Volvo Electric Car : ಕರ್ನಾಟಕದಲ್ಲಿ ತಯಾರಾಗಿರುವ ವೋಲ್ವೋ ಎಲೆಕ್ಟ್ರಿಕ್ ಕಾರಿಗೆ ಸೂಪರ್ ಡಿಮ್ಯಾಂಡ್!
Volvo Electric Car : ಭಾರತೀಯ ಮಾರುಕಟ್ಟೆಯಲ್ಲಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ವಿಭಿನ್ನ ಮಾದರಿಯ ಕಾರುಗಳನ್ನು ಜನರು ಹೆಚ್ಚು ಇಷ್ಟ ಪಡುತ್ತಾರೆ. ಸದ್ಯ ಸ್ವೀಡಿಷ್ ಕಾರು ಉತ್ಪಾದನಾ ಕಂಪನಿಯಾಗಿರುವ ವೋಲ್ವೋ ಕಾರ್ ಇಂಡಿಯಾ ಭಾರತದಲ್ಲಿ ತನ್ನ ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ಎಲೆಕ್ಟಿಕ್ (Volvo Electric Car )ಕಾರನ್ನು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಿದೆ.
ಇದೀಗ ವೋಲ್ವೋ ತನ್ನ ಎಕ್ಸ್‌ಸಿ 40 ರೀಚಾರ್ಜ್ ಎಲೆಕ್ಟಿಕ್ ಕಾರಿನ 200 ಯೂನಿಟ್ ಗಳು ವಿತರಣೆ ಮಾಡಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ದುಬಾರಿ ವೋಲ್ವೋ ಎಲೆಕ್ಟ್ರಿಕ್ ಕಾರಿಗೆ ಉತ್ತಮ ಬೇಡಿಕೆ ಪಡೆದುಕೊಂಡಿದೆ.
ಮುಖ್ಯವಾಗಿ ಈ ವೋಲ್ಲೋ XC40 ರೀಚಾರ್ಜ್ ಎಲೆಕ್ಟ್ರಿಕ್ ಕಾರನ್ನು ಕರ್ನಾಟಕದ ಹೊಸಕೋಟೆಯಲ್ಲಿರುವ ಸ್ವೀಡಿಷ್ ವಾಹನ ತಯಾರಕರ ಅತ್ಯಾಧುನಿಕ ಘಟಕದಲ್ಲಿ ತಯಾರಿಸಲಾಗುತ್ತಿದೆ.
ಅದಲ್ಲದೆ ಹೊಸ ಎಕ್ಸ್ಸಿ40 ರೀಚಾರ್ಜ್ ಕಾರು ಮಾದರಿಯನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಬದಲಾಗಿ ಕಂಪನಿಯು ಭಾರತದಲ್ಲಿಯೇ ಹೊಸ ಕಾರನ್ನು ಸಿಕೆಡಿ ಆಮದು ನೀತಿ ಅಡಿಯಲ್ಲಿ ಮರುಜೋಡಣೆ ಮಾಡಲಾಗಿದೆ.
ಮರುಜೋಡಣೆಯಿಂದ ಎಲೆಕ್ಟ್ರಿಕ್ ಕಾರಿನ ಮೇಲಿನ ತೆರಿಗೆ ಇಳಿಕೆಯು ಉತ್ತಮ ಬೆಲೆ ನಿರ್ಧರಿಸಲು ಸಹಕಾರಿಯಾಗಿದೆ. ಈ ವೋಲ್ವೋ ಎಕ್ಸ್ಸಿ40 ರೀಚಾರ್ಜ್ ಇವಿ ಕಾರು ಮಾದರಿಯು ಹೈ ಎಂಡ್ ವೆರಿಯೆಂಟ್ ಟ್ವಿನ್ ವರ್ಷನ್‌ನಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.
ಇನ್ನು ಹೊಸ ಎಕ್ಸ್40 ರೀಚಾರ್ಜ್ ಮಾದರಿಯಲ್ಲಿ 78kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಡ್ಯುಯಲ್ ಎಲೆಕ್ನಿಕ್ ಮೋಟಾರ್ ಆಯ್ಕೆ ಹೊಂದಿರುವ ಹೊಸ ಕಾರು 402 ಬಿಎಚ್‌ಪಿ ಮತ್ತು 660 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.
ಈ ಎಲೆಕ್ಟ್ರಿಕ್ ಕಾರಿನಲ್ಲಿ 19 ಇಂಚಿನ ಅಲಾಯ್ ವೀಲ್, 452 ಲೀಟರ್ ಸಾಮರ್ಥ್ಯದ ಬೂಟ್‌ಸ್ಪೆಸ್ ನೀಡಲಾಗಿದೆ. ಇವಿ ಮಾದರಿಯಾಗಿರುವುದರಿಂದ ಹೊಸ ಕಾರಿನ ಬಾನೆಟ್ ಅಡಿಯಲ್ಲೂ ಸುಮಾರು 31 ಲೀಟರ್ ನಷ್ಟು ಸ್ಟೋರೇಜ್ ಸ್ಪೇಸ್ ಲಭ್ಯವಿದೆ. ಹೊಸ ಕಾರಿನಲ್ಲಿ ಐಷಾರಾಮಿ ಚಾಲನೆಗೆ ಪೂರಕವಾದ ಹಲವಾರು ತಾಂತ್ರಿಕಸೌಲಭ್ಯಗಳಿವೆ. ಈ ಎಲೆಕ್ನಿಕ್ ಎಸ್‌ಯುವಿಯ ಒಳಭಾಗದಲ್ಲೂ ಹಲವಾರು ಆಕರ್ಷಕ ತಾಂತ್ರಿಕ ಸೌಲಭ್ಯಗಳಿದೆ.
ಈ ಕಾರಿನಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಆಗಿ 11kW ಹೋಂ ಚಾರ್ಜರ್ ಅನ್ನು ನೀಡಿದೆ. ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 418 ಕಿ.ಮೀ ಮೈಲೇಜ್ ನೀಡುವುದಾಗಿ ಡಬ್ಲ್ಯುಎಲ್‌ಟಿಪಿ ಟೆಸ್ಟಿಂಗ್ ಮೂಲಕ ಪ್ರಮಾಣೀಕರಿಸಲಾಗಿದೆ.
ಇನ್ನು 11kW ಹೋಂ ಚಾರ್ಜರ್ ಮೂಲಕ ಬ್ಯಾಟರಿ ಪೂರ್ತಿ ಚಾರ್ಜ್ ಮಾಡಲು ಕನಿಷ್ಠ 12 ರಿಂದ 18 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡರೆ 50kW ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಎರಡೂವರೆ ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಮಾಡಬಹುದಾಗಿದೆ.
ಇದರ ಜೊತಗೆ ಕೇವಲ 33 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಒಗದಗಿಸಬಲ್ಲ 150kW ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕೆ ಹೊಸ ಕಾರಿನ ಬ್ಯಾಟರಿ ಪ್ಯಾಕ್ ಸಪೋರ್ಟ್ ಮಾಡಲಿದೆ.
ಈ ಕಾರಿನಲ್ಲಿ ಕ್ಯಾಬಿನ್ ಸೌಲಭ್ಯದೊಂದಿಗೆ ಅಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸರ್ಪೊಟ್ ಹೊಂದಿರುವ ಇನ್ಫೋಟೈನ್‌ಮೆಂಟ್ ಸಿಸ್ಟಂ, ಆನ್ ಬೋರ್ಡ್ ಇ-ಸಿಮ್ ಮೂಲಕ ಗೂಗಲ್ ಮ್ಯಾಪ್ ಅಂಡ್ ಅಸಿಸ್ಟ್, ಸನ್‌ರೂಫ್, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಸೆನ್ಸಾರ್ ಆಧರಿಸಿರುವ ಲೆವಲ್ 2 ಎಡಿಎಸ್ ಸಿಸ್ಟಂ ಇದರಲ್ಲಿದೆ.
ಅದಲ್ಲದೆ ಭಾರೀ ಗಾತ್ರದ ಬ್ಯಾಟರಿ ಪ್ಯಾಕ್ ಪರಿಣಾಮ ಹೊಸ ಕಾರು ಬರೋಬ್ಬರಿ 2,188 ಕೆ.ಜಿ ಪಡೆದುಕೊಂಡಿದೆ. ಹೊಸ ಎಕ್ಸ್ಸಿ40 ರೀಚಾರ್ಜ್ ಇವಿ ಕಾರು ಮಾದರಿಯು ಸಾಮಾನ್ಯ ಎಕ್ಸ್ಸಿ40 ಪೆಟ್ರೋಲ್ ಕಾರಿಗಿಂತಲೂ 400 ಕೆ.ಜಿಯಷ್ಟು ಹೆಚ್ಚಿನ ತೂಕ ಹೊಂದಿದೆ.
ಮುಖ್ಯವಾಗಿ ವೋಲ್ವೋ ಎಕ್ಸ್ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಕಾರು ಕೇವಲ 4.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಇನ್ನು ಈ ಕಾರು ಪ್ರತಿ ಗಂಟೆಗೆ 180 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಈ ಕಾರು 4,425 Dodo ev, 1,863 Jowo ಅಗಲ, 1,652 ಎಂಎಂ ಅಗಲ ಮತ್ತು 175 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.