Home News Complaint against dog : ಮುಖ್ಯಮಂತ್ರಿ ಪೋಸ್ಟರ್ ಹರಿದ ನಾಯಿ ವಿರುದ್ಧ ಪೊಲೀಸರಿಗೆ ದೂರು

Complaint against dog : ಮುಖ್ಯಮಂತ್ರಿ ಪೋಸ್ಟರ್ ಹರಿದ ನಾಯಿ ವಿರುದ್ಧ ಪೊಲೀಸರಿಗೆ ದೂರು

Complaint against dog

Hindu neighbor gifts plot of land

Hindu neighbour gifts land to Muslim journalist

Complaint against dog : ವಿಲಕ್ಷಣ ಘಟನೆಯೊಂದು ನಡೆಸಿದ್ದು, ಮುಖ್ಯಮಂತ್ರಿಯ ಪೋಸ್ಟರ್ ಅನ್ನು ಹರಿದಿದ್ದಕ್ಕಾಗಿ ನಾಯಿಯೊಂದರ ವಿರುದ್ಧ (Complaint against dog)ಪೊಲೀಸ್ ದೂರು ದಾಖಲಾಗಿದೆ.

ಆಂಧ್ರಪ್ರದೇಶದ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವಿಜಯವಾಡದಲ್ಲಿ ಮನೆಯ ಗೋಡೆಯ ಮೇಲಿದ್ದ ಮುಖ್ಯಮಂತ್ರಿಗಳ ಪೋಸ್ಟರ್ ಅನ್ನು ನಾಯಿಯೊಂದು ಪರಚಿ ಬಾಯಿ ಹಾಕಿ ಹರಿದು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ಕಂಡ ಮಹಿಳೆಯರ ಗುಂಪೊಂದು ಇದೀಗ ಪೊಲೀಸರಿಗೆ ದೂರು ನೀಡಿದೆ.

ದಾಸರಿ ಉದಯಶ್ರೀ ಎಂಬುವವರು ವ್ಯಂಗ್ಯವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರತಿಪಕ್ಷ ತೆಲುಗು ದೇಶಂ ಪಕ್ಷದ (TDP) ಕಾರ್ಯಕರ್ತೆ ಎನ್ನಲಾಗಿರುವ ಆಕೆ ಮುಖ್ಯಮಂತ್ರಿಗೆ ಅವಮಾನ ಮಾಡಿರುವ ನಾಯಿ ಹಾಗೂ ಅದರ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇತರ ಕೆಲ ಮಹಿಳೆಯರೊಂದಿಗೆ ಒತ್ತಾಯಿಸಿದ್ದಾರೆ.

ನಮಗೆ ಬರೋಬ್ಬರಿ 151 ವಿಧಾನಸಭಾ ಸ್ಥಾನಗಳನ್ನು ಗೆದ್ದಿರುವ ಜಗನ್ ಮೋಹನ್ ರೆಡ್ಡಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅಂತಹ ನಾಯಕನನ್ನು ನಾಯಿಯೊಂದು ಅವಮಾನಿಸಿದ್ದು, ರಾಜ್ಯದ ಆರು ಕೋಟಿ ಜನರಿಗೆ ನೋವುಂಟು ಮಾಡಿದೆ ಎಂದು ಸ್ಥಳೀಯ ದೂರದರ್ಶನ ಚಾನೆಲ್‌ಗಳಿಗೆ ಆಕೆ ತಿಳಿಸಿದ್ದಾರೆ.
ನಮ್ಮ ಪ್ರೀತಿಯ ಮುಖ್ಯಮಂತ್ರಿಯನ್ನು ಅವಮಾನಿಸಿದ ನಾಯಿ ಮತ್ತು ನಾಯಿಯ ಹಿಂದಿರುವವರನ್ನು ಬಂಧಿಸುವಂತೆ ನಾವು ಪೊಲೀಸರಿಗೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು. ಇದು ತಮಾಷೆಗಾಗಿ ನೀಡಿದ ದೂರಾ ಅಥವಾ ಕುಚೇಶ್ಟೆಗಾಗಿ ಮಾಡಿದ ಕೆಲಸವೇ ಎಂದು ತಿಳಿದುಬಂದಿಲ್ಲ.

ಈ ಹಿಂದೆ ಕೂಡಾ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಫೋಟೊ ಇರುವ ಸ್ಟಿಕ್ಕರ್ ಅನ್ನು ನಾಯಿಯೊಂದು ಹರಿದು ಹಾಕಿರುವ ವಿಡಿಯೋ ವೈರಲ್ ಆಗಿತ್ತು. ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ರಾಜ್ಯದಾದ್ಯಂತ ನಡೆಯುತ್ತಿರುವ ಸಮೀಕ್ಷೆಯ ಭಾಗವಾಗಿ ಜಗನಣ್ಣ ಮಾ ಭವಿಷ್ಯತು (ಜಗನ್ ಅಣ್ಣ ನಮ್ಮ ಭವಿಷ್ಯ) ( Jagan Anna our future) ಎಂಬ ಸ್ಟಿಕರ್ ಅನ್ನು ಮನೆಯೊಂದರ ಮೇಲೆ ಅಂಟಿಸಲಾಗಿತ್ತು. ಅದನ್ನು ನಾಯಿಯೊಂದು ಕಡಿದು ತುಂಡರಿಸಿ ಹಾಕಿತ್ತು. ನಾಯಿಗೆ ಕೂಡಾ YSR ಕಾಂಗ್ರೆಸ್ ಇಷ್ಟ ಇಲ್ಲ ಎಂದು ಪ್ರತಿಪಕ್ಷಗಳು ಕೂಗು ಹಾಕಿದ್ದವು. ಆ ವಿಡಿಯೋವನ್ನು ಹಲವಾರು ಟಿಡಿಪಿ ಬೆಂಬಲಿಗರು ತಮ್ಮ ಸಾಮಾಜಿಕ ಖಾತೆಗಳ ಮೂಲಕ ವಿಡಿಯೋವನ್ನು ಅಪ್‌ಲೋಡ್ ಮಾಡಿ ಟ್ರೊಲ್ ಮಾಡಿದ್ದರು.