Mosquito Killer Lamp: ಬೇಸಿಗೆಯಲ್ಲಿ ಸೊಳ್ಳೆಗಳ ಕಾಟವೇ? ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಪರಿಸರ ಸ್ನೇಹಿ ಸೊಳ್ಳೆ ಕಿಲ್ಲರ್ ಸಾಧನ!
Mosquito Killer Lamp: ಭಾರತದಲ್ಲಿ ನಾವು ಎಲ್ಲೆ ವಾಸಿಸುತ್ತಿರಲಿ, ಸೊಳ್ಳೆಗಳ ಕಾಟದಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೇನೋ?ಸೊಳ್ಳೆಗಳು ಹೆಚ್ಚಾಗಿ ಕಿವಿಯ ಸುತ್ತಲೂ ಶಬ್ದ ಮಾಡಿಕೊಂಡು ಕಿರಿಕಿರಿಯನ್ನುಂಟು ಮಾಡುತ್ತದೆ. ಸೊಳ್ಳೆ ಕಚ್ಚಿದಾಗ ಚರ್ಮವು ಕೆಂಪಾಗುವುದಲ್ಲದೆ ತುರಿಕೆ ಇನ್ನಿತರ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿಯೂ ಚಿಕ್ಕ ಮಕ್ಕಳೇ ಸೊಳ್ಳೆಗಳ ಟಾರ್ಗೆಟ್ ಎಂದರೆ ತಪ್ಪಾಗದು. ಸೊಳ್ಳೆಯಿಂದ ಪಾರಾಗುವುದು ಹೇಗಪ್ಪಾ ಎಂದು ಆಲೋಚಿಸುವವರೇ ಹೆಚ್ಚು.
ಅದರಲ್ಲಿಯೂ ಬೇಸಿಗೆಯ ಬೇಗೆಗೆ ಜನ ತತ್ತರಿಸಿ ಹೋದರೆ ಮತ್ತೊಂದೆಡೆ ಸೊಳ್ಳೆಗಳ ಕಾಟ ಹೈರಾಣಾಗಿಸಿಬಿಡುತ್ತೆ. ನೀವು ಕೂಡ ಸೊಳ್ಳೆಗಳ ಕಾಟದಿಂದ ಬೇಸತ್ತು ಹೋಗಿದ್ದರೆ, ಈ ಸಮಸ್ಯೆಗೆ ಇನ್ಮುಂದೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.ಸೊಳ್ಳೆ ಕಿಲ್ಲರ್ ಸಾಧನ(Mosquito Killer Lamp) ಸಾಧನ ಪರಿಸರ ಸ್ನೇಹಿಯಾಗಿದ್ದು, ಹೆಚ್ಚಿನ ಪ್ರಯೋಜನ ನೀಡಬಲ್ಲದು.
ಕಳೆದ ಕೆಲವು ವಾರಗಳಲ್ಲಿ ಬೆಂಗಳೂರು ಸೇರಿದಂತೆ ಕೆಲವೆಡೆ ಸೊಳ್ಳೆಗಳ (mosquitoes) ಸಂಖ್ಯೆಯಲ್ಲಿನ ಆತಂಕಕಾರಿ ಹೆಚ್ಚಳ ಕಂಡುಬರುತ್ತಿದೆ. ನಗರ ಮತ್ತು ಸುತ್ತಮುತ್ತಲಿನ ಪ್ರಮುಖ ಪ್ರದೇಶಗಳು ಮತ್ತು ವಿಶೇಷವಾಗಿ ಹೊರವರ್ತುಲ ರಸ್ತೆಯ (Outer ring road) ಹೊರವಲಯದಲ್ಲಿರುವ ಪ್ರಮುಖ ಪ್ರದೇಶಗಳು ಪ್ರಸ್ತುತ ಸೊಳ್ಳೆಗಳ ಕಾಟದ ಬಿಸಿ ಎದುರಿಸುತ್ತಿವೆ. ಕೀಟಶಾಸ್ತ್ರಜ್ಞರು ಸೊಳ್ಳೆಗಳ ಸಂಖ್ಯೆಯಲ್ಲಿ ಹಠಾತ್ ಉಲ್ಬಣವಾಗಲು ನಗರ ಮತ್ತು ಸುತ್ತಮುತ್ತಲಿನ ಹವಾಮಾನದ ಬದಲಾವಣೆಯೇ ಕಾರಣವೆಂದು ತಿಳಿಸಿದ್ದು, ಹೀಗಾಗಿ, ಸೊಳ್ಳೆಯ ಕಡಿತದಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸೊಳ್ಳೆ ಕಾಟ ಕೊಂಚ ಹೆಚ್ಚಾದಂತೆ, ಇದರಿಂದ ಪಾರಾಗುವ ಸಲುವಾಗಿ, ಕೆಲವರು ಸೊಳ್ಳೆ ಬತ್ತಿ ಅಥವಾ ಲಿಕ್ವಿಡ್ ಅನ್ನು ಬಳಕೆ ಮಾಡುತ್ತಾರೆ. ಮತ್ತೆ ಕೆಲವರು ಸೊಳ್ಳೆ ಪರದೆಗಳನ್ನು ಉಪಯೋಗಿಸುತ್ತಾರೆ. ಇದರ ನಡುವೆ, ಕೆಲವರಿಗೆ ಅಲರ್ಜಿ ಉಂಟಾಗುವ ಹಿನ್ನೆಲೆ ಇವುಗಳನ್ನು ಬಳಸುವುದಿಲ್ಲ. ನೀವು ಕೂಡ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿದ್ದರೆ, ಪರಿಸರ ಸ್ನೇಹಿ ಸೊಳ್ಳೆ ಕಿಲ್ಲರ್ ಸಾಧನ ನಿಮಗೆ ನೆರವಾಗುತ್ತದೆ. ಮಸ್ಕಿಟೊ ಕಿಲ್ಲರ್ ಲ್ಯಾಂಪ್( Mosquito Killer Lamp)ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಸೊಳ್ಳೆಗಳಿಂದ ಪರಿಹಾರ ನೀಡುವ ಜೊತೆಗೆ ಆರೋಗ್ಯಕ್ಕೂ ಯಾವುದೇ ರೀತಿಯ ಹಾನಿಯನ್ನುಂಟು ಮಾಡುವುದಿಲ್ಲ. ಇದರ ಹೆಸರು ಬಗ್ ಝಾಪರ್ ಸೊಳ್ಳೆ ಮತ್ತು ಫ್ಲೈ ಕಿಲ್ಲರ್ ಇಂಡೋರ್ ಲೈಟ್ ವಿತ್ ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ ಪೋರ್ಟಬಲ್ ಯುಎಸ್ಬಿ ಎಲ್ಇಡಿ ಟ್ರ್ಯಾಪ್(Bug Zapper Mosquito and Fly Killer Indoor Light with Electric Killing Lamp Portable USB LED Trap).
ಈ ಸೊಳ್ಳೆ ಕಿಲ್ಲರ್ ಸಾಧನವನ್ನು ಮನೆ, ಕಚೇರಿ ಹೀಗೆ ಎಲ್ಲಿ ಬೇಕಾದರೂ ಸುಲಭವಾಗಿ ಉಪಯೋಗಿಸಬಹುದು.
ಈ ಪರಿಸರ ಸ್ನೇಹಿ ಮಸ್ಕಿಟೊ ಕಿಲ್ಲರ್ ಲ್ಯಾಂಪ್ ಅನ್ನು ಎರಡು ಘಟಕಗಳಿಂದ ಮಾಡಲಾಗಿದೆ. ಒಂದು ಘಟಕವು ರೇಖೆಯಂತೆ ಕಾರ್ಯನಿರ್ವಹಿಸುತ್ತದೆ. ಮತ್ತೊಂದು ಘಟಕವು ಹೀರುವಿಕೆಯಾಗಿ ಕೆಲಸ ನಿರ್ವಹಿಸುತ್ತದೆ. ವಿದ್ಯುತ್ ಮೂಲಕ ಕಾರ್ಯ ನಿರ್ವಹಿಸುವ ಎರಡು ಘಟಕಗಳಿಂದ ತಯಾರಿಸಿದ ಈ ಸಾಧನದಲ್ಲಿ, ಸೊಳ್ಳೆಗಳು ಸ್ವಯಂಚಾಲಿತವಾಗಿ ಎಳೆಯಲ್ಪಡುವ ಜೊತೆಗೆ ಅವುಗಳನ್ನು ನಾಶ ಪಡಿಸುತ್ತವೆ. ಈ ಸಾಧನದ ಪ್ರಮುಖ ವಿಶೇಷತೆ ಗಮನಿಸಿದರೆ, ಇದು ಕ್ಷಣಾರ್ಧದಲ್ಲಿ ನೂರಾರು ಸೊಳ್ಳೆಗಳನ್ನು ತನ್ನತ್ತ ಸೆಳೆದು ಕೊಲ್ಲುತ್ತದೆ. ಮಸ್ಕಿಟೊ ಕಿಲ್ಲರ್ ಲ್ಯಾಂಪ್ ಅಥವಾ ಸೊಳ್ಳೆ ಕಿಲ್ಲರ್ ಲ್ಯಾಂಪ್ ಬಹಳ ಕಡಿಮೆ ವೆಚ್ಚದಲ್ಲಿ ಲಭ್ಯವಿರುವ ಸಾಧನವಾಗಿದ್ದು, ಇದನ್ನು ಅಮೆಜಾನ್ನಲ್ಲಿ ಕೇವಲ 689ರೂ.ಗಳಿಗೆ ಖರೀದಿ ಮಾಡಬಹುದು.
ಇದನ್ನೂ ಓದಿ: Mosquito coil : ಎಚ್ಚರ… ಸೊಳ್ಳೆ ಕಾಯಿಲ್ ಯಿಂದ ಅಪಾಯಕಾರಿ ರೋಗ ಬರುತ್ತಂತೆ…! ಹಾಗಾದ್ರೆ ಸೊಳ್ಳೆ ತಡೆಗಟ್ಟುವುದು ಹೇಗೆ?