3rd list of BJP candidates : ಬಿಜೆಪಿ 3ನೇ ಪಟ್ಟಿಯಲ್ಲೂ ಹಿರಿಯರ ಹೆಸರಿರೋದು ಡೌಟ್! ಯಾರಿಗೆಲ್ಲಾ ಸಿಗಬಹುದು ಗೊತ್ತಾ ಟಿಕೇಟ್!

3rd list of BJP candidates : ಕಾಂಗ್ರೆಸ್‌(Congress) ಹಾಗೂ ಜೆಡಿಎಸ್‌(JDS) ಪಾರ್ಟಿಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದರೂ ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡದ ಬಿಜೆಪಿ(BJP) ಸದ್ಯ ತೂಗಿ-ಅಳೆದು ಕೊನೆಗೂ ಎರಡು ಹಂತದಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿ (3rd list of BJP candidates) ಬಿಡುಗಡೆ ಗೊಳಿಸಿದೆ. ಆದರೂ ಇನ್ನೂ 12 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುವುದನ್ನು ಬಾಕಿ ಇರಿಸಿಕೊಂಡಿದೆ. ಬಿಜೆಪಿಯ ಈ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಯಾರಿಗೆಲ್ಲಾ ಟಿಕೆಟ್‌ ಸಿಗಬಹುದು ಎನ್ನುವ ಅಂದಾಜು ಇಲ್ಲಿದೆ.

 

ಹೌದು, ಬಿಜೆಪಿ ಎರಡು ಪಟ್ಟಿಗಳು ರಿಲೀಸ್ ಆದ ಬೆನ್ನಲ್ಲೇ ಬಂಡಾಯಗಳು ಹೆಚ್ಚಾಗುತ್ತಿವೆ. ಕೆಲವೆಡೆ ಹಾಲಿ ಶಾಸಕರಿಗೇ ಕೋಕ್ ಕೊಡಲಾಗಿದ್ದು, ಅಚ್ಚರಿ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ 12 ಕ್ಷೇತ್ರಗಳ ಟಿಕೆಟ್ ಘೋಷಣೆಯೂ ಭಾರೀ ಕುತೂಹಲ ಮೂಡಿಸಿದೆ. ಯಾರಿಗೆ ಟಿಕೆಟ್ ಸಿಗುತ್ತೆ, ಯಾರಿಗೆ ಇಲ್ಲ ಎಂಬ ಪ್ರಶ್ನೆ ಈಗಲೇ ಹಲವರಲ್ಲಿ ಕಾಡಲು ಶುರುವಾಗಿದೆ.

ಜಗದೀಶ್‌ ಶೆಟ್ಟರ್‌(Jagadeesh Shetter) ಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಿದ್ದು, ಈ ನಡುವೆ ಅವರು ತಮ್ಮ ವರಸೆ ಬದಲಾಯಿಸಿದ್ದು, ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ತನಗೆ ಟಿಕೆಟ್‌ ನೀಡದೇ ಇದ್ದರೂ, ತಾವು ಸೂಚಿಸಿದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಹುಬ್ಬಳ್ಳಿ-ಸೆಂಟ್ರಲ್‌ ವಿಧಾನಸಭಾ ಕ್ಷೇತ್ರಕ್ಕೆ ಮಹೇಶ್‌ ತೆಂಗಿನಕಾಯಿ(Mahesh Tenginkai)ಅವರ ಹೆಸರು ಫೈನಲ್‌ ಆಗುವ ಸಾಧ್ಯತೆ ಇದೆ. ಕೋರ್‌ ಕಮಿಟಿ ಸಭೆಯಲ್ಲಿ ಜಗದೀಶ್‌ ಶೆಟ್ಟರ್‌ ಕೂಡ ಇವರ ಹೆಸರನ್ನೇ ಶಿಫಾರಸು ಮಾಡಿದ ಬಳಿಕ ಅವರಿಗೆ ಟಿಕೆಟ್‌ ಸಿಗುವುದು ಹೆಚ್ಚೂ ಕಡಿಮೆ ಖಚಿತವಾಗಿದೆ.

ಶಿವಮೊಗ್ಗ(Shivmogga) ನಗರದಲ್ಲಿ ಕಾಂತೇಶ್‌(Kantesh) ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಎನ್ನಲಾಗಿದ್ದರೂ, ಹೈಕಮಾಂಡ್‌ ಬೇರೆಯೇ ನಿರ್ಧಾರ ತಳೆಯುವ ಸಾಧ್ಯತೆ ಇದೆ. ಈಶ್ವರಪ್ಪ ನಿವೃತ್ತಿ ಬೆನ್ನಲ್ಲಿಯೇ ಈ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ಸಿಗುತ್ತದೆ ಅನ್ನೋದೇ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಇನ್ನು ಕೃಷ್ಣರಾಜ ಕ್ಷೇತ್ರದಲ್ಲಿ ರಾಮದಾಸ್‌(Ram das) ಗೂ ಟಿಕೆಟ್‌ ಮಿಸ್‌ ಆಗುವ ಸಾಧ್ಯತೆ ಇದೆ.

ಅಂದಹಾಗೆ ಮೊದಲ ಪಟ್ಟಿ ಬಿಡುಗಡೆಗೆ ಒಂದು ಸುದ್ದಿಗೋಷ್ಠಿ ಮಾಡಿ ವ್ಯವಸ್ಥಿತವಾಗಿ ಹೆಸರನ್ನು ಘೋಷಣೆ ಮಾಡಿದ್ದ ಬಿಜೆಪಿ ಪಕ್ಷ ತನ್ನ 2ನೇ ಲಿಸ್ಟ್‌ಅನ್ನು ಹೆಚ್ಚಿನ ಸುದ್ದಿಯಲ್ಲದೆ ಒಂದು ಪಿಡಿಎಫ್‌ ಫೈಲ್‌ ಹಂಚಿಕೊಳ್ಳುವ ಮೂಲಕ ಬಿಡುಗಡೆ ಮಾಡಿದೆ. 2ನೇ ಪಟ್ಟಿಯಲ್ಲಿ ಬಿಜೆಪಿ 23 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ. ಅದರೊಂದಿಗೆ ಒಟ್ಟು 212 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಆದಂತಾಗಿದೆ. ಇನ್ನೂ 12 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಬಾಕಿ ಇದ್ದು, ಇದರಲ್ಲೂ ಹಿರಿಯರಿಗೆ ಟಿಕೆಟ್‌ ಅನುಮಾನ ಎನ್ನುವ ಲಕ್ಷಣಗಳ ಕಾಣುತ್ತಿವೆ.

ಇದನ್ನೂ ಓದಿ: Y S V Datta: ಮತ್ತೆ JDS ಗೂಡು ಸೇರಿದ ವೈ ಎಸ್ವಿ ದತ್ತ! ಕಡೂರಿನಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿಯಲಿದ್ದಾರೆ ಗಣಿತ ಮೇಷ್ಟ್ರು!

Leave A Reply

Your email address will not be published.