Airtel New Recharge Plan : ಏರ್ಟೆಲ್ 3 ವಾರ್ಷಿಕ ಯೋಜನೆಯಲ್ಲಿ ಸಿಗಲಿದೆ ಅನ್ಲಿಮಿಟೆಡ್ 5G ಡೇಟಾ ಮತ್ತು ಕರೆ!
Airtel New Recharge Plan: ಪ್ರಸಿದ್ಧ ಟೆಲಿಕಾಂ ಕಂಪೆನಿಗಳಲ್ಲಿ ಏರ್ಟೆಲ್ (Airtel) ಕೂಡಾ ಒಂದು. ಈ ಕಂಪೆನಿ ಮಾರುಕಟ್ಟೆಯಲ್ಲಿ ಅತೀ ಹಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಜಿಯೋ (jio) ಕಂಪೆನಿಗೆ ಪ್ರತಿಸ್ಪರ್ಧಿಯಾಗಿರುವ ಏರ್ಟೆಲ್ ಕಂಪೆನಿ ಸ್ಮಾರ್ಟ್ಫೋನ್ ಬಳಕೆದಾರರನ್ನು ತನ್ನತ್ತ ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಸದ್ಯ ನೀವು ಭಾರ್ತಿ ಏರ್‌ಟೆಲ್‌ನಿಂದ ಬಳಕೆದಾರರಾಗಿದ್ದರೆ, ಏರ್ಟೆಲ್‌ನ 3 ವಾರ್ಷಿಕ ವ್ಯಾಲಿಡಿಟಿ ಯೋಜನೆಗಳ (Airtel New Recharge Plan) ಮಾಹಿತಿ ಇಲ್ಲಿದೆ. ಭಾರ್ತಿ ಏರ್‌ಟೆಲ್ ಬಳಕೆದಾರರಿಗೆ ಮೂರು ರೀಚಾರ್ಜ್ ಪ್ಲಾನ್‌ಗಳನ್ನು ಹೊಂದಿದ್ದು, ಇದರ ಸಂಪೂರ್ಣ ವಿವರ ಇಲ್ಲಿದೆ.
ರೂ. 1799 ರೀಚಾರ್ಜ್ ಪ್ಲ್ಯಾನ್ :
ಭಾರ್ತಿ ಏರ್‌ಟೆಲ್ ನ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಬಳಕೆದಾರರಿಗೆ 24GB ಡೇಟಾ ಸೌಲಭ್ಯ ಲಭ್ಯವಿದೆ. ವಾಯ್ಸ್ ಕರೆ ಮತ್ತು 100 SMS ಸೇವೆಗಳೂ ಲಭ್ಯ. ಜೊತೆಗೆ Apollo 24|7 Circle, FASTag ನಲ್ಲಿ ರೂ 100 ಕ್ಯಾಶ್‌ಬ್ಯಾಕ್, ಉಚಿತ Hellotunes ಮತ್ತು Wynk Music ನಂತಹ ಹೆಚ್ಚುವರಿ ಪ್ರಯೋಜನಗಳು ಸಿಗಲಿವೆ. ಈ ಯೋಜನೆಯು ಕೇವಲ ಒಂದು ವರ್ಷದವರೆಗೆ ಏರ್‌ಟೆಲ್‌ನ ಮೊಬೈಲ್ ನೆಟ್‌ವರ್ಕ್ ಸೇವೆಗಳಿಗೆ ಮಾನ್ಯತೆ ಮತ್ತು ಪ್ರವೇಶವನ್ನು ಬಯಸುವ ಜನರಿಗೆ ಸೂಕ್ತವಾಗಿದೆ.
ರೂ. 2999 ರೀಚಾರ್ಜ್ ಪ್ಲ್ಯಾನ್ :
ಇದು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 2GB ದೈನಂದಿನ ಡೇಟಾ ಸೌಲಭ್ಯ ಲಭ್ಯವಿದ್ದು, 100 SMS/ದಿನ ಮತ್ತು ಅನ್ಲಿಮಿಟೆಡ್ ಧ್ವನಿ ಕರೆಗಳು ಲಭ್ಯ. ಜೊತೆಗೆ ಅಪೊಲೊ 24|7 ಸರ್ಕಲ್, ಫಾಸ್ಟ್‌ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಸೇವೆಯೂ ದೊರಕುತ್ತದೆ.
ರೂ. 3359 ರೀಚಾರ್ಜ್ ಪ್ಲ್ಯಾನ್ :
ಇದು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಬಳಕೆದಾರರು
2.5GB ದೈನಂದಿನ ಡೇಟಾ ಸೌಲಭ್ಯ ಪಡೆಯಬಹುದು. ದಿನಕ್ಕೆ 100 SMS ಮತ್ತು ಅನಿಯಮಿತ ಧ್ವನಿ ಕರೆ ಇರಲಿದೆ. ಹೆಚ್ಚುವರಿಯಾಗಿ ಅನಿಯಮಿತ 5G ಡೇಟಾ, ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್, ಅಪೊಲೊ 24|7 ಸರ್ಕಲ್ ಮೂರು ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದೆ ಫಾಸ್ಟ್‌ಟ್ಯಾಗ್‌ನೊಂದಿಗೆ ರೂ 100 ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ನಂತಹ ಪ್ರಯೋಜನಗಳು ಉಚಿತವಾಗಿ ಪಡೆಯಬಹುದು.