YSV Datta: ‘ಕೈ’ ಕುಲುಕಿ ‘ಕೈ’ ಕೊಟ್ಟ ಕಾಂಗ್ರೆಸ್‌ಗೆ ಸೆಡ್ಡು ಹೊಡೆದ ದತ್ತಾ: ಪಕ್ಷೇತರವಾಗಿ ಸ್ಪರ್ಧಿಸ್ತಾರಂತೆ ಕಡೂರಿನ ಗಣಿತ ಮೇಷ್ಟ್ರು!

YSV Datta : ಜೆ ಡಿ ಎಸ್(JDS) ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ವೈಎಸ್ ವಿ ದತ್ತಾ(YSV Datta)ಗೆ ಕಡೂರು ಟಿಕೆಟ್ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿಮಾನಿಗಳ ಒತ್ತಡಕ್ಕೆ ಮಣಿದ ಅವರು ಪಕ್ಷೇತರವಾಗೊ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ವೈಎಸ್‌ವಿ ದತ್ತಾ (YSV Datta) ಅವರು ಈ ಬಾರಿ ಜೆಡಿಎಸ್‌ನಲ್ಲಿ ಟಿಕೆಟ್‌ ಸಿಗುವುದು ಅನುಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಗಿಟ್ಟಿಸಿಕೊಳ್ಳಲು ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಕಡೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಬಿ ಫಾರ್ಮ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಕಾಂಗ್ರೆಸ್‌ನ 2ನೇ ಪಟ್ಟಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಅನ್ನು ಆನಂದ್‌ ಕೆ.ಎಸ್ ಅವರಿಗೆ ನೀಡಲಾಗಿದ್ದು, ಗಣಿತ ಮೇಷ್ಟ್ರು ಲೆಕ್ಕಾಚಾರ ತಪ್ಪಿದಂತಾಗಿದೆ.

ಅಂದಹಾಗೆ ಇದರಿಂದ ತೀವ್ರ ಬೇಸರಗೊಂಡಿದ್ದ ಅವರು ತಮ್ಮ ಅಭಿಮಾನಿಗಳ ಸಭೆಯನ್ನು ಕರೆಯಲಾಗಿದ್ದು, ಅವರು ಹೇಳಿದಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ. ಅಭಿಮಾನಿಗಳ ಒತ್ತಡ ಬಂದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದರು. ಅದರಂತೆ ಇಂದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳೊಂದಿಗೆ ಸಭೆ ಮಾಡಿದ ದತ್ತಾ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್‌ ಟಿಕೆಟ್ ತಪ್ಪಿದ ವೇಳೆಯಲ್ಲಿ ಅಭಿಮಾನಿಗಳು ದತ್ತರಿಗೆ ಸ್ವತಂತ್ರವಾಗಿ ಸ್ಪರ್ಧಿಸಲು ಮನವಿ ಮಾಡಿದ್ದರು. ಆಗ 2 ದಿನ ಸಮಯ ಕೇಳಿದ್ದ ದತ್ತಾವರು ಇಂದು ರಾಜಕೀಯ ನಿರ್ಧಾರ ತೆಗೆದುಕೊಳ್ಳವ ನಿಟ್ಟಿನಲ್ಲಿ ಸಭೆ ಕರೆದಿದ್ದರು. ಕಲ್ಯಾಣ ಮಂಟಪದಲ್ಲಿ ಜಾಗ ಸಾಲದೆ ಮಂಟಪದ ಕೆಳಭಾಗದಲ್ಲಿ ಎಲ್.ಇ.ಡಿ. ವ್ಯವಸ್ಥೆ ಮಾಡಲಾಗಿತ್ತು. ಸಭೆ ಆರಂಭಕ್ಕೂ ಮುನ್ನವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ದತ್ತಾ ಆಗಮಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಕಂಡು ನಿಮ್ಮ ಪ್ರೀತಿಗೆ ನಾನು ಋಣಿ ಎಂದು ಜನರಿಗೆ ತಿಳಿಸಿದರು. ಸಭೆ ಆರಂಭಕ್ಕೂ ಮುನ್ನ ಕಡೂರು ಪಟ್ಟಣದಲ್ಲಿ ದತ್ತಾ ರವರ ಶಕ್ತಿ ಪ್ರದರ್ಶನ ನಡೆಯಿತು. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ದತ್ತಾ ಅಭಿಮಾನಿಗಳು ಬೃಹತ್ ರೋಡ್ ಶೋ ನಡೆಸಿದರು. ಸ್ವಾಭಿಮಾನಿ ಸಭೆಗೆ ಸುಮಾರು 4000 ಜನ ಭಾಗಿಯಾಗಿದ್ದರು.

ಇಂದಿನ ಸ್ವಾಭಿಮಾನದ ಸಭೆಯಲ್ಲಿ ಸ್ವತಂತ್ರವಾಗಿ ನಿಲ್ಲುವಂತೆ ತೀರ್ಮಾನಿಸಿದ ವೈ.ಎಸ್.ವಿ.ದತ್ತಾ ಚುನಾವಣೆ ಖರ್ಚಿಗಾಗಿ ಭಿಕ್ಷೆಯನ್ನು ಬೇಡಿದ್ದರು. ಸ್ವಾಭಿಮಾನದ ಸಭೆಯಲ್ಲಿ ದತ್ತಾ ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಅನೌನ್ಸ್ ಮಾಡಿದ ದತ್ತ ಚುನಾವಣೆ ಖರ್ಚಿಗಾಗಿ ಹೆಗಲ ಮೇಲೆ ಟವೆಲ್ ಹಾಕಿಕೊಂಡು ಭಿಕ್ಷೆ ಬೇಡಿದರು.ವೈ.ಎಸ್.ವಿ.ದತ್ತಾ ಅವರ ಅಭಿಮಾನಿಗಳಲ್ಲಿ ಹಲವರು 50 ಸಾವಿರ, ಲಕ್ಷ, 2 ಲಕ್ಷದ ಚೆಕ್ ನೀಡಿದರು. ಅಲ್ಲದೆ ಮತ್ತಷ್ಟು ಹಣ ಕೊಡ್ತೀವಿ ಎಂದ ಅಭಿಮಾನಿಗಳು ಭರವಸೆ ನೀಡಿದ್ದಾರೆ.

ಇನ್ನು ದತ್ತಾಗೆ ಟಿಕೆಟ್ ಕೈತಪ್ಪಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತಾದ ವಿವಾದಿತ ಹೇಳಿಕೆ ಕಾರಣವಾಯಿತೇ? ಎಂಬ ಚರ್ಚೆಗಳೂ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತಾಗಿ ವೈ ಎಸ್ ವಿ ದತ್ತಾ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋವೊಂದು ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಡಿಕೆ ಶಿವಕುಮಾರ್ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ್ದರು. ಇದು ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು.

ಏನಿದು‌ ಆಡಿಯೋ?: ಕಾಂಗ್ರೆಸ್ ಪಕ್ಷಕ್ಕೆ ಡಿಕೆಶಿ ಹೊರೆ, ಅವರನ್ನು ಸಮರ್ಥನೆ ಮಾಡಲು ಆಗಲ್ಲ ಎಂದು ವೈಎಸ್ ವಿ ದತ್ತಾ ಹೇಳಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿತ್ತು. ರಾಜಕೀಯದಲ್ಲಿ ಹೂವಿನ‌ ಹಾರ ಹಾಕುವವರು ಇರ್ತಾರೆ, ಮುಸುಕಿನ ಜೋಳದ ಹಾರ ಹಾಕುವವರು ಇರ್ತಾರೆ. ರಾಜಕಾರಣಿ ಎಂದರೆ ಕಲ್ಲು ಮೊಟ್ಟೆಯಲ್ಲಿ ಹೊಡೆಯುವವರು ಇರ್ತಾರೆ. ನಾನು ಬಹಳ ಸಂತೋಷದಿಂದ ಎಲ್ಲರ ಸಲಹೆ ಹಾಗೂ ಅಭಿಪ್ರಾಯಗಳನ್ನು ಸ್ವೀಕಾರ ಮಾಡುತ್ತೇನೆ. ದತ್ತಾ ಅವರನ್ನು ಮೇಷ್ಟ್ರು ಅಂತ ಕರೆಯುತ್ತೇವೆ. ಅವರು ಏನೇ ಹೇಳಿದ್ರೂ ಅದು ಆಶೀರ್ವಾದ ಎಂದು ಭಾವಿಸುತ್ತೇನೆ ಎಂದಿದ್ದರು.

Leave A Reply

Your email address will not be published.