Good News For Women :ಇನ್ನು ಕೆಳವರ್ಗದ ಮಹಿಳೆಯರಿಗೆ ಮಾತ್ರವಲ್ಲ, ಮೇಲ್ವರ್ಗದ ಮಹಿಳೆಯರಿಗೂ ದೊರಕುತ್ತೆ ಭರ್ಜರಿ 15 ಸಾವಿರ!

Good News For Women: ಆಂಧ್ರಪ್ರದೇಶದ(Andhra Pradesh) ಮಹಿಳೆಯರಿಗೆ ಮುಖ್ಯಮಂತ್ರಿ (Chief Minister of Andhra Pradesh)ಜಗನ್ಮೋಹನ್ ರೆಡ್ಡಿ(YS Jagan Mohan Reddy) ಯವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಜಗನ್ಮೋಹನ್ ರೆಡ್ಡಿ(Jagan Mohan Reddy) ಅವರು ವೈಎಸ್ಆರ್ ಇಬಿಸಿ ನೇಸ್ತಂ ಯೋಜನೆಯ ಎರಡನೇ ಹಂತದ ಭಾಗವಾಗಿ ಈ ತಿಂಗಳ 12 ರಂದು ಬುಧವಾರ ಮಹಿಳಾ(Womens) ಫಲಾನುಭವಿಗಳ ಖಾತೆಗೆ ತಲಾ 15,000 ಜಮಾ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ, ಜಗನ್ಮೋಹನ್ ರೆಡ್ಡಿ ಸರ್ಕಾರವು ಈ ಯೋಜನೆಯಡಿ ಸುಮಾರು 4 ಲಕ್ಷ ಮಹಿಳೆಯರ ಖಾತೆಗಳಿಗೆ(Good News For Women)590 ಕೋಟಿಗಳನ್ನು ಜಮಾ ಮಾಡಿ ಮಹಿಳೆಯರಿಗೆ ನೆರವಾಗಿದೆ. ಬ್ರಾಹ್ಮಣ, ವೇಲಮ, ಆರ್ಯ ವೈಶ್ಯರೆಡ್ಡಿ, ಕಮ್ಮ, ಜಾತಿಗೆ ಸೇರಿದ 45 ರಿಂದ 60 ವರ್ಷದೊಳಗಿನ ಬಡ ಮಹಿಳೆಯರು ಈ ಯೋಜನೆಯ ಮೂಲಕ ಅನುಕೂಲವನ್ನು ಪಡೆಯಬಹುದಾಗಿದೆ. ಈ ಕಾರ್ಯಕ್ರಮವು ಪ್ರಕಾಶಂ ಜಿಲ್ಲೆಯ ಮಾರ್ಕಪುರಂನಲ್ಲಿ ಜರುಗಲಿದೆ.

ಎಪಿ ಸಿಎಂ ಜಗನ್ ಅವರು ಆರ್ಥಿಕವಾಗಿ ಹಿಂದುಳಿದ ಓಸಿ ಸಮುದಾಯಗಳಿಗಾಗಿ ವೈಎಸ್ಆರ್ ಇಸಿಬಿ ನೇಸ್ತಮ್​ ಯೋಜನೆಯ ಮೊದಲ ಹಂತವನ್ನು ಆರಂಭಿಸಲಿದ್ದಾರೆ. ಈಗಾಗಲೇ ಜಗನಣ್ಣ ಅಮ್ಮವೋಡಿ, ವೈ.ಎಸ್.ಆರ್ ಪಿಂಚಣಿ ಕಾನುಕ, ವೈ.ಎಸ್.ಆರ್ ಆಸರಾ, ವೈ.ಎಸ್.ಆರ್ ಶೂನ್ಯ ಬಡ್ಡಿ, ವೈ.ಎಸ್.ಆರ್ ಚೆಯುತ, ವೈ.ಎಸ್.ಆರ್ ಕಾಪು ನೇಸ್ತಂ, ಮಹಿಳೆಯರಿಗೆ ಉಚಿತ ವಸತಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಸರಕಾರ ಮತ್ತೊಂದು ಯೋಜನೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದೆ.

ಸರ್ಕಾರ(Government) ಈಗಾಗಲೇ ಎಬಿಸಿ ನೆಟ್ವರ್ಕ್ ಅಡಿಯಲ್ಲಿ ಯಾರು ಈ ಯೋಜನೆಗೆ ಅರ್ಹರು ಎಂದು ಘೋಷಿಸಿದ್ದು, ಮೇಲ್ವರ್ಗಕ್ಕೆ ಸೇರಿದ ಬಡ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹರು ಎಂದು ಪರಿಗಣಿಸಲಾಗುತ್ತದೆ.ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಮಹಿಳೆಯರು 45 ವರ್ಷದಿಂದ 60 ವರ್ಷದೊಳಗಿನವರಾಗಿದ್ದರೆ ಮಾತ್ರ ಈ ಯೋಜನೆಗೆ ಅರ್ಹರಾಗುತ್ತಾರೆ. ಮೇಲ್ವರ್ಗದ ಮಹಿಳೆಯರ ಖಾತೆಗೆ ಪ್ರತಿ ವರ್ಷ 15 ಸಾವಿರ ರೂಪಾಯಿಯಂತೆ ನಗದನ್ನು ಜಮಾ ಮಾಡಲಾಗುತ್ತದೆ. ಎಲ್ಲಾ ಮೂರು ವರ್ಷಗಳಲ್ಲಿ 45 ಸಾವಿರ ಠೇವಣಿ ಮಾಡಲಾಗುತ್ತದೆ. ಕ್ಷತ್ರಿಯ, ರೆಡ್ಡಿ, ಕಮ್ಮ, ವೇಲಮ, ಬ್ರಾಹ್ಮಣ, ಆರ್ಯ ವೈಶ್ಯ ಮತ್ತಿತರ ಮಹಿಳೆಯರಿಗೆ ಸರಕಾರ ಆರ್ಥಿಕ ಸಹಾಯ ಮಾಡಲಿದೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಫಲಾನುಭವಿಗಳ ಸಂಖ್ಯೆ ಹೆಚ್ಚಿದೆ ಎಂದು ಜಗನ್ಮೋಹನ್ ರೆಡ್ಡಿ ಸರ್ಕಾರ ಮಾಹಿತಿ ನೀಡಿದೆ. ಈ ಬಾರಿ ಹೆಚ್ಚಿದ ಫಲಾನುಭವಿಗಳಿಗೂ ಕೂಡ ಹಣ ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಎಷ್ಟೇ ಆರ್ಥಿಕ ಸಮಸ್ಯೆ ಇದ್ದರೂ ಕೂಡ ನಿಯಮಿತವಾಗಿ ನಗದು ಜಮಾ ಮಾಡಲಾಗಿತ್ತಿದ್ದು, ಇದರ ಭಾಗವಾಗಿ ಬುಧವಾರ ಸಿಎಂ ಬಟನ್ ಒತ್ತುವ ಮೂಲಕ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ಯೋಜನೆಗೆ ಕೆಲ ನಿಬಂಧನೆಗಳನ್ನು ವಿಧಿಸಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 60 ವರ್ಷದೊಳಗಿನವರು ಮೇಲ್ಜಾತಿ ಮಹಿಳೆಯರಾಗಿರಬೇಕು. ಒಂದು ವೇಳೆ ಅರ್ಹತೆ ಇದ್ದು, ಅರ್ಜಿ ಸಲ್ಲಿಸದಿದ್ದರೂ ಕೂಡ ಅವರ ಹೆಸರು ಅರ್ಹತೆ ಪಟ್ಟಿಯಲ್ಲಿದ್ದರೆ ನೇರವಾಗಿ ಅವರ ಖಾತೆಗೆ ನಗದು ಜಮೆಯಾಗುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲು ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಹ ಇಬಿಸಿ ಮಹಿಳಾ ಫಲಾನುಭವಿಗಳಿಗೆ 15,000 ರೂಪಾಯಿಗಳನ್ನು ನೀಡಲಾಗುತ್ತದೆ.

ಇದರೊಂದಿಗೆ ವೈಎಸ್ಆರ್ ಚೆಯುತ, ಕಾಪು ನೇಸ್ತಂ ಯೋಜನೆ ಪಡೆಯುವ ಫಲಾನುಭವಿಗಳು ಹಾಗೂ ಎಸ್ಸಿ, ಎಸ್ಟಿ, ಬಿಸಿ ಅಲ್ಪಸಂಖ್ಯಾತ ಮಹಿಳೆಯರು ಈ ಯೋಜನೆಗೆ ಅರ್ಹರಾಗುವುದಿಲ್ಲ ಎನ್ನಲಾಗಿದೆ. ಕುಟುಂಬದ ವಾರ್ಷಿಕ ಆದಾಯವು ಹಳ್ಳಿಗಳಲ್ಲಿ ತಿಂಗಳಿಗೆ 10 ಸಾವಿರ ರೂಪಾಯಿ ಆಗಿರಬೇಕು. ನಗರ ಪ್ರದೇಶಗಳಲ್ಲಿ ತಿಂಗಳಿಗೆ 12 ಸಾವಿರ ರೂಪಾಯಿ ಮೀರಬಾರದು. ಕುಟುಂಬದಲ್ಲಿ ಆದಾಯ ತೆರಿಗೆ ಪಾವತಿಸುವವರು, ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರ ಇಲ್ಲವೇ ಪಿಂಚಣಿದಾರರಾಗಿರಬಾರದು. ಕುಟುಂಬದ ಯಾರ ಹೆಸರಿನಲ್ಲಿಯೂ ನಾಲ್ಕು ಚಕ್ರದ ವಾಹನಗಳು ಇರಬಾರದು. ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಪುಸ್ತಕ ಫಲಾನುಭವಿಯ ಹೆಸರಿನಲ್ಲಿರಬೇಕು. ಹೀಗಿದ್ದರೆ ಮಾತ್ರ ಈ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ. ಇಬಿಸಿ ಮಹಿಳೆಯರು ಮಾತ್ರ ಅನುಕೂಲ ಪಡೆದುಕೊಳ್ಳಬಹುದಾಗಿದೆ. ಆದರೆ ಈ ಫಲಾನುಭವಿಗಳು ತಮ್ಮ ಹೆಸರಿನಲ್ಲಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಪಾಸ್ ಪುಸ್ತಕವನ್ನು ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ಅನರ್ಹರು ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Teachers Recruitment Rules 2023 : ಶಿಕ್ಷಕರ ನೇಮಕಾತಿಯಲ್ಲಿ ಬಂದಿದೆ ದೊಡ್ಡ ಬದಲಾವಣೆ!

Leave A Reply

Your email address will not be published.