

Guinness World Records Puppy : ಸಾಕು ಪ್ರಾಣಿ ನಾಯಿ (Pet Dog) ಎಂದರೆ ಮೊದಲು ಪ್ರಾಮಾಣಿಕತೆ, ನೀಯತ್ತು ನೆನಪಿಗೆ ಬರುವುದು ಸಹಜ. ಮನೆಯವರೊಂದಿಗಿದ್ದು ಮನೆಯವರಂತೆಯೇ ಆಗಿ ಬಿಡುವ ಏಕೈಕ ಸಾಕು ಪ್ರಾಣಿ ನಾಯಿ ಎಂದರೆ ತಪ್ಪಾಗಲಾರದು. ಕೆಲವು ಸಾಕುವ ನಾಯಿಗಳು ನಮ್ಮ ಹೆಗಲೆತ್ತರಕ್ಕೆ ಬೆಳೆಯುತ್ತವೆ. ಆದರೆ ನಿಮಗೊಂದು ಆಶ್ಚರ್ಯ ಸುದ್ದಿ ಹೇಳಲಿದ್ದೇವೆ.
ಸಾಮಾನ್ಯವಾಗಿ ಟಿವಿ ರಿಮೋಟ್ ಒಂದರ ಉದ್ದ ಹೆಚ್ಚು ಎಂದರೆ 5 ಇಂಚು ಇರಬಹುದು. ಆದರೆ, ಶ್ವಾನವೊಂದು ರಿಮೋಟ್‌ಗಿಂತಲೂ ಕಡಿಮೆ ಎತ್ತರವಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು, ಪರ್ಲ್ ಎನ್ನುವ ಶ್ವಾನ ರಿಮೋಟ್‌ಗಿಂತ ಚಿಕ್ಕದಾಗಿದೆ. ಅಂದರೆ 3.59 ಇಂಚಿನಷ್ಟು ಮಾತ್ರ ಎತ್ತರವಿದ್ದು, ಈ ಮೂಲಕ ಜಗತ್ತಿನ ಅತ್ಯಂತ ಕುಳ್ಳ ಶ್ವಾನವೆಂದು ಗಿನ್ನೆಸ್ ದಾಖಲೆಯನ್ನೂ (Guinness World Records puppy ) ಕೂಡ ಪಡೆದಿದೆ.
ಚಿಹೋವಾ ತಳಿಯ ಈ ಶ್ವಾನವು 2020ರ ಸೆ.1ರಂದು ಜನಿಸಿದ್ದು, 3.59 ಇಂಚು ಎತ್ತರ, 553 ಗ್ರಾಂ ತೂಕವಿದೆ. ವೆನೆಸಾ ಸೆಮ್ಮೆರ್ ಎಂಬವರು ಈ ಶ್ವಾನದ ಮಾಲೀಕರಾಗಿದ್ದು, ಈ ಹಿಂದೆ ಇವರದ್ದೇ ಆದ ಇದೇ ಚಿಹೋವಾ ತಳಿಯ ಮಿಲ್ಲಿ ಎನ್ನುವ ಶ್ವಾನ ಗಿನ್ನೆಸ್ ದಾಖಲೆ ಸೃಷ್ಟಿಸಿತ್ತು ಎಂದು ಮಾಹಿತಿ ಇದೆ.
ಸದ್ಯ Guinness World Records ಎಂಬ ಟ್ವಿಟ್ಟರ್ ಪೇಜ್ ನಲ್ಲಿ ಪರ್ಲ್ ಎನ್ನುವ ಅತೀ ಕುಳ್ಳ ಶ್ವಾನವನ್ನು ನೀವು ನೋಡಬಹುದು.
ಇದನ್ನು ಓದಿ : Bird flu in China : ದೇಶಕ್ಕೆ ಮತ್ತೊಂದು ಸೋಂಕಿನ ಆತಂಕ ಹೆಚ್ಚಳ..! ಚೀನಾದಲ್ಲಿ ಹಕ್ಕಿ ಜ್ವರದಿಂದ ಮೊದಲ ವ್ಯಕ್ತಿ ಸಾವು













