India Post GDS Result 2023 : 40,889 ಅಂಚೆ ಇಲಾಖೆ ಹುದ್ದೆ! 2ನೇ ಮೆರಿಟ್ ಪಟ್ಟಿ ಬಿಡುಗಡೆ!

India Post GDS Result-2023 :ಅಂಚೆ ಇಲಾಖೆಯ 2 ನೇ ಮೆರಿಟ್ ಪಟ್ಟಿ (merit list) ಬಿಡುಗಡೆ, 40,889 ಹುದ್ದೆಗಳಿಗೆ ನೇಮಕ. ಇದರ ಲಿಂಕ್ (link) ಇಲ್ಲಿದೆ ನೋಡಿ.

 

ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಭರ್ತಿ ಹಿನ್ನೆಲೆ ಇದೀಗ ಎರಡನೇ ಮೆರಿಟ್ ಪಟ್ಟಿ (merit list) ಬಿಡುಗಡೆಯಾಗಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಎರಡನೇ ಪಟ್ಟಿಯನ್ನು ಅಂಚೆ ಇಲಾಖೆ ವೆಬ್ಸೈಟ್ ನಲ್ಲಿ ಚೆಕ್ ಮಾಡಬಹುದು.

ಅಂಚೆ ಇಲಾಖೆಯು 40,889 ಹುದ್ದೆಗಳಿಗೆ ಅರ್ಜಿ ಸಲ್ಲಿಸಿಲು ಅಧಿಸೂಚನೆ ನೀಡಿತ್ತು, ಹಾಗೂ ಫೆಬ್ರವರಿ 16 ರವರಿಗೆ ಅರ್ಜಿಯನ್ನು ಕೂಡ ಸ್ವೀಕರಿಸಿತ್ತು. ಕಳೆದ ತಿಂಗಳು ಈ ಹುದ್ದೆಯ ಮೊದಲನೇ ಮೆರಿಟ್ ಪಟ್ಟಿ (India Post GDS Result-2023 ) ಯನ್ನು ಬಿಡುಗಡೆ ಮಾಡಿತ್ತು. ಇದೀಗ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

– ಅಂಚೆ ಇಲಾಖೆ ಹುದ್ದೆಗಳ ಬಗ್ಗೆ ಮಾಹಿತಿಗಾಗಿ ಈ https://indiapostgdsonline.gov.in/ ವೆಬ್ಸೈಟ್( website) ಗೆ ಭೇಟಿ ನೀಡಿ.

ಬೇಟಿ ನೀಡಿದ ಬಳಿಕ ಅಭ್ಯರ್ಥಿಗಳು ತಾವು ಸಲ್ಲಿಸಿದ ಅರ್ಜಿಯ ವೃತ್ತಾವಾರು ಎರಡನೇ ಪಟ್ಟಿಯನ್ನು ಚೆಕ್ ಮಾಡಬಹುದು.

ನಿಮ್ಮ ವೃತ್ತಿಯನ್ನು ಸರಿಯಾಗಿ ಅಯ್ಕೆ ಮಾಡಿ ನಂತರ ಕ್ಲಿಕ್ ಮಾಡಿ.

ಪೇಜ್ ನ ಪಿಡಿಎಫ್ (PDF) ನಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ

ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ, ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು.

ಅಭ್ಯರ್ಥಿಗಳು ಹಾಜರುಪಡಿಸಬೇಕಾದ ಮೂಲ ದಾಖಲೆಗಳ ಲಿಸ್ಟ್ (list) ಇಲ್ಲಿವೆ.

ಎಸ್ಎಸ್ಎಲ್ ಸಿ (SSLC) ಅಂಕಪಟ್ಟಿ ಅಥವಾ ವಯೋಮಿತಿ ಅರ್ಹತೆ ಪ್ರಮಾಣ ಪತ್ರ

ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರ

ಜಾತಿ ವೀಸಲಾತಿ ಪ್ರಮಾಣ ಪತ್ರ(cast certificate)

ಗ್ರಾಮೀಣ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು

ಕನ್ನಡ ಮಾಧ್ಯಮ ಮೀಸಲಾತಿ ಪ್ರಮಾಣ ಪತ್ರ

ಮಾಜಿ ಸೈನಿಕರ ಮೀಸಲಾತಿ ಪ್ರಮಾಣ ಪತ್ರಗಳು

ಯೋಜನೆಗಳಿಂದ ನಿರಾಶ್ರಿತ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರ

ಅಂಗವಿಕಲ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರ

ಅಭ್ಯರ್ಥಿಗಳ ತಾಲ್ಲೂಕು ತಹಶೀಲ್ದಾರ್ ಅವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ

ಎರಡು 2 ಪಾಸ್ ಪೋರ್ಟ್ (passport) ಅಳತೆಯ ಭಾವಚಿತ್ರ

ಪ್ರಮಾಣ ಪತ್ರಗಳನ್ನು ಹೊರತು ಪಡಿಸಿ ಅಭ್ಯರ್ಥಿಗಳಿಗೆ ಇರುವ ಮೂಲ ದಾಖಲೆಗಳನ್ನು ಹಾಜರು ಪಡಿಸಬೇಕು.

ಇಲ್ಲಿದೆ ಹುದ್ದೆಯ ವೇತನಗಳ ಮಾಹಿತಿ

ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್‌ (BPM) – ರೂ. 12,000 ದಿಂದ ರೂ. 29,380 ರವರೆಗೆ.

ಅಸಿಸ್ಟಂಟ್ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್ ((ABPM) – ರೂ. 10,000 ದಿಂದ ರೂ. 24,470 ರವರೆಗೆ.

ಡಾಕ್ ಸೇವಕ್‌ – ರೂ. 10,000 ದಿಂದ 24,470 ರವರೆಗೆ.

 

ಇದನ್ನು ಓದಿ : Suhana Khan: ದೀಪಿಕಾ ಪಡುಕೋಣೆ ಸ್ಥಾನ ಅಲಂಕರಿಸಿದ ಕಿಂಗ್‌ ಖಾನ್‌ ಶಾರುಖ್​ ಪುತ್ರಿ !ಏನಿದು ಹೊಸ ಸುದ್ದಿ? 

Leave A Reply

Your email address will not be published.