New Invention:ಜ್ವರದ ನೆಪ ಹೇಳಿ ರಜೆ ಕೇಳುತ್ತೀರಾ? ಬಂದಿದೆ ನಿಜಾಂಶ ಪತ್ತೆ ಹಚ್ಚೋ ಹೊಸ ತಂತ್ರಾಂಶ!

New Invention: ಸಾಮಾನ್ಯವಾಗಿ ಆಲಸ್ಯ ಕಾಡಿದಾಗ ರಜೆ ಪಡೆಯುವ ಸಲುವಾಗಿ ಹೆಚ್ಚಿನವರು ಹೇಳುವ ಸಬೂಬು ಆರೋಗ್ಯ ಸಮಸ್ಯೆ. ನೀವು ಕೂಡ ಈ ರೀತಿ ಸುಳ್ಳು ಹೇಳೋ ಅಭ್ಯಾಸ ರೂಡಿಸಿಕೊಂಡರೆ ಹುಷಾರ್!! ನೀವಿನ್ನೂ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳೋದು ಗ್ಯಾರಂಟಿ!

 

ಬಹುತೇಕ ಉದ್ಯೋಗಿಗಳಲ್ಲಿ ರಜೆಗಾಗಿ ಏನಾದರೂ ಒಂದು ಅನಾರೋಗ್ಯದ ನೆಪ ಹೇಳೋದು ಮಾಮೂಲಿ. ಆದರೆ, ಇದೀಗ, ಈ ಪರಿಪಾಠ ರೂಡಿಸಿಕೊಂಡವರ ಖೇಲ್ ಕಥಮ್ ನಾಟಕ್ ಬಂದ್ ಮಾಡುವ ಹಾಗೇ ಎಲ್ಲ ನಾಟಕಕ್ಕೆ ತೆರೆ ಎಳೆಯುವ ಸಲುವಾಗಿ ಕೃತಕ ಬುದ್ಧಿಮತ್ತೆ(artificial intelligence)ಆಧರಿತ ತಂತ್ರಾಂಶವೊಂದನ್ನು(New Invention) ಅಭಿವೃದ್ದಿ ಪಡಿಸಲಾಗಿದೆ. ಶೀತ (Cold)ಹಾಗೂ ಜ್ವರದ (Fever)ನೆವ ಹೇಳಿಕೊಂಡು ರಜೆ ಕೇಳಬಹುದಾದ ಸಾಧ್ಯತೆಯ ಸಲುವಾಗಿ ಈ ತಂತ್ರಾಂಶ ಅಭಿವೃದ್ಧಿ ಮಾಡಲಾಗಿದೆ. ಸಾಮಾನ್ಯವಾಗಿ ಶೀತ ಹಾಗೂ ಜ್ವರ ಬಂದಾಗ ನಮ್ಮ ದನಿಯಲ್ಲಿ ಆಗುವ ಬದಲಾವಣೆಯನ್ನು ಗ್ರಹಿಸಿಕೊಂಡು ಅನಾರೋಗ್ಯದ ಸತ್ಯಾಸತ್ಯತೆಯನ್ನು ಈ ತಂತ್ರಾಂಶದ ಮೂಲಕ ತಿಳಿಯಬಹುದು ಎನ್ನಲಾಗಿದೆ.

ಸೂರತ್‌ನ ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಹಾಗೂ ಜರ್ಮನಿಯ ರ‍್ಹೇನಿಶ್ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್‌ನ ಸಂಶೋಧಕರು (Reserachers) ಅಭಿವೃದ್ಧಿ ಮಾಡಿದ್ದಾರೆ. ಶೀತ, ಕೆಮ್ಮು ಹಾಗೂ ಜ್ವರಗಳಂಥ ಸಮಸ್ಯೆಗಳಿರುವ ರೋಗಿಗಳನ್ನು ಸುಲಭವಾಗಿ ಪತ್ತೆ(Identify) ಮಾಡುವ ಮೂಲಕ ಅವರಿಂದ ಅನ್ಯರಿಗೆ ಸೋಂಕು ಹರಡುವುದನ್ನು ತಡೆಯುವಂತೆ ನೋಡಿಕೊಳ್ಳಲು ವೈದ್ಯರಿಗೆ (Doctors)ಈ ಸಾಧನ ಹೆಚ್ಚು ಪ್ರಯೋಜನ ಮಾಡಿಕೊಡುವ ಸಾಧ್ಯತೆಗಳು ದಟ್ಟವಾಗಿವೆ.

ಶೀತ ಹಾಗೂ ಸಾಮಾನ್ಯ ಸ್ಥಿತಿಯಲ್ಲಿರುವ ವ್ಯಕ್ತಿಯ ದ್ವನಿಯಲ್ಲಿ(Voice) ಆಗುವ ಏರಿಳಿತ ಹಾಗೂ ಬದಲಾವಣೆಯನ್ನು ಗ್ರಹಿಸುವಲ್ಲಿ 65%ನಷ್ಟು ನಿಖರತೆಯನ್ನು ತೋರಿಸುವ ಈ ತಂತ್ರಾಶಕ್ಕೆ ಹೆಚ್ಚಿನ ಸುಧಾರಣೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ತಂತ್ರಾಂಶದಿಂದಾಗಿ ರೋಗಿಗಳನ್ನು (Patients) ಆಸ್ಪತ್ರೆಗೆ (Hospital)ಕರೆದು ಶುಶ್ರೂಷೆ (Treatment)ಮಾಡುವುದರ ಬದಲಿಗೆ ಅವರ ದನಿಯಲ್ಲಿನ ಏರಿಳಿಕೆಗಳನ್ನು ಗ್ರಹಿಸಿ ಸೂಕ್ತವಾದ ವೈದ್ಯಕೀಯ ಸಲಹೆಗಳನ್ನು ಮುಂದಿನ ದಿನಗಳಲ್ಲಿ ನೀಡಬಹುದು ಎಂದು ಕೂಡ ಹೇಳಲಾಗುತ್ತಿದೆ.

Leave A Reply

Your email address will not be published.