Register Property : ಜಸ್ಟ್ 10 ನಿಮಿಷದಲ್ಲಿ ಆಸ್ತಿ ನೋಂದಣಿ ಮಾಡುವ ವಿಧಾನ.! ಇಲ್ಲಿದೆ ಸರಳ ಪರಿಹಾರ

Register property: ಆಸ್ತಿ ನೋಂದಣಿ (Register property) ಮಾಡಲು ಸಾಕಷ್ಟು ಭಾರೀ ಸರ್ಕಾರಿ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ಉಂಟಾಗುತ್ತದೆ. ಸಾಕಷ್ಟು ಪ್ರಯತ್ನಪಟ್ಟು ಕೊನೆಗೆ ಆಗುತ್ತದೆ. ಆದರೆ, ನೀವು ಇಷ್ಟೆಲ್ಲಾ ಕಷ್ಟಪಡುವ ಅಗತ್ಯವಿಲ್ಲ. ಕೇವಲ ಹತ್ತೇ ನಿಮಿಷದಲ್ಲಿ ಆಸ್ತಿ ನೋಂದಣಿ ಮಾಡಬಹುದು. ಹೇಗೆ? ಇಲ್ಲಿದೆ ವಿಧಾನ!!.

 

ರಾಜ್ಯ ಸರ್ಕಾರ (state government) ಆಸ್ತಿ ನೋಂದಣಿ ಕಾರ್ಯವನ್ನು ಶೀಘ್ರ ಮತ್ತು ಸರಳಗೊಳಿಸುವ ನಿಟ್ಟಿನಲ್ಲಿ ಹಲವು ಕ್ರಮಕೈಗೊಳ್ಳುತ್ತಿದೆ. ಸುರಕ್ಷತೆ ಕ್ರಮಗಳೊಂದಿಗೆ ಸ್ಥಿರಾಸ್ತಿ, ಚರಾಸ್ತಿ ಇತರೆ ನೋಂದಣಿ ಪ್ರಕ್ರಿಯೆ 10 ನಿಮಿಷದಲ್ಲಿ ಪೂರ್ಣಗೊಳ್ಳಲಿದೆ. ಕಾವೇರಿ 2.0 ತಂತ್ರಾಂಶ ಜೂನ್ 25ರ ವೇಳೆಗೆ ರಾಜ್ಯದ ಎಲ್ಲಾ 260 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಬಳಕೆದಾರರು ಅಗತ್ಯ ವಿವರ, ದಾಖಲೆ ಅಪ್ಲೋಡ್ ಮಾಡಿ, ಶುಲ್ಕ ಪಾವತಿಸಿ, ನೋಂದಣಿಗೆ ಸಮಯ ನಿಗದಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈಗಾಗಲೇ 24 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಬಳಕೆಯಲ್ಲಿದೆ. ನಿರ್ವಹಣೆಯಲ್ಲಿ ಎದುರಾಗುವ ತೊಂದರೆಗಳನ್ನು, ಸವಾಲುಗಳನ್ನು ಗುರುತಿಸಿ ಸರಿಪಡಿಸಿಕೊಳ್ಳುತ್ತಿದ್ದು, ಹಂತ ಹಂತವಾಗಿ ರಾಜ್ಯದ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೂ ವಿಸ್ತರಿಸುವ ಕಾರ್ಯವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕೈಗೊಂಡಿದೆ.

ಪಾಸ್ಪೋರ್ಟ್ ಕಚೇರಿ ಮಾದರಿಯ ನೋಂದಣಿ ಸೇವೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ಪೂರಕವಾಗಿ ಕಚೇರಿಗಳ ನವೀಕರಣ, ಪುನರ್‌ವಿನ್ಯಾಸ ಕಾರ್ಯವೂ ಪ್ರಗತಿಯಲ್ಲಿದೆ. ಕಚೇರಿಯಲ್ಲಿ ಉಪನೋಂದಣಾಧಿಕಾರಿ ಕೊಠಡಿಗೆ ಅಭಿಮುಖವಾಗಿ ಸಾಲಾಗಿ ಕೌಂಟರ್‌ಗಳಿರಲಿವೆ. ಬಳಕೆದಾರರು ನೋಂದಾಯಿಸಿಕೊಂಡ ಸಮಯಕ್ಕೆ ಯಾವ ಕೌಂಟರ್‌ಗೆ ಹೋಗಬೇಕು ಎಂಬ ಮಾಹಿತಿ ನೀಡಲಾಗುತ್ತದೆ. ಕೌಂಟಿರ್ ನಲ್ಲಿ ಕೇವಲ ನೋಂದಣಿ ಮಾಡಿಕೊಡುವ ಮತ್ತು ನೋಂದಣಿ ಮಾಡಿಸಿಕೊಳ್ಳುವ ವ್ಯಕ್ತಿಗಳ ಭಾವಚಿತ್ರ ಮತ್ತು ಬೆರಳಚ್ಚು ಪಡೆಯುವ ಪ್ರಕ್ರಿಯೆ ಮಾತ್ರ ನಡೆಯಲಿದೆ. ನಂತರ ಕೇವಲ 10 ರಿಂದ 15 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ನೂತನ ‘ಕಾವೇರಿ- 2.0’ ತಂತ್ರಾಂಶದಡಿ ಬಳಕದಾರರು ಸರಳ ವಿಧಾನದ ಮೂಲಕ ಅಗತ್ಯ ಮಾಹಿತಿಗಳೊಂದಿಗೆ ಉದ್ದೇಶಿತ ಆಸ್ತಿಯ ವಿವರವನ್ನು ದಾಖಲಿಸಬೇಕು. ಆಸ್ತಿಯ (property) ಸರ್ವೇ ನಂಬರ್ ಗಳನ್ನು ಕಾವೇರಿ 2.0 ದಲ್ಲಿ ದಾಖಲಿಸುತ್ತಿದ್ದಂತೆ ಆಸ್ತಿಯ ಸ್ಥಿತಿಗತಿಯ ಮಾಹಿತಿ ತಿಳಿಯುತ್ತದೆ. ಏನಾದರೂ ವ್ಯಾಜ್ಯ, ತಡೆಯಾಜ್ಞೆ ಇದ್ದರೆ ಆ ಹಂತದಲ್ಲಿಯೇ ಪ್ರಕ್ರಿಯೆ ಸ್ಥಗಿತವಾಗಲಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಕೊನೆಯ ಕ್ಷಣದವರೆಗೂ ಅಸ್ತಿಯ ಸ್ಥಿತಿಗತಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬಹುದಾಗಿದೆ ಎಂದು ನೋಂದಣಿ ಮಹಾವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರಾದ ಬಿ.ಆರ್.ಮಮತಾ ತಿಳಿಸಿದ್ದಾರೆ.

ಎಲ್ಲಾ ವಿವರ, ದಾಖಲೆಗಳು ಸಮರ್ಪಕವಾಗಿದ್ದರೆ ಶುಲ್ಕ ಪಾವತಿಗೆ ಅವಕಾಶವಾಗಲಿದೆ. ನಗದು ರೂಪದಲ್ಲಿ ಶುಲ್ಕ ಪಾವತಿಗೆ ಅವಕಾಶವಿಲ್ಲ. ಆನ್‌ಲೈನ್ ಪೇಮೆಂಟ್, ಯುಪಿಐ, ಕ್ರೆಡಿಟ್/ ಡೆಬಿಟ್ ಕಾರ್ಡ್, ಚೆಕ್/ ಡಿಡಿ ಮೂಲಕವೇ ಶುಲ್ಕ ಪಾವತಿಸಬೇಕು. ನಂತರ ಲಭ್ಯವಿರುವ ದಿನ ಸಮಯವನ್ನು ಬಳಕೆದಾರರೇ ಆಯ್ಕೆ ಮಾಡಿಕೊಂಡು ಆ ದಿನ ನಿಗದಿತ ಸಮಯಕ್ಕೆ 15 ನಿಮಿಷ ಮೊದಲೇ ಅಲ್ಲಿಗೆ ಹೋಗಿ ಮುಂದಿನ ಪ್ರಕ್ರಿಯೆ ಸುಲಭವಾಗಲಿದೆ. ಎಲ್ಲಾ ಮಾಹಿತಿಗಳನ್ನೂ ಸ್ವತಃ ಬಳಕೆದಾರರೇ ಭರ್ತಿ ಮಾಡಬೇಕಿರುವುದರಿಂದ ಕಾಗದ ಪತ್ರಗಳಲ್ಲಿ ದೋಷ, ತಪ್ಪುಗಳಿಗೆ ಮುಕ್ತಿ ಸಿಗಲಿದೆ.

ನೋಂದಣಿಗೆ ಬರುವ ಮೊದಲೇ ಹಲವು ಸುತ್ತಿನಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಬಾಕಿ ಪ್ರಕ್ರಿಯೆ ಕೇವಲ 10-15 ನಿಮಿಷದಲ್ಲಿ ಪೂರ್ಣಗೊಳ್ಳುತ್ತದೆ. ಹಾಗಾಗಿ, ಸರಾಸರಿ ನೋಂದಣಿ ಪ್ರಮಾಣವು ‘ಕಾವೇರಿ 2.0’ ತಂತ್ರಾಂಶ ಬಳಕೆಯಿಂದಾಗಿ ದುಪ್ಪಟ್ಟಾಗುವ ನಿರೀಕ್ಷೆ ಇದೆ. “ಬೆಳಗಾವಿ ದಕ್ಷಿಣ ಕಚೇರಿಯಲ್ಲಿ ಪ್ರತಿದಿನ 40 ನೋಂದಣಿ ನಡೆಯುತ್ತಿದ್ದು, ಈ ಬಾರೀ ಒಂದೇ ದಿನದಲ್ಲಿ 80ಕ್ಕೂ ಹೆಚ್ಚು ನೋಂದಣಿ ನಡೆಯುತ್ತಿದೆ” ಎಂದು ಸಹಾಯಕ ನೋಂದಣಿ ಮಹಾಪರಿವೀಕ್ಷಕರು (ಗಣಕೀಕರಣ) ಎಚ್.ಎಲ್. ಪ್ರಭಾಕರ ತಿಳಿಸಿದ್ದಾರೆ.

Leave A Reply

Your email address will not be published.