Uttar Pradesh : 14 ದಿನದ ಮಗು ಗರ್ಭಿಣಿ, ಹೊಟ್ಟೆಯೊಳಗೆ ಮೂರು ಭ್ರೂಣ ; ವಿಚಿತ್ರ ಪ್ರಕರಣ ಕಂಡು ಬೆಚ್ಚಿಬಿದ್ದ ವೈದ್ಯರು!!!
Fetus in baby stomach : ವಿವಾಹವಾದ ಮಹಿಳೆಯರು (women) ಗರ್ಭಿಣಿಯಾಗುವುದು (pregnant) ಸಾಮಾನ್ಯ. ಆದರೆ, ಒಂದು ವರ್ಷವೂ ಆಗದೆ ಇರುವ ಮಗು ಗರ್ಭಿಣಿ (girl child pregnant) ಎಂದರೆ ವಿಚಿತ್ರವೇ ಸರಿ. ಹೌದು, ಉತ್ತರಪ್ರದೇಶದಲ್ಲಿನ (Uttar Pradesh) ಕಾಶಿ ಹಿಂದೂ ವಿಶ್ವವಿದ್ಯಾಲಯದ ಸರ್ ಸುಂದರ್‌ಲಾಲ್ ಆಸ್ಪತ್ರೆಯಲ್ಲಿ 14 ದಿನಗಳ ಹೆಣ್ಣು ಮಗು ‘ಗರ್ಭಿಣಿ’ ಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳು ಪತ್ತೆಯಾಗಿದ್ದು (Fetus in baby stomach), ಇದನ್ನು ಕಂಡು ವೈದ್ಯರೇ ಬೆಚ್ಚಿಬಿದ್ದಿದ್ದಾರೆ.
14 ದಿನದ ಈ ಹೆಣ್ಣು ಮಗು ಹೊಟ್ಟೆಯಲ್ಲಿ ಊತ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು ಎನ್ನಲಾಗಿದೆ. ಇದರಿಂದಾಗಿ ಪೋಷಕರು ಮಗುವನ್ನು ಬಿಎಚ್‌ಯು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ಅಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದಾಗ ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳಿರುವುದು ಪತ್ತೆಯಾಗಿದೆ. ಆಶ್ಚರ್ಯಗೊಂಡ ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗ ಭ್ರೂಣ ಇರುವುದು ದೃಢವಾಗಿದೆ.
ಮಗುವಿನ (child) ಹೊಟ್ಟೆಯಲ್ಲಿದ್ದ ಮೂರು ಭ್ರೂಣಗಳು ಮಗುವಿನ ಇತರ ಒಡಹುಟ್ಟಿದವರಂತೆಯೇ ಇದ್ದವು. ತ್ರಿವಳಿ ಭ್ರೂಣದಿಂದಾಗಿ 14 ದಿನದ ಹೆಣ್ಣು ಮಗುವಿನ ಪಿತ್ತರಸ ನಾಳ ಮತ್ತು ಕರುಳುಗಳಿಗೆ ಅಡಚಣೆ ಉಂಟಾಗಿತ್ತು. ಇದರಿಂದ ಮಗುವಿಗೆ ಜಾಂಡೀಸ್ ಮತ್ತು ಹೊಟ್ಟೆಯಲ್ಲಿ ಊತ ಸಹ ಕಾಣಿಸಿಕೊಂಡಿತ್ತು. ಇದರಿಂದ ಉಸಿರಾಟಕ್ಕೆ ತೊಂದರೆ ಕೂಡಾ ಆಗುತ್ತಿತ್ತು. ಮಗುವಿಗೆ ಆರು ಮಂದಿ ವೈದ್ಯರ ತಂಡ, ಸತತ ಮೂರು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿದ ಡಾ. ರುಚಿರಾ, ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಇತರ ಭ್ರೂಣಗಳು ಸಂಪೂರ್ಣವಾಗಿ ಬೆಳೆಯಲು ಸಾಧ್ಯವಾಗದೇ ಇದ್ದಾಗ, ಬೆಳವಣಿಗೆ ಹೊಂದುತ್ತಿರುವ ಮಗುವಿನ ಹೊಟ್ಟೆಗೆ ವರ್ಗಾಯಿಸಲ್ಪಡುತ್ತವೆ. ಹೀಗಾಗಿಯೇ 14 ದಿನಗಳ ಹೆಣ್ಣು ಮಗುವಿನ ಹೊಟ್ಟೆಗೆ ಮೂರು ಭ್ರೂಣಗಳು ವರ್ಗಾಯಿಸಲ್ಪಟ್ಟಿವೆ ಎಂದರು.
ಮಗುವಿನ ಹೊಟ್ಟೆಯಲ್ಲಿ ಈ ರೀತಿಯ ಭ್ರೂಣ ಇದ್ದರೆ ಅದು ಫೆಟಸ್ ಫಿಟು ಎಂಬ ರೋಗದ ಲಕ್ಷಣವಾಗಿದೆ. ಇದೊಂದು ಅತ್ಯಂತ ಸಂಕೀರ್ಣ ಕಾಯಿಲೆಯಾಗಿದೆ. ಐದು ಲಕ್ಷದಲ್ಲಿ ಒಂದು ಮಗುವಿನಲ್ಲಿ ಇಂತಹ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಚಿಕಿತ್ಸೆಯ ವೆಚ್ಚ ಅತಂತ್ಯ ದುಬಾರಿಯಾಗಿರುತ್ತದೆ. ಆದರೆ, ಬಿಎಚ್‌ಯುನ ಸರ್ ಸುಂದರ್‌ಲಾಲ್ ಆಸ್ಪತ್ರೆಯಲ್ಲಿ ಮಗುವಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದರು.