ChatGPT ಯಿಂದ ಪ್ರೋಗ್ರಾಮರ್ಗಳು ಮತ್ತು ಹ್ಯಾಕರ್ಗಳಿಗೆ ಅವಕಾಶ : ಇದರಲ್ಲಿರೋ ದೋಷ ಪತ್ತೆ ಹಚ್ಚಿದ್ರೆ ನಿಮಗೆ ಸಿಗುತ್ತೆ ಕ್ಯಾಶ್ ಪ್ರೈಸ್!
ChatGPT : ಯಾವುದೇ ಪ್ರಶ್ನೆಗಳಿಗೆ ತ್ವರಿತ ಪ್ರತಿಕ್ರಿಯೆಗಳೊಂದಿಗೆ ಬಳಕೆದಾರರನ್ನು ಆಶ್ಚರ್ಯಗೊಳಿಸುವ ಚಾಟ್ಜಿಪಿಟಿ, ಪ್ರೋಗ್ರಾಮರ್ಗಳು ಮತ್ತು ಹ್ಯಾಕರ್ಗಳಿಗೆ ಅವಕಾಶವೊಂದನ್ನು ನೀಡಿದ್ದು, ಬಗ್ ಬೌಂಟಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ತನ್ನಲ್ಲಿರುವ ದೋಷಗಳನ್ನು ಪತ್ತೆ ಹಚ್ಚಲು ತಿಳಿಸಿದೆ.
ಅಷ್ಟೇ ಅಲ್ಲದೆ, ಚಾಟ್ಜಿಪಿಟಿಯಲ್ಲಿ (ChatGPT) ದೋಷಗಳನ್ನು ಹುಡುಕಲು ಓಪನ್ಎಐ ಬಳಕೆದಾರರಿಗೆ 16 ಲಕ್ಷದ ವರೆಗೂ ಬಹುಮಾನ ನೀಡಲು ಮುಂದಾಗಿದೆ. ಬಗ್ ಬೌಂಟಿ ಪ್ರೋಗ್ರಾಂ ತನ್ನ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಸುಧಾರಿಸಲು ಈ ಪ್ಲಾನ್ ಮಾಡಿದ್ದು, ಮಂಗಳವಾರ ಈ ಬಗ್ ಬೌಂಟಿ ಪ್ರೋಗ್ರಾಂ ಅನ್ನು ಆರಂಭಿಸಲಾಗಿದೆ. ನೀವು ಯಾವ ರೀತಿಯ ದೋಷಗಳನ್ನು ಪತ್ತೆ ಮಾಡುತ್ತೀರೋ ಅದರ ಆಧಾರದ ಮೇಲೆ ಹಣವನ್ನು ನೀಡಲಾಗುತ್ತದೆ. ಪ್ರತಿ ದೋಷಕ್ಕೆ ಕನಿಷ್ಠ $200 ಅನ್ನು ನೀಡಲಾಗುತ್ತದೆ. ಹೀಗಾಗಿ ಇದರಲ್ಲಿ ಹೆಚ್ಚು ದೋಷಗಳನ್ನು ಪತ್ತೆ ಮಾಡಿದೆ ಇನ್ನೂ ಹೆಚ್ಚಿನ ಹಣವನ್ನು ಪಡೆದುಕೊಳ್ಳಬಹುದು.
ಗೌಪ್ಯತೆ ನಿಯಮಗಳ ಶಂಕಿತ ಉಲ್ಲಂಘನೆಗಾಗಿ ಇಟಲಿಯಲ್ಲಿ ಈ ಚಾಟ್ಜಿಪಿಟಿನ್ನು ನಿಷೇಧಿಸಲಾಗಿದೆ. ಚಾಟ್ಜಿಪಿಟಿ ಕೆಲವು ಸಂದರ್ಭದಲ್ಲಿ ಅಚಾತುರ್ಯ ಎಸಗಿದೆ ಎನ್ನಲಾಗಿದೆ.ಹೀಗಾಗಿ ದೋಷ ಪತ್ತೆ ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬಗ್ ಬೌಂಟಿ ಪ್ರೋಗ್ರಾಂ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅದರ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.