Sugarcane: ದೇಹದ ತಾಪಮಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಬ್ಬಿನ ಹಾಲಿನಲ್ಲಿ ಅಡಗಿದೆ ಆರೋಗ್ಯದ ಗುಟ್ಟು!
Sugarcane: ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಆಹಾರ ಸೇವನೆ ಅಗತ್ಯ. ಬೇಸಿಗೆ ಕಾಲದಲ್ಲಿ ಅಂತೂ ತಂಪಾದ ಪಾನೀಯಗಳಿಂದ ದೇಹವನ್ನು ಸಮತೋಲನದಲ್ಲಿ ಇಡುವುದು ಉತ್ತಮ. ಬೇಸಿಗೆ ಕಾಲದಲ್ಲಿ ಹೆಚ್ಚಿನ ಜನರು ಕುಡಿಯಲು ಬಯಸುವುದೇ ಕಬ್ಬಿನ ಹಾಲು.
ಕಬ್ಬಿನ ಹಾಲು ಗ್ಲೂಕೋಸ್ ಮತ್ತು ಇತರ ಪೋಷಕಾಂಶಗಳು ಶಕ್ತಿಯನ್ನು ವೃದ್ದಿಸುತ್ತವೆ. ಕಬ್ಬಿನ ಹಾಲಿನ (Sugarcane) ಸೇವನೆಯಿಂದ ಜೀರ್ಣಶಕ್ತಿ ಉತ್ತಮಗೊಳ್ಳುವುದರ ಜೊತೆಗೇ ತೂಕ ಇಳಿಸುವ ಪ್ರಯತ್ನಗಳಿಗೂ ಹೆಚ್ಚಿನ ಬೆಂಬಲ ದೊರಕುತ್ತದೆ. ರೋಗ ನಿರೋಧಕ ಶಕ್ತಿಯ ಹೆಚ್ಚಳ, ತೂಕದಲ್ಲಿ ಇಳಿಕೆಯ ಪ್ರಯತ್ನಗಳಿಗೆ ನೆರವು, ಜೀರ್ಣಕ್ರಿಯೆ ಉತ್ತಮಗೊಳಿಸುವುದು, ಕಾಮಾಲೆ ರೋಗ ಕಡಿಮೆ ಮಾಡುವುದು ಮೊದಲಾದ ಕೆಲವಾರು ಪ್ರಯೋಜನಗಳಿವೆ.
ಬೇಸಿಗೆ ಕಾಲದಲ್ಲಿ ಇದನ್ನು ಕುಡಿದರೆ ನಮ್ಮ ದೇಹ ತಂಪಾಗುತ್ತದೆ. ಅದೇ ರೀತಿ ಮಳೆಗಾಲದಲ್ಲಿ ಸೇವನೆ ಮಾಡಿದರೆ ನಮ್ಮ ದೇಹ ಬಿಸಿಯಾಗುತ್ತದೆ. ಒಟ್ಟಿನಲ್ಲಿ ನಮ್ಮ ದೇಹದ ತಾಪಮಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಗುಣಲಕ್ಷಣ ಕಬ್ಬಿನ ಹಾಲಿನಲ್ಲಿ ಕಂಡುಬರುತ್ತದೆ.
ಇದರಲ್ಲಿ ಅನೇಕ ಬಗೆಯ ಪೌಷ್ಠಿಕಾಂಶಗಳು ಸಿಗುವ ಹೊರತಾಗಿಯೂ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಗುಣಲಕ್ಷಣ ಇದೆ. ಕಾಮಾಲೆ ರೋಗದಿಂದ ಬಳಲುತ್ತಿರುವವರಿಗೆ ಮತ್ತು ರಕ್ತಹೀನತೆ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಇದು ಪರಿಹಾರ ಒದಗಿಸುತ್ತದೆ ಎನ್ನುವುದು ಒಂದು ಉದಾಹರಣೆ ಆಗಿದೆ.
ಇದರಲ್ಲಿ ಆಯಂಟಿಆಕ್ಸಿಡೆಂಟ್ ಅಂಶಗಳ ಜೊತೆಗೆ ಪೊಟ್ಯಾಸಿಯಮ್ ಕೂಡ ಲಭ್ಯವಿರುವುದರಿಂದ ಕಬ್ಬಿನ ರಸವನ್ನು ಕುಡಿಯುವುದರಿಂದ ನಿರ್ಜಲೀಕರಣವಾಗುವುದಿಲ್ಲ. ಖನಿಜಗಳು ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಕಬ್ಬಿನ ರಸವು ಸಂಪೂರ್ಣವಾಗಿ ಸಕ್ಕರೆಯನ್ನು ಹೊಂದಿರುವುದಿಲ್ಲ. ನಾವು ಅದರ ಅನುಪಾತವನ್ನು ನೋಡಿದರೆ, ಅದು 70 ರಿಂದ 75 ಪ್ರತಿಶತದಷ್ಟು ನೀರನ್ನು ಹೊಂದಿರುತ್ತದೆ. 15 ರಷ್ಟು ಫೈಬರ್ ಮತ್ತು ಸುಮಾರು 15 ಪ್ರತಿಶತ ಸಕ್ಕರೆ ಇರುತ್ತದೆ.
ಸಕ್ಕರೆ ದೇಹದಲ್ಲಿ ಗ್ಲೂಕೋಸ್ ಅನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಸಕ್ಕರೆಯ ಕಾರಣದಿಂದಾಗಿ, ದೇಹದಲ್ಲಿನ ಸಕ್ಕರೆಯ ಪ್ರಮಾಣವು ತುಂಬಾ ವೇಗವಾಗಿ ಹೆಚ್ಚಾಗುತ್ತದೆ. ಹಾಗಾಗಿ ಸಕ್ಕರೆ ರೋಗಿಗಳು ಕಬ್ಬಿನ ರಸದಿಂದ ದೂರವಿರುವುದು ಉತ್ತಮ. ಹಾಗಾಗಿ ಮಧುಮೇಹಿಗಳಿಗೆ ಇದರಿಂದ ಹಾನಿ ಉಂಟಾಗುತ್ತದೆ.
ಕಬ್ಬಿನ ರಸದಲ್ಲಿ ಕರಗುವ ನಾರುಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಇವು ಕರುಳಿನ ಒಳಗೆ ಆಹಾರದ ಚಲನೆ ಸುಲಭವಾಗಿಸಲು ಸಹಾಯ ಮಾಡುತ್ತವೆ. ಆ ಮೂಲಕ ಮಲಬದ್ಧತೆ, ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆಯ ಸೆಡೆತ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ನೆರವಾಗುತ್ತದೆ.
ದೇಹದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಇದ್ದರೆ ರೋಗ ನಿರೊಧಕ ಶಕ್ತಿ ಉತ್ತಮವಾಗಿರುತ್ತದೆ. ನೀವು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಅಂಶ ಕಬ್ಬಿನ ಹಾಲಿನಲ್ಲಿದೆ. ಇದರ ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರುತ್ತದೆ.
ಇದನ್ನೂ ಓದಿ: Nail Palmistry: ಉಗುರುಗಳ ಮೇಲಿನ ಬಿಳಿ, ಕಪ್ಪು ಕಲೆಗಳು ಶುಭನ ಅಥವಾ ಅಶುಭನಾ? ಹಸ್ತಸಾಮುದ್ರಿಕ ಶಾಸ್ತ್ರ ಏನ ಹೇಳುತ್ತೆ?