Optical Illusion Game : ಈ ಫೋಟೋದಲ್ಲಿರುವ 100ರ ಮಧ್ಯೆ ಅಡಗಿದೆ 001 ! ಹದ್ದಿನ ಕಣ್ಣಿನಷ್ಟೇ ಚುರುಕಿರಬೇಕು ಈ ಒಗಟು ಬಿಡಿಸಲು!

Optical Illusion Game: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ನೋಡಲು ಸಿಗುತ್ತವೆ. ಅದು ಯಾವುದೋ ಪ್ರಾಣಿ-ಪಕ್ಷಿಗಳದ್ದಾಗಿಬಹುದು. ವಸ್ತುಗಳನ್ನು ಪತ್ತೆ ಹಚ್ಚುವ ಕೆಲಸವಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ. ಇದೀಗ, ಮತ್ತೊಂದು ಫೋಟೋ(Photo) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Photo) ಆಗಿದೆ.

 

ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ಗಮನಿಸುತ್ತೇವೆ ಎಂಬ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ಭಿನ್ನತೆ ಎದುರಾಗುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ (Optical Illusion Game)ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ಅಷ್ಟೆ ಏಕೆ ನೀವು ಈಗಾಗಲೇ ಅನೇಕ ಸವಾಲುಗಳನ್ನು ಬಗೆಹರಿಸಿರುತ್ತೀರಿ. ಈಗ ಮತ್ತೊಂದು ಸವಾಲು ನಿಮಗಾಗಿ ನೀಡಲಾಗಿದೆ. ಸಾಮಾನ್ಯವಾಗಿ ಹೆಚ್ಚಿನವರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್ಗಳು ಸಹ ಪ್ರಯೋಜನಕಾರಿಯಾಗಿದ್ದು, ನಿಮ್ಮ ಕಣ್ಣಿಗೆ ಕೆಲಸ ಕೊಡಲು ನೀವು ರೆಡಿನಾ??.

ಸದ್ಯ ವೈರಲ್​​​ ಆಗಿರುವ ಫೋಟೋದಲ್ಲಿ (Optical Illusion Game) 100 ಎಂದು ಬರೆದಿರುವ ಸಂಖ್ಯೆಗಳ ಗುಂಪು ನಿಮಗೆ ಕಾಣಿಸುತ್ತಿದೆಯಲ್ಲವೇ? ಆದರೆ ಅವುಗಳ ಮಧ್ಯೆ 001 ಎಂದು ಬರೆದಿರುವ ಒಂದೇ ಒಂದು ಸಂಖ್ಯೆ ಅಡಗಿದೆ. ನಿಮಗೀಗ ಇರೋ ಟಾಸ್ಕ್ ಏನಪ್ಪಾ ಅಂದರೆ, ನೀವು 100 ರ ಮಧ್ಯೆ ಅಡಗಿರುವ 001ರನ್ನು ಕೇವಲ 10 ಸೆಕೆಂಡ್ ಗಳಲ್ಲಿ ಕಂಡುಹಿಡಿಯಬೇಕು. ಆದರೆ, ಅದನ್ನು ಪತ್ತೆಹಚ್ಚುವುದು ಹೇಳಿದಷ್ಟು ಸುಲಭವಲ್ಲ. ಹಾಗೆಂದು ಕಷ್ಟವೂ ಅಲ್ಲ. ಆದರೆ, ನಿಮ್ಮ ಕಣ್ಣಿಗೆ ಕೊಂಚ ಕೆಲಸ ಕೊಟ್ಟರೆ ಹುಡುಕೋದು ಕಷ್ಟವೇನಲ್ಲ. ಸೂಕ್ಷ್ಮವಾಗಿ ಗಮನಿಸಿದರೆ 001ರ ಸಂಖ್ಯೆ ಕಾಣಿಸಲಿದೆ. ನಿಮಗೆ ಕೇವಲ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು 001ಸಂಖ್ಯೆ (Find Hidden 001 Among Many 100)ಎಲ್ಲಿದೆ ಎಂದು ಹುಡುಕಬೇಕು. ನಿಮ್ಮ ಸಮಯ ಈಗ ಶುರು.

ಈಗಾಗಲೇ ಕೆಲವು ಬುದ್ದಿವಂತರು ಸಂಖ್ಯೆಯನ್ನು ಕಂಡುಹಿಡಿದಿರಬಹುದು. ಹಾಗಿದ್ರೆ, ನಿಮ್ಮ ಕಣ್ಣಿನ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಗೆ ಫುಲ್ ಮಾರ್ಕ್ಸ್ ಕೊಟ್ಟು ಬಿಡಿ! ಪದೇ ಪದೇ ನೋಡಿದರೂ ಅದರಲ್ಲಿ ಅವಿತು ಕುಳಿತಿರುವ 001 ನಂಬರ್ ಸಿಗಲಿಲ್ಲ ಎನ್ನುತ್ತಿದ್ದೀರಾ? ಹಾಗಿದ್ದರೆ, ನಾವು ನಿಮಗೆ ಸಹಾಯ ಮಾಡ್ತೀವಿ! 001 ಅನ್ನು ಕಂಡುಹಿಡಿಯಲು, ನೀವು ಈ ಚಿತ್ರದ ಕೆಳಗೆ ಮತ್ತು ಮಧ್ಯದಲ್ಲಿ ನೋಡಬೇಕು. ಅಲ್ಲಿ ನಿಮ್ಮ ಕಣ್ಣಿಗೆ ನೀವು ಹುಡುಕುತ್ತಿರುವ 001 ಸಂಖ್ಯೆ ಕಂಡುಬರಲಿದೆ. ಈಗಲೂ ಸಿಗಲಿಲ್ಲ ಎಂದರೆ ಕೆಳಗಿನ ಚಿತ್ರ ನೋಡಿ ನಿಮಗೆ ಉತ್ತರ ದೊರೆಯಲಿದೆ.

ಇದನ್ನೂ ಓದಿ: Rakshit Shetty: ಸಿಂಪಲ್‌ಸ್ಟಾರ್‌ ರಕ್ಷಿತ್‌ ಶೆಟ್ಟಿ ʼರಿಚರ್ಡ್ ಆಂಟನಿʼ ಸಿನಿಮಾಗಾಗಿ ಪಡೆಯುತ್ತಿರೋ ಸಂಭಾವನೆ ಎಷ್ಟು? ಹೊಂಬಾಳೆ ಕೃಪಕಟಾಕ್ಷ ಶೆಟ್ರ ಮೇಲೆ ಎಷ್ಟಿದೆ?!

Leave A Reply

Your email address will not be published.