Teachers Recruitment Rules 2023 : ಶಿಕ್ಷಕರ ನೇಮಕಾತಿಯಲ್ಲಿ ಬಂದಿದೆ ದೊಡ್ಡ ಬದಲಾವಣೆ!

Teachers Recruitment Rules 2023 : ಬಿಹಾರ ಸಚಿವ ಸಂಪುಟ ಹೊಸ ತೀರ್ಮಾನ ಕೈಗೊಂಡಿದ್ದು, ನೌಕರರ ಹಿತದೃಷ್ಟಿಯಿಂದ ಮಹತ್ವದ ನಿರ್ಣಯ ಕೈಗೊಳ್ಳಲು ಮುಂದಾಗಿದೆ. ರಾಜ್ಯ ಸರ್ಕಾರದ ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಾತಿಗೆ ಆಯೋಗ ರಚನೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಹೀಗಾಗಿ, ಶಿಕ್ಷಕರ ನೇಮಕಾತಿಯಲ್ಲಿ (Teachers Recruitment Rules 2023) ದೊಡ್ಡ ಬದಲಾವಣೆ ಆಗಲಿದೆ.

ಹೊಸ ನಿಯಮದ ಪ್ರಕಾರ ಸರ್ಕಾರ ಆಯೋಗದ ಮೂಲಕ ಶಿಕ್ಷಕರನ್ನು (Teachers) ನೇಮಕ ಮಾಡಲಾಗುತ್ತದೆ. ಇದೀಗ ಹೊಸ ಪದ್ಧತಿಯ ಆಧಾರದ ಮೇಲೆ ಪ್ರಾಥಮಿಕದಿಂದ ಹಿರಿಯ ಮಾಧ್ಯಮಿಕ ಹಂತದವರೆಗೆ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಶಿಕ್ಷಕರ ನೇಮಕಾತಿ ಪ್ರಕ್ರಿಯೆ(Teachers Recruitment Procedure)ಬದಲಾವಣೆಯ ಕುರಿತಂತೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಸಿದ್ಧಾರ್ಥ್ ಅವರು ಮಾಹಿತಿ ನೀಡಿದ್ದು, ಈ ಹಿಂದೆ ಪಂಚಾಯತ್, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿತ್ತು. ಹೊಸ ನಿಯಮದ ಅನುಸಾರ, ಸರ್ಕಾರ ಆಯೋಗದ ಮೂಲಕ ಶಿಕ್ಷಕರನ್ನು ನೇಮಕ ಮಾಡಲಿದೆ.ಬಿಹಾರದಲ್ಲಿ ಮುಂದಿನ ದಿನಗಳಲ್ಲಿ ಒಂದೂವರೆ ಲಕ್ಷ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಹೊಸ ನಿಯಮದ ಅನುಸಾರ, ಗುತ್ತಿಗೆ ಆಧಾರದ ಮೇಲೆ ಯಾವುದೇ ನೇಮಕಾತಿ ಮಾಡಲಾಗುವುದಿಲ್ಲ. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಶಿಕ್ಷಕರು ಆಯೋಗ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಖಾಯಂ ಶಿಕ್ಷಕರಾಗಲು ಅವಕಾಶವಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್( Nitish Kumar)ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ, ರಾಜ್ಯ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಳ ಮಾಡಲು ಕೂಡ ತೀರ್ಮಾನ ಕೈಗೊಳ್ಳಲಾಗಿದೆ. ಈ ಹೆಚ್ಚಳದ ಬಳಿಕ ನೌಕರರ ತುಟ್ಟಿ ಭತ್ಯೆ ಶೇ.38ರಿಂದ ಶೇ.42ಕ್ಕೆ ಏರಿಕೆ ಕಂಡುಬರಲಿದೆ. ಉದ್ಯೋಗಿಗಳು ಜನವರಿ 1, 2023 ರಿಂದ ಹೆಚ್ಚಿದ ಈ ಅನುಕೂಲ ಪಡೆಯಲಿದ್ದಾರೆ. ತುಟ್ಟಿ ಭತ್ಯೆ ಹೆಚ್ಚಳದ ಲಾಭ ರಾಜ್ಯ ಸರ್ಕಾರದ ಪಿಂಚಣಿದಾರರಿಗೂ ಲಭ್ಯವಾಗಲಿದೆ. ಉದ್ಯೋಗಿಗಳಿಗೆ ಏಪ್ರಿಲ್ ವೇತನದ ಜೊತೆಗೆ ಮೂರು ತಿಂಗಳ ಡಿಎ ದೊರೆಯಲಿದೆ.