Ration Card Updates : ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ನ್ಯೂಸ್ !

Ration Card Updates : ರೇಷನ್ ಕಾರ್ಡ್ (Ration Card) ಅಥವಾ ಪಡಿತರ ಚೀಟಿಯನ್ನು ಹೊಂದಿರುವ ಬಳಕೆದಾದರಿಗೆ ಮಹತ್ವದ ಮಾಹಿತಿ (Ration Card Updates) ಇಲ್ಲಿದೆ.

ಸದ್ಯ ಪಡಿತರ ಚೀಟಿ ಮೂಲಕ ಜನರಿಗೆ ಅಗ್ಗದ ದರದಲ್ಲಿ ಪಡಿತರ ದೊರೆಯುತ್ತದೆ. ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ, ಇದೀಗ ಹರಿಯಾಣದಿಂದ ಪಡಿತರ ಚೀಟಿಗೆ ಸಂಬಂಧಿಸಿ ಮಹತ್ವದ ಮಾಹಿತಿ ನೀಡಲಾಗಿದೆ.

ಹರಿಯಾಣದಲ್ಲಿ ಲಕ್ಷಾಂತರ ಪಡಿತರ ಚೀಟಿಗಳನ್ನು (ration card) ವಾಪಸ್‌ ನೀಡಲಾಗಿದ್ದು, ಸಂಪೂರ್ಣ ಪರಿಶೀಲನೆಯ ನಂತರ 2.30 ಲಕ್ಷ ಕುಟುಂಬಗಳ ಪಡಿತರ ಚೀಟಿಗಳನ್ನು ಮರು ವಿತರಿಸಲಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ಅಧಿಕೃತ ಹೇಳಿಕೆಯ ಪ್ರಕಾರ, ರಾಜ್ಯ ಸರ್ಕಾರವು ಬಡವರು ಮತ್ತು ನಿರ್ಗತಿಕರ ಆರ್ಥಿಕ ಉನ್ನತಿಗೆ ಬದ್ಧವಾಗಿದೆ ಮತ್ತು ಜನರ ಒಳಿತಿಗಾಗಿ ಕೆಲಸ ಮಾಡಲಾಗುತ್ತಿದೆ ಎಂದು ಖಟ್ಟರ್ ಹೇಳಿದರು.

ಕೆಲವು ಪಡಿತರ ಚೀಟಿದಾರರೊಂದಿಗೆ ಮಾತನಾಡಿದ ಸಿಎಂ “ಪ್ರತಿಯೊಂದು ಕಲ್ಯಾಣ ಯೋಜನೆಯ ಲಾಭವನ್ನು ನಿಜವಾದ ಫಲಾನುಭವಿಗಳಿಗೆ ವಿಸ್ತರಿಸಲು ಪ್ರಯತ್ನಿಸಲಾಗುತ್ತಿದೆ. 2.30 ಲಕ್ಷ ಕುಟುಂಬಗಳಿಗೆ ಪಡಿತರ ಚೀಟಿ ಮರು ವಿತರಣೆ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Vegetarian City : ವಿಶ್ವದಲ್ಲೇ ಏಕೈಕ ಸಸ್ಯಾಹಾರ ನಗರ ಎಲ್ಲಿದೆ ಗೊತ್ತೇ?

Leave A Reply

Your email address will not be published.