Travel Tips : 500ಕ್ಕೂ ಹೆಚ್ಚು ದೇವಸ್ಥಾನದವಿದೆ ಈ ನಗರದಲ್ಲಿ!
India :ಭಾರತವು ತನ್ನದೇ ಆದ ವಿಶೇಷತೆ ಇರುವ ಪ್ರವಾಸಿಗರ ತಾಣಗಳನ್ನು ಹೊಂದಿದೆ. ಇನ್ನು ಕೆಲ ಸ್ಥಳಗಳ ಹೆಸರು ಸದ ಜನರ ಬಾಯಿಯಲ್ಲಿ ಇರುತ್ತದೆ. ಅದರಲ್ಲಿಯೂ ವಿಶೇಷತೆ ಹೊಂದಿರುವ ಹಳೆಯ ಪ್ರವಾಸಿತಾಣ ಹೊಂದಿರುವುದರಲ್ಲಿ ಭಾರತವೇ ಮೊದಲಾಗಿದೆ. ಆದ್ದರಿಂದ ಭಾರತವನ್ನು ಪ್ರವಾಸಿಗರ ಸ್ವರ್ಗ (heaven) ಎನ್ನಲಾಗುತ್ತದೆ.
ಭಾರತದ ಕೆಲ ನಗರಗಳಿಗೆ ಅಲ್ಲಿನ ಪ್ರಸಿದ್ದಿಯ ಹೆಸರನ್ನೇ ಇಡಲಾಗಿದೆ. ಇನ್ನು ಭಾರತದ ಆ ಒಂದು ನಗರವು ಭಾರತದ ಟೆಂಪಲ್ ಸಿಟಿ (temple city) ಎಂದೇ ಕರೆಯುತ್ತಾರೆ. ಆ ಸಿಟಿ(city)ಯಲ್ಲಿ ಸರಿಸುಮಾರು 500 ಕ್ಕೂಹೆಚ್ಚು ದೇವಾಲಯಗಳಿವೆ. ಟೆಂಪಲ್ ಸಿಟಿ (temple city)ಎಂದೇ ಗುರುತಿಸಿ ಕೊಂಡಿರುವ ಆ ಪ್ರದೇಶ ಯಾವುದು ಗೊತ್ತಾ?
ದೇವಾಲಯದ ನಗರವು ಒಡಿಶಾದ ರಾಜಧಾನಿಯಾದ ಭುವನೇಶ್ವರದಲ್ಲಿದೆ. ಭುವನೇಶ್ವರದ ಈ ಪ್ರಸಿದ್ಧ ಸ್ಥಳವನ್ನು ಹಿಂದೂ (hindu) ಗಳ ಪ್ರಮುಖ ಕೇಂದ್ರವೆಂದೆ ಕರೆಯಲಾಗಿದೆ. ಇದು ಪ್ರತಿಯೊಬ್ಬ ಹಿಂದೂವಿಗೂ ಪ್ರವಾಸ ಯಾತ್ರಾ ಸ್ಥಳವಾಗಿದೆ. ಈ ಪ್ರದೇಶಕ್ಕೆ ಪ್ರತಿ ವರ್ಷವು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಲ್ಲಿನ ದೇವಾಲಯಗಳು ಪ್ರಾಚೀನ ಕಾಲದ ಭಾರತದ ವಾಸ್ತು ಶೈಲಿಗೆ ಒಂದು ಉದಾಹರಣೆಯಾಗಿದೆ. ಈ ದೇವಸ್ಥಾನಗಳನ್ನು 6 ಮತ್ತು 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
ಭಾರತದ ಇತಿಹಾಸ (history) ದಲ್ಲಿ ಭುವನೇಶ್ವರಿಯಲ್ಲಿರುವ ಏಕಾಮ್ರ ದೇವಾಲಯ (temple)ವು ಒಂದಾಗಿದೆ. ಏಕಾಮ್ರ ಕ್ಷೇತ್ರದ ದೇವಾಲಯ (temple) ವು ಮರಳುಗಲ್ಲಿನಿಂದ ಕೂಡಿದೆ. ಸುಮಾರು ಸಾವಿರಾರು ವರ್ಷಗಳ ಸಂಸ್ಕೃತಿಯ ವಿಶೇಷತೆಯನ್ನು ಹೊಂದಿದೆ. ಈ ಕ್ಷೇತ್ರವು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದಲ್ಲದೆ ಈ ದೇವಾಲಯ(temple)ದ ಹೆಸರು ಯುನೆಸ್ಕೋ (unesco) ಪಟ್ಟಿಯಲ್ಲೂ ಇದೆ.
ಶಿವನ ಲಿಂಗರಾಜ ದೇವಾಲಯ(temple)ವು ಕೂಡ ಒಂದು ಇತಿಹಾಸವನ್ನು ಹೊಂದಿದ್ದು, ಈ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಿವಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವಾಲಯ(temple)ದ ಆವರಣದಲ್ಲಿರುವ ಮುಕೇಶ್ವರ ದೇವಾಲಯ(temple) , ರಾಜಾರಾಣಿ ದೇವಾಲಯ (temple) ಮತ್ತು ಅನಂತ ವಾಸುದೇವ ದೇವಾಲಯ(temple)ಕ್ಕೆ ಭೇಟಿ ನೀಡಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.
ಭುವನೇಶ್ವರದಿಂದ ಸುಮಾರು 6 ಕಿ. ಮೀಟರ್ ದೂರದಲ್ಲಿರುವ ಉದಯಗಿರಿ ಗುಹೆ ಹಾಗೂ ಜೈನ ಮುನಿ ಖಂಡಗಿರಿ ಗುಹೆಯು ಎತ್ತರದ ಬೆಟ್ಟದ ಮೇಲೆ ನೆಲೆಯಾಗಿದೆ. ಈ ಎರಡು ಗಿರಿಗಳು ಬೇರೆ ಬೇರೆ ಸ್ಥಳದಲ್ಲಿದೆ. ಇವುಗಳನ್ನು ರಾಜ ಖಾರವೇಲ ನಿರ್ಮಿಸಿದನು. ಉದಯಗಿರಿಯಲ್ಲಿ ಒಟ್ಟು 18 ಗುಹೆ ( cave) ಗಳಿವೆ. ಮತ್ತು ಖಂಡಗಿರಿಯಲ್ಲಿ 15 ಗುಹೆ(cave)ಗಳಿವೆ. ಈ ಗುಹೆ(cave)ಗಳಿವೆ ವಿವಿಧ ಹೆಸರು ಕೂಡ ಇದೆ. ಗಣೇಶ ಗುಹೆ, ಅನಂತ ಗುಹೆ, ಹಾವಿನ ಗುಹೆ, ಹುಲಿ ಗುಹೆ ಹೀಗೆ ಹಲವು ಹೆಸರುಗಳನ್ನು ಇಡಲಾಗಿದೆ. ಗುಹೆ(cave)ಗಳ ವಿಶೇಷತೆ ಎಂದರೆ ನೀವು ಏಣಿಯ ಮೂಲಕ ಒಂದು ಗುಹೆ(cave)ಯಿಂದ ಮತ್ತೊಂದು ಗುಹೆಗೆ (cave) ಹೋಗಬಹುದು.
ಭುವನೇಶ್ವರದಲ್ಲಿ ನಂದನ್ ಕಾನನ್ ಮೃಗಾಲಯ( Zoo) ವಿದೆ. ಈ ಮೃಗಾಲಯ ( Zoo) ವು ಸುಮಾರು 400 ಹೆಕ್ಟೇರ್ (heacter) ವ್ಯಾಪ್ತಿಯಲ್ಲಿದೆ. ಈ ಮೃಗಾಲಯದಲ್ಲಿ 128 ಕ್ಕೂ ಅಧಿಕ ಅಪರೂಪದ ಜಾತಿಯ ಪ್ರಾಣಿಗಳು ಕಂಡು ಬರುತ್ತವೆ.
ಭುವನೇಶ್ವರದಿಂದ 10 ಕಿ. ಮೀಟರ್ ದೂರದಲ್ಲಿ ಭಗವಂತ ಬುದ್ಧನ ದೌಲಾಗಿರಿ ಬೆಟ್ಟವಿದೆ. ಈ ಸ್ಥಳದಲ್ಲಿ ಕಳಿಂಗ ಮತ್ತು ಮೌರ್ಯ ಸಾಮ್ರಾಜ್ಯದ ನಡುವೆ ದೊಡ್ಡ ಯುದ್ಧ ನಡೆದಿತ್ತು. ಯುದ್ಧದ ನಂತರ ಮೌರ್ಯ ಸಾಮ್ರಾಜ್ಯ ಚಕ್ರವರ್ತಿ ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದನು. ಈ ಸ್ಥಳದಲ್ಲಿ ಶಾಂತಿಯ ಸಂಕೇತವಾಗಿ ಶಾಂತಿ ಪಾಗೊಡವನ್ನು ನಿರ್ಮಿಸಲಾಗಿದೆ. ಇಲ್ಲಿ ಬೌದ್ಧ ಧರ್ಮದ ಸ್ಥಾಪಕ ಭಗವಾನ್ ಬುದ್ಧನ ಹೆಜ್ಜೆ ಗುರುತುಗಳಿವೆ.
ಇನ್ನು ಭುವನೇಶ್ವರಕ್ಕೆ ಹೋದರೆ ನೈಸರ್ಗಿಕ ಸೌಂದರ್ಯ (natural beauty) ವನ್ನು ಆನಂದಿಸಲು ನೀವು ಚಂದ್ರಭಾಗ ಬೀಚ್ ಗೆ ಭೇಟಿ ನೀಡಬಹುದು. ಇಲ್ಲಿ ಬೋಟಿಂಗ್, ಈಜು ಮತ್ತು ಮೋಟಾರ್ ಸವಾರಿ ಯನ್ನು ಕೂಡಾ ಆನಂದಿಸಬಹುದು. ಪ್ರತಿಯೊಂದಕ್ಕೂ ಪ್ರತ್ಯೇಕ ಶುಲ್ಕ (fees) ವಿದೆ.
Your point of view caught my eye and was very interesting. Thanks. I have a question for you.
Thank you very much for sharing, I learned a lot from your article. Very cool. Thanks.