Luxury Life: ಅಬ್ಬಬ್ಬಾ!! ಈ ದೇಶದಲ್ಲಿ ಮನೆ, ಕಾರು ಎಲ್ಲಾ ಫ್ರೀ ಫ್ರೀ..!! ಕೈ ತುಂಬಾ ಹಣ, ಸ್ಥಳ ಕೂಡ ಸೂಪರ್!
Luxury Life: ಇಂದಿನ ದಿನದಲ್ಲಿ ಮನೆಕಟ್ಟಬೇಕು ಅಂದ್ರೆ ಕೈತುಂಬಾ ಹಣವಿರಬೇಕು. ಇಲ್ಲವೇ ಸಾಲ (home loan) ಮಾಡಿ ಮನೆಕಟ್ಟಿ ಕೊನೆಗೆ ಸಾಲ (loan) ತೀರಿಸಲು ಪರದಾಡಬೇಕಾಗುತ್ತದೆ. ಆದರೆ, ಇಲ್ಲೊಂದು ದೇಶದಲ್ಲಿ ಫ್ರೀಯಾಗಿ ಕಾರು (car), ಬಂಗಲೆಯನ್ನು (house) ಕೊಡ್ತಾರಂತೆ. ಅಬ್ಬಬ್ಬಾ!! ಫ್ರೀ ಅಂದ್ರೆ ಬೇಡ ಅನ್ನೋರು ಯಾರಿದಾರೆ ಹೇಳಿ. ಬಿಂದಾಸ್ ಆಗಿ ಜೀವನ (Luxury Life) ನಡೆಸ್ಬೋದು!!. ಹಾಗಾದ್ರೆ ಯಾವ ದೇಶ (country) ಇಂತ ಆಫರ್ ಕೊಟ್ಟಿರೋದು? ಸಂಪೂರ್ಣ ಮಾಹಿತಿ ತಿಳಿಯೋಣ.
ಸ್ವಿಟ್ಜರ್ಲೆಂಡ್‌ನ ಅಲ್ಬಿನಾನ್ : ಈ ಪಟ್ಟಣದ ಜನಸಂಖ್ಯೆ ಪ್ರಸ್ತುತ ಕೇವಲ 240 ಆಗಿದೆ. ಇಲ್ಲಿನ ಜನಸಂಖ್ಯೆ ಹೆಚ್ಚು ಮಾಡಲು ಮಾಡಲು ಜನರಿಗೆ ಹಣ ನೀಡಲಾಗುತ್ತಿದೆ. ಇಲ್ಲಿನ ಸರ್ಕಾರ 45 ವರ್ಷದೊಳಗಿನವರಿಗೆ 20 ಲಕ್ಷ ಹಾಗೂ ಮಕ್ಕಳಿಗೆ 8 ಲಕ್ಷ ನೀಡಲಿದೆ. ಆದರೆ, ಕನಿಷ್ಠ 10 ವರ್ಷ ಇಲ್ಲಿ ವಾಸಿಸಬೇಕು.
ಅಲಾಸ್ಕಾ ರಾಜ್ಯ : ಈ ರಾಜ್ಯ ಕೂಡ ಅಲ್ಲಿ ಶಾಶ್ವತವಾಗಿ ವಾಸಿಸಲು ಬಯಸಿದವರಿಗೆ ಹಣ ನೀಡುತ್ತದೆ. ಅಲಾಸ್ಕಾದ (Alaska) ಜನಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಅಲ್ಲಿನ ಸರ್ಕಾರವು ಜನರಿಗೆ ಅದರ ನೈಸರ್ಗಿಕ ಸಂಪನ್ಮೂಲಗಳಿಂದ ಸಬ್ಸಿಡಿ ನೀಡುತ್ತದೆ. ಪ್ರತಿ ವ್ಯಕ್ತಿಗೆ ವರ್ಷಕ್ಕೆ $2,072 ಅಂದ್ರೆ, 1.5 ಲಕ್ಷ ರೂ. ನೀಡುತ್ತದೆ. ಆದರೆ ಅಲ್ಲಿ ವಾಸಾಸಲು ಬಯಸುವವರು ಒಂದು ವರ್ಷವಾದರೂ ಇಲ್ಲಿಯೇ ಇರಬೇಕಾಗುತ್ತದೆ. ಅಲಾಸ್ಕಾ ಹಿಮ, ಚಳಿಗಾಲ ಮತ್ತು ವಿಶ್ರಾಂತಿ ಜೀವನಶೈಲಿಯನ್ನು ನಿಮಗೆ ನೀಡುತ್ತದೆ.
ವರ್ಮೊಂಟ್ : ಇದು ಯುನೈಟೆಡ್ ಸ್ಟೇಟ್ಸ್ನಲ್ಲಿ ಪರ್ವತ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಕೇವಲ 6,20,000 ಜನರು ವಾಸಿಸುತ್ತಿದ್ದಾರೆ. ಅಲ್ಲದೆ, ಈ ರಾಜ್ಯವು ಚೆಡ್ಡಾರ್ ಚೀಸ್ ಮತ್ತು ಪ್ರಸಿದ್ಧ ಬೆನ್ & ಜೆರ್ರಿ ಐಸ್ ಕ್ರೀಮ್ ಉತ್ಪಾದನೆಗೆ ಹೆಸರುವಾಸಿಯಾಗಿದೆ. ವರ್ಮೊಂಟ್ ಪ್ರೇಕ್ಷಣೀಯ ಸ್ಥಳವೂ ಹೌದು. ರಾಜ್ಯವು ರಿಮೋಟ್ ವರ್ಕರ್ ಗ್ರಾಂಟ್ ಪ್ರೋಗ್ರಾಂ ಅರ್ಜಿದಾರರಿಗೆ ಎರಡು ವರ್ಷಗಳವರೆಗೆ $ 10,000 ಅಂದರೆ ಸುಮಾರು 7.4 ಲಕ್ಷ ರೂ. ನೀಡುತ್ತಿದೆ. ಮೇ 2018 ರಲ್ಲಿ, ವರ್ಮೊಂಟ್ ಗವರ್ನರ್ ಫಿಲ್ ಸ್ಕಾಟ್ ರಾಜ್ಯ ಉಪಕ್ರಮ ಮಸೂದೆಗೆ ಸಹಿ ಹಾಕಿದರು. ಅದರಂತೆ ವರ್ಮೊಂಟ್‌ಗೆ ಹೋಗಲು, ಅಲ್ಲಿ ವಾಸಿಸಲು ಬಯಸುವ ಜನರಿಗೆ $ 10,000 ನೀಡಲಾಗುತ್ತದೆ.
ಸ್ಪೇನ್‌ನಲ್ಲಿರುವ ಪೊಂಗಾ : ಈ ಪಟ್ಟಣ ಸುಂದರವಾಗಿದ್ದು, ಪ್ರಸ್ತುತ ಇಲ್ಲಿನ ಜನಸಂಖ್ಯೆ ಕೇವಲ 851 ಆಗಿದೆ. ಸರ್ಕಾರವು ಈ ನಗರದ ಜನಸಂಖ್ಯೆಯನ್ನು ಹೆಚ್ಚಿಸಲು ಇಲ್ಲಿ ವಾಸಿಸಲು ಬಯಸುವ ದಂಪತಿಗೆ 2 ಲಕ್ಷದ 68 ಸಾವಿರ ರೂ. ನೀಡಲಿದೆ. ದಂಪತಿಗಳಿಗೆ ಮಕ್ಕಳಿದ್ದರೆ ಸರ್ಕಾರವು ಹೆಚ್ಚಿನ ಹಣವನ್ನು ನೀಡಲು ಸಿದ್ಧವಾಗಿದೆ ಎಂದು ಹೇಳಲಾಗಿದೆ.
ಆಂಟಿಕಿಥೆರಾ : ಇದು ಗ್ರೀಕ್ ದ್ವೀಪವಾಗಿದೆ. ಈ ದ್ವೀಪದ ಪ್ರಸ್ತುತ ಜನಸಂಖ್ಯೆ ಕೇವಲ 20 ಆಗಿದೆ. ಹಾಗಾಗಿ ಜನಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ, ಗ್ರೀಕ್ ನಾಗರಿಕರನ್ನು ದ್ವೀಪಕ್ಕೆ ಭೇಟಿ ನೀಡಲು ಸರ್ಕಾರವು ಪ್ರಪಂಚದಾದ್ಯಂತದ ಜನರನ್ನು ಸ್ವಾಗತಿಸುತ್ತಿದೆ.
ದ್ವೀಪದಲ್ಲಿ ವಾಸಿಸಲು ಬರುವ ವ್ಯಕ್ತಿಗೆ ಮೊದಲ ಮೂರು ವರ್ಷಗಳವರೆಗೆ ಸುಮಾರು 45,000 ರೂ.ಗಳ ಮಾಸಿಕ ವೇತನದ ಜೊತೆಗೆ ಮನೆ ಹಾಗೂ ಭೂಮಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: Mango Recipes: ಮಾವಿನಹಣ್ಣಿಂದ ಎಷ್ಟೆಲ್ಲಾ ರುಚಿಯಾದ ವೆರೈಟಿ ತಿನಿಸು ತಯಾರಿಸಬಹುದು ನೋಡಿ!