Driving Licence: ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಈಗ ಇನ್ನಷ್ಟು ಸುಲಭ ; ನೀವು RTO ಕಚೇರಿಗೆ ಅಲೆಯದೇ ಲೈಸೆನ್ಸ್ ಪಡೆಯಬಹುದು!!
Driving Licence: ಡ್ರೈವಿಂಗ್ ಲೈಸೆನ್ಸ್ (Driving Licence) ಪಡೆಯಲು ಸಾಕಷ್ಟು ಬಾರಿ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ಚಾಲನಾ ಪರವಾನಗಿಯನ್ನು ಪಡೆಯಲು ಕ್ಯೂನಲ್ಲಿ ನಿಂತು ಕಾಯಬೇಕು. ಆದರೆ, ನೀವು ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಅಲೆಯದೇ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು. ಹೌದು, ಕೇಂದ್ರ ಸರ್ಕಾರವು ಡ್ರೈವಿಂಗ್ ಲೈಸೆನ್ಸ್ ಪಡೆಯುವ ಅಗತ್ಯತೆಗಳನ್ನು ಬದಲಾಯಿಸಿದೆ. ಇನ್ನುಮುಂದೆ ಈ ಕೆಲಸ ಸರಳವಾಗಲಿದೆ.
ಸಾರಿಗೆ ನಿಯಮಾವಳಿಗಳ ಇಲಾಖೆಯ ಪ್ರಕಾರ, ರಾಜ್ಯ ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸುವಾಗ
RTO ಡ್ರೈವಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗಿಲ್ಲ. ಡ್ರೈವಿಂಗ್ ಲೈಸೆನ್ಸ್ ಗೆ ಚಾಲಕ ತರಬೇತಿ ಕೇಂದ್ರದ ಪ್ರಮಾಣಪತ್ರವು ಏಕೈಕ ಆಧಾರವಾಗಿರುತ್ತದೆ.
ಪ್ರತಿ ಐದು ವರ್ಷಗಳಿಗೊಮ್ಮೆ ಡ್ರೈವಿಂಗ್ ಸಂಸ್ಥೆಯು ತನ್ನ ಮಾನ್ಯತೆಯನ್ನು ನವೀಕರಿಸಬೇಕಿದ್ದು, ತರಬೇತಿ ಪ್ರಕ್ರಿಯೆಯನ್ನು ಬಲಪಡಿಸಲು, ರಾಜ್ಯ ಸಾರಿಗೆ ಪ್ರಾಧಿಕಾರವು ಈ ಅಂಶಗಳನ್ನು ಪರಿಶೀಲಿಸುತ್ತದೆ. ಯಾವೆಲ್ಲಾ ಅಂದ್ರೆ, ಭಾರಿ ವಾಹನ ತರಬೇತಿಗೆ ಎರಡು ಎಕರೆ ಜಮೀನು ಇರಬೇಕು. ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ತರಬೇತಿ ಕೇಂದ್ರಗಳಿಗೆ ಕನಿಷ್ಠ ಒಂದು ಎಕರೆ ಜಮೀನು ಇರಬೇಕು.
ಸ್ಟಿಮ್ಯುಲೇಟರ್ ಮತ್ತು ಟೆಸ್ಟ್ ಟ್ರ್ಯಾಕ್ ಇರಬೇಕು. ಕೇಂದ್ರದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಬಯೋಮೆಟ್ರಿಕ್ ವ್ಯವಸ್ಥೆ ಇರಬೇಕು. ತರಬೇತುದಾರರು ಹೈಸ್ಕೂಲ್ ಡಿಪ್ಲೊಮಾ ಮತ್ತು ಕನಿಷ್ಠ ಐದು ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು. ಸಾರಿಗೆ ಪ್ರಾಧಿಕಾರದ ನಿಯಮಗಳಿಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಡ್ರೈವಿಂಗ್ ಟ್ರ್ಯಾಕ್ ಪರೀಕ್ಷೆಗಳನ್ನು ನಡೆಸಬೇಕು. ಇವೆಲ್ಲವನ್ನೂ ಪರಿಶೀಲಿಸಿದ ನಂತರ ಡ್ರೈವಿಂಗ್ ಇನ್ಸಿಟ್ಯೂಟ್ ಮಾನ್ಯತೆಯನ್ನು ಪಡೆಯುತ್ತದೆ.
ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?
• ವಿಳಾಸ ಪುರಾವೆ – ರೇಷನ್ ಕಾರ್ಡ್, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಬಾಡಿಗೆ ಒಪ್ಪಂದ, ಯುಟಿಲಿಟಿ ಬಿಲ್ ಅಥವಾ ಜೀವ ವಿಮಾ ಪಾಲಿಸಿ ಪ್ರಮಾಣಪತ್ರವನ್ನು ಸಲ್ಲಿಸಬಹುದು.
• ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ ಹೊಂದಿರಬೇಕು.
• ವಯಸ್ಸಿನ ಪುರಾವೆ – ಶೈಕ್ಷಣಿಕ ಪ್ರಮಾಣಪತ್ರ, ಜನ್ಮ ಪ್ರಮಾಣಪತ್ರ, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಅಥವಾ
ಉದ್ಯೋಗದಾತರ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ತರಬೇತಿ:
• ತರಬೇತಿಯನ್ನು ಪ್ರಾರಂಭದ ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸಬೇಕು. ಇದರಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್ ಥಿಯರಿ ಕ್ಲಾಸ್ 8 ಗಂಟೆ ಇರುತ್ತದೆ. ಮತ್ತು ಪ್ರಾಯೋಗಿಕ ಚಾಲನೆಯು 21 ಗಂಟೆಗಳ ಕಾಲ ಇರಲಿದೆ.
• ಲಘು ವಾಹನ ತರಬೇತಿಯು 29 ಗಂಟೆಗಳ ಕಾಲ ಇರುತ್ತದೆ.
• ಮಧ್ಯಮ ಮತ್ತು ಭಾರೀ ಮೋಟಾರು ವಾಹನಗಳಿಗೆ ತರಬೇತಿ 38 ಗಂಟೆಗಳಿರುತ್ತದೆ. ಪ್ರಾರಂಭವಾದ 6 ವಾರಗಳಲ್ಲಿ ಪೂರ್ಣಗೊಳಿಸಬೇಕು.
• ಥಿಯರಿ ತರಗತಿಗಳು 8 ಗಂಟೆಗಳು ಮತ್ತು ಪ್ರಾಯೋಗಿಕ ತರಗತಿಗಳು 31 ಗಂಟೆಗಳಿರುತ್ತದೆ.