Optical illusion : ಓದುಗರೇ ನಿಮಗೊಂದು ಪ್ರಶ್ನೆ! ಈ ಪೋಟೋದಲ್ಲಿರುವ ವಿಮಾನ ಕಂಡು ಹಿಡಿತೀರಾ? ಸಮಯ ಕೇವಲ 10 ಸೆಕೆಂಡ್!

Share the Article

Optical illusion game : ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಆಗಾಗ ಕಾಣ ಸಿಗುತ್ತವೆ. ಈಗಾಗಲೇ ಹಲವು ಆಪ್ಟಿಕಲ್ ಇಲ್ಯೂಷನ್ (Optical illusion game) ಚಾಲೆಂಜ್ ಗಳನ್ನು ನೀವು ನೋಡಿರಬಹುದು. ಪ್ರಾಣಿ ಅಥವಾ ಪಕ್ಷಿಗಳನ್ನು ಹುಡುಕುವುದು. ಬಂಡೆಕಲ್ಲಿನ ನಡುವೆ ಯಾವುದೋ ಜೀವಿಯನ್ನು ಹುಡುಕಿ ಎನ್ನುವಂತಹ ಚಾಲೆಂಜ್ ಗಳನ್ನು ನೀವು ನೋಡಿರುತ್ತೀರಾ!!.

ಇಂತಹ ಚಿತ್ರಣಗಳು ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ. ಇದೀಗ, ಮತ್ತೊಂದು ಫೋಟೋ (photo) ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral) ಆಗಿದೆ. ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಈ ಆಪ್ಟಿಕಲ್ ಇಲ್ಯೂಷನ್​ಗಳಂತಹ ಚಿತ್ರಣಗಳು ಸಹಕಾರಿಯಾಗಿದೆ. ಹಾಗಿದ್ರೆ ಇನ್ನೇಕೆ ತಡ ನಿಮ್ಮ ಕಣ್ಣಿಗೆ ಕೆಲಸ ಕೊಡಲು ನೀವು ರೆಡಿನಾ?. ಇಲ್ಲಿದೆ ನೋಡಿ ನಿಮಗೆ ಸವಾಲ್!!.

ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ನೀಲಾಕಾಶದೆತ್ತರಕ್ಕೆ ಏರಿರುವ ಕಟ್ಟಡಗಳ ಚಿತ್ರಣಗಳಿವೆ. ಹಾಗೆಯೇ ಆಕಾಶದಲ್ಲಿ ವಿಮಾನವೊಂದು ಹಾರುತ್ತಾ ಸಾಗುತ್ತಿದೆ. ನಿಮಗಿರುವ ಸವಾಲು, ಆ ವಿಮಾನ ಎಲ್ಲಿದೆ ಎಂದು ಪತ್ತೆಹಚ್ಚಬೇಕು. ಅದು ಕೂಡ ಕೇವಲ 10 ಸೆಕೆಂಡ್ ನಲ್ಲಿ ಪತ್ತೆ ಹಚ್ಚಬೇಕು.

ನಿಮಗೆ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ವಿಮಾನವನ್ನು ಪತ್ತೆ ಹಚ್ಚಬೇಕು. ನೀವು 10 ಸೆಕೆಂಡ್ ಸಮಯದಲ್ಲಿ ವಿಮಾನವನ್ನು ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್ ಮಾರ್ಕ್ಸ್ ಕೊಟ್ಟುಬಿಡಿ. ಒಂದು ವೇಳೆ ವಿಮಾನವನ್ನು ಗುರುತಿಸಲು ಸಾಧ್ಯವಾಗದೇ, ಇದ್ದರೆ, ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.

Leave A Reply