BJP Candidate List : ಬಿಜೆಪಿ ಚುನಾವಣಾ ಸ್ಪರ್ಧಿಗಳ ಮೊದಲ ಲಿಸ್ಟ್ ಬಿಡುಗಡೆ, ಯಾರಿದ್ದಾರೆ ಯಾರಿಲ್ಲ ?!
BJP Candidates List released : ಬಹು ನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್ (BJP Candidates List released ) ಬಿಡುಗಡೆಗೊಂಡಿದೆ. ಕರ್ನಾಟಕದ ವಿಧಾನಸಭೆಗೆ ಸ್ಪರ್ಧಿಸಲು ಬಿಜೆಪಿ ತನ್ನ ಮೊದಲ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ನಿರೀಕ್ಷೆಯಂತೆ ಹಾಲಿ ಶಾಸಕರುಗಳಿಗೆ ಟಿಕೆಟ್ ಲಭ್ಯ ಆಗಿದೆ. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಉಳಿದಂತೆ 35 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಯ್ದಿರಿಸಿದೆ.
ಆದರೆ ಬಹುನಿರೀಕ್ಷಿತ ಕ್ಷೇತ್ರಗಳಾದ ಸುಳ್ಯ ಮತ್ತು ಪುತ್ತೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಮೊದಲ ಲಿಸ್ಟ್ ನಲ್ಲಿ ಇಲ್ಲ. ಅಳೆದೂ ಸುರಿದು ಬಿಜೆಪಿ ತನ್ನ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಎಲ್ಲಾ ಪಕ್ಷಗಳ ಹಾಗೇ ಗೆಲ್ಲುವ ಅಭ್ಯರ್ಥಿಗೆ ಬಿಜೆಪಿಯು ಮಣೆ ಹಾಕಿದೆ ಎನ್ನಲಾಗಿದೆ. ಕೆಲವು ಕಡೆ ಗೆಲ್ಲುವ ಅಭ್ಯರ್ಥಿಗಳನ್ನು ಕೂಡಾ ಬಿಟ್ಟು ಕೊಟ್ಟು ಬೇರೆ ಅಭ್ಯರ್ಥಿಗಳನ್ನೂ ಒಡ್ಡಿದೆ ಬಿಜೆಪಿ.
ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಸೋಮಣ್ಣ ಅವರು ಬಿಗ್ ಫೈಟ್ ನೀಡಲಿದ್ದಾರೆ. ಕನಕಪುರದ ಬಂಡೆ ಬಿಕೆ ಶಿವಕುಮಾರ್ ಎದುರು ಗೌಡರ ಪ್ರತಿನಿಧಿಯಾಗಿ ಆರ್ ಅಶೋಕ್ ಅವರು ಸ್ಪರ್ಧೆ ಒಡ್ಡಲಿದ್ದಾರೆ. ಇದು ಇವತ್ತಿನ ಬಿಜೆಪಿಯ ಲಿಸ್ಟಿನಲ್ಲಿನ ಬಹು ದೊಡ್ಡ ಫೈಟ್ ಲಿಸ್ಟ್. ಅಲ್ಲದೆ ಸೋಮಣ್ಣ ಮತ್ತು ಅಶೋಕ್ ಅವರು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ತಮ್ಮ ನಾಯಕತ್ವದ ಬಲವನ್ನು ತೋರ್ಪಡಿಸಬೇಕಾಗಿದೆ.
ಬಹುನಿರೀಕ್ಷಿತ ಮತ್ತು ಹಿಂದುತ್ವದ ಪ್ರಯೋಗಶಾಲೆ ಪುತ್ತೂರಿನಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಟಿಕೆಟ್ ಕೈತಪ್ಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸೈಲೆಂಟ್ ಕೆಲಸಗಾರನಿಗೆ ಟಿಕೆಟ್ ತಪ್ಪಿಸಿದ ಅಪಕ್ಯಾತಿಗೆ ಸಂಘ ಪರಿವಾರ ಎನ್ನಲಾಗಿದೆ.
ಆಶಾ ತಿಮ್ಮಪ್ಪ ಗೌಡ – ಪುತ್ತೂರು
ಭಾಗೀರಥಿ ಮುರುಳ್ಯ-ಸುಳ್ಯ
ಸೊರಬ – ಕುಮಾರ್ ಬ೦ಗಾರಪ್ಪ
ಉಡುಪಿ – ಯಶ್ಪಾಲ್ ಸುವರ್ಣ
ಕಾಪು – ಗುರ್ಮೆ ಸುರೇಶ್ ಶೆಟ್ಟಿ
ಕಾರ್ಕಳ – ಸುನೀಲ್
ಚಿಕ್ಕಮಗಳೂರು – ಸಿ ಟಿ ರವಿ
ತಿಪಟೂರು – ಬಿ ಸಿ ನಾಗೇಶ್
ಕುಣಿಗಲ್ – ಕೃಷ್ಣ ಕುಮಾರ
ಕೊರಟಗೆರೆ – ಅನೀಲ್ ಕುಮಾರ್
ಮಧುಗಿರಿ – ಎಲ್‌ಸಿ ನಾಗರಾಜ್
ಬಾಗೆಪಲ್ಲಿ – ಮುನಿರಾಜ್
ಚಿಕ್ಕಬಳ್ಳಾಪುರ – ಸುಧಾಕರ್
ಕು೦ದಾಪುರ- ಕಿರಣ್ ಕೊಡ್ಗಿ
ಕೋಲಾರ – ವರ್ತೂರ್ ಪ್ರಕಾಶ್
ಯಲಹ೦ಕ – ಎಸ್ ಅರ್ ವಿಶ್ವನಾಥ್
ಯಶವಂತ ಪುರ – ಸೋಮಶೇಖರ್
ರಾಜರಾಜೇಶ್ವರಿ ನಗರ -ಮುನಿರತ್ನ
ದಾಸರಹಳ್ಳಿ- ಮುನಿರಾಜು
ಪುಲಕೇಶಿನಗರ್ – ಮುರಳಿ
ಶಿವಾಜಿ ನಗರ್ – ಎನ್ ಚ೦ದ
ಉಡುಪಿಯಲ್ಲಿ ಯಶುಪಾಲ್ ಸುವರ್ಣ, ಕಾಪು ಗುರ್ಮೆ ಸುರೇಶ್ ಶೆಟ್ಟಿ –
ಗಾ೦ಧಿ ನಗರ್ – ಸಪ್ತಗಿರಿ ಗೌಡ
ರಾಜಾಜಿನಗರ್- ಸುರೇಶ್ ಕುಮಾರ್
ಚಾಮರಾಜಪೇಟೆ – ಭಾಸ್ಕರ್ ರಾವ್ IPS
ಬೊಮ್ಮನಹಳ್ಳಿ – ಸತೀಶ್ ರೆಡ್ಡಿ
ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳ ಕಂಪ್ಲೀಟ್ ಲಿಸ್ಟ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.