣ ಪಟ್ಟು ಹಿಡಿದು, ಸಮರವನ್ನೇ ಸಾರಿದ್ದಾರೆ. ಆದ್ರೆ, ಹೆಚ್‌ಡಿ ಕುಮಾರಸ್ವಾಮಿ ಮಾತ್ರ ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್‌ ಕೊಟ್ಟೇ ತೀರುತ್ತೇನೆಂದು ಹೇಳುತ್ತಿದ್ದಾರೆ. ಇದೀಗ ಇದರ ಮಧ್ಯ ಪ್ರವೇಶಿಸಿರುವ ದೊಡ್ಡ ಗೌಡರು, ಕುಮಾರಸ್ವಾಮಿಯೊಡನೆ ಸೇರಿಕೊಂಡು ಹಾಸನ ಟಿಕೆಟ್​ ಗೊಂದಲಕ್ಕೆ ಅಂತ್ಯ ಹಾಡಲು ಹೊಸ ಸೂತ್ರ ರೂಪಿಸಿದ್ದು, ಈ ಒಂದು ದಾಳದಿಂದ ರೇವಣ್ಣ ಕುಟುಂಬವನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.

ಹೌದು, ಇದೀಗ ಅಂತಿಮವಾಗಿ ಕುಮಾರಸ್ವಾಮಿ ಹಾಗೂ ದೇವೇಗೌಡ ಕೂಡಿಕೊಂಡು ಭವಾನಿ ಅವರಿಗೆ ಮೈಸೂರಿ(Mysore)ನ ಚಾಮರಾಜ(Chamaraja) ಕ್ಷೇತ್ರದ ಟಿಕೆಟ್​ ನೀಡಿದರೆ ಹೇಗೆ ಎನ್ನುವ ಚರ್ಚೆಗಳುನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಹೆಚ್ಚಿವೆ. ಈ ಕಾರಣದಿಂದ ಭವಾನಿ ಅವರನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎನ್ನುವುದು ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಹಾಸನ ಟಿಕೆಟ್​ ಬಗೆಹರಿಸುವ ಪ್ಲಾನ್ ಮಾಡಿದ್ದಾರೆ.

ಚಾಮರಾಜ ಕ್ಷೇತ್ರದಲ್ಲಿ ಒಟ್ಟು 2,28,508 ಮತದಾರರಿದ್ದು, ಈ ಪೈಕಿ 1,14,639 ಪುರುಷರು ಹಾಗೂ 1,13,820 ಮಹಿಳೆಯರು ಇದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಇವರನ್ನು ವರ್ಗೀಕರಿಸುವುದಾದರೆ, ಬ್ರಾಹ್ಮಣರು, ವೀರಶೈವ-ಲಿಂಗಾಯತರು, ಕುರುಬರು, ಮುಸ್ಲಿಮರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಶಿಕ್ಷಿತರ ಈ ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮೊದಲಿನಿಂದಲೂ ಒಕ್ಕಲಿಗರಿಗೇ ಟಿಕೆಟ್‌ ನೀಡುತ್ತ ಬಂದಿವೆ. ಹಾಗೆಯೇ ಇಲ್ಲಿ ಗೆದ್ದವರೆಲ್ಲರೂ ಒಕ್ಕಲಿಗರೇ ಆಗಿದ್ದಾರೆ. ಹೀಗಾಗಿ ಈ ಬಾರಿಯೂ ಸಹ ಭವಾನಿ ರೇವಣ್ಣ ಅವರನ್ನು ಇಲ್ಲಿ ಕಣಕ್ಕಿಳಿಸುವ ಬಗ್ಗೆಯೂ ದೇವೇಗೌಡ ಹಾಗೂ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ.

ಆದರೆ ಇದೆಲ್ಲದರ ನಡುವೆ ಭವಾನಿ ರೇವಣ್ಣ ಅವರು ಹಾಸನ ಬಿಟ್ಟು ಚಾಮರಾಜ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಒಪ್ಪಿಕೊಳ್ಳುತ್ತಾರಾ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಅಂದಹಾಗೆ ಭವಾನಿ ಅವರಿಗೆ ತಾವು ರಾಜಕೀಯಕ್ಕೆ ಬರಬೇಕೆಂಬುದು ಇಂದು ನೆನ್ನೆಯ ಆಸೆಯಲ್ಲ. ಸುಮಾರು 18 ವರುಷಗಳಿಂದಲೂ ಅವರು ಹರಸಾಹಸ ಪಡುತ್ತಿದ್ದಾರೆ. ಆದರೆ ಕೊನೆಯ ಘಳಿಗೆಯಲ್ಲಿ ಎಲ್ಲವೂ ವ್ಯರ್ಥವಾಗುತ್ತಿದೆ. ರೇವಣ್ಣ ರಾಜಕೀಯ ಪ್ರವೇಶದೊಂದಿಗೆ ಭವಾನಿ ರೇವಣ್ಣ ಅವರ ರಾಜಕೀಯ ಆಸೆಯೂ ಹೆಚ್ಚಾಗ ತೊಡಗಿತ್ತು. ಆದರೆ 1999ರಲ್ಲಿ ಎಚ್‌ಡಿ ರೇವಣ್ಣ ಸೋಲು ಕಾಣುತ್ತಾರೆ. ಇದಾದ ಬಳಿಕ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಭವಾನಿ ರೇವಣ್ಣ ಹೊಳೆನರಸೀಪುರದಲ್ಲಿ ಮತ್ತೆ ಪಕ್ಷ ಸಂಘಟಿಸುತ್ತಾರೆ.

2004ರ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆಯನ್ನು ಎಚ್‌ಡಿ ದೇವೇಗೌಡರ ಬಳಿ ಭವಾನಿ ರೇವಣ್ಣ ವ್ಯಕ್ತಪಡಿಸಿದ್ದು, ತಮ್ಮ ತವರು ಕೆಆರ್‌ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಭವಾನಿ ರೇವಣ್ಣ ರೆಡಿಯಾಗಿದ್ದರು. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ, ಸಂಚಲನ ಸೃಷ್ಟಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಕುಟುಂಬ ರಾಜಕಾರಣ ಎಂಬ ಕಾರಣ ನೀಡಿ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನಿರಾಕರಿಸಲಾಯಿತು. ಬಳಿಕ 2008 ಮತ್ತು 2013ರಲ್ಲಿ ಭವಾನಿ ರೇವಣ್ಣಗೆ ಟಿಕೆಟ್‌ ನೀಡಲೇ ಇಲ್ಲ. 2018ರಲ್ಲಿ ಭವಾನಿ ರೇವಣ್ಣ ಬೇಲೂರು ಕ್ಷೇತ್ರದಲ್ಲಿ ಸ್ಪರ್ಧಿಸೋದು ಫಿಕ್ಸ್‌ ಎನ್ನಲಾಗಿತ್ತು. ಆದರೆ, ಮತ್ತೆ ಕುಟುಂಬ ರಾಜಕಾರಣ ಎಂದು ಟಿಕೆಟ್‌ ನಿರಾಕರಿಸಲಾಗಿತ್ತು.

ಅದಾದ ಬಳಿಕ 2022ರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಭವಾನಿ ರೇವಣ್ಣ ವ್ಯಕ್ತಪಡಿಸಿದ್ದರು. ಆದರೆ, ಆಗಲೂ ಭವಾನಿ ಅವರಿಗೆ ಟಿಕೆಟ್‌ ನಿರಾಕರಿಸಿ ಅವರ ಮಗ ಸೂರಜ್‌ ರೇವಣ್ಣಗೆ ಟಿಕೆಟ್‌ ನೀಡಿ ಭವಾನಿ ಅವರನ್ನು ರಾಜಕೀಯಕ್ಕೆ ಬರದಂತೆ ತಡೆಯಲಾಯಿತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಭವಾನಿ ರೇವಣ್ಣನವರ ರಾಜಕೀಯ ಭವಿಷ್ಯ ಏನಾಗುತ್ತದೆ ಎಂದು ಕಾದುನೋಡಬೇಕಿದೆ.

Leave A Reply

Your email address will not be published.