Urfi Javed: ತುಂಡುಡುಗೆಯ ಹುಂಬ ಹುಡುಗಿ ಉರ್ಫಿ ಜಾವೇದ್ ಪೋರ್ನ್ ಸ್ಟಾರ್ ಆಗಿದ್ದಳ? ಇದಕ್ಕಾಗಿ ಆಕೆಯ ತಂದೆ ಮಾಡಿದ್ದೇನು ಗೊತ್ತಾ?

Share the Article

Urfi Javed father : ಹಿಂದಿ ಕಿರುತೆರೆ ನಟಿ, ಬಿಗ್ ಬಾಸ್(Bigg Boss) ಸ್ಪರ್ಧಿ, ಹುಂಬ ಹುಡುಗಿ ಉರ್ಫಿ ಜಾವೇದ್(Urfi Javed) ಇತ್ತೀಚಿನ ದಿನಗಳಲ್ಲಿ ತಾನು ಧರಿಸೋ ತುಂಡು ಬಟ್ಟೆಗಳ ಮೂಲಕವೇ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುತ್ತಾಳೆ. ಇದರೊಂದಿಗೆ ಸಾಕಷ್ಟು ಟ್ರೋಲ್ ಆಗುತ್ತಾ ಆಗಾಗ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿರುತ್ತಾಳೆ. ಸದ್ಯ ಈ ಉರ್ಫಿ ತನ್ನ ಬಾಲ್ಯದಲ್ಲಾದ ಕೆಲವು ಕಹಿ ಘಟನೆಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಹೌದು, ತುಂಡುಡುಗೆಗಳಿಂದಾಗಿ ಸುದ್ದಿಯಾಗೋ ಉರ್ಫಿ ಜಾವೇದ್ ಅವರು, ತಾನು ಬಾಲ್ಯ ಮತ್ತು ಹದಿಹರೆಯದಲ್ಲಿ ತುಂಬಾ ಕಷ್ಟವನ್ನು ಅನುಭವಿಸಿದ್ದೇನೆ ಎಂದು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತನಗೆ 15 ವರ್ಷವಿದ್ದಾಗ ಯಾರೋ ಪೋರ್ನ್ ಸೈಟ್‌(Porn Site) ನಲ್ಲಿ ನನ್ನ ಚಿತ್ರವನ್ನು ಅಪ್‌ಲೋಡ್ ಮಾಡಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ತನ್ನ ತಂದೆ (Urfi Javed father) ತನಗೆ ಥಳಿಸಿದ ಬಗ್ಗೆ ಉರ್ಫಿ ಜಾವೇದ್ ಮಾತನಾಡಿದ್ದಾರೆ.

ಅಂದಹಾಗೆ ಊರ್ಫಿ 17 ನೇ ವಯಸ್ಸಿನಲ್ಲಿದ್ದಾಗ ಮನೆಯಿಂದ ಓಡಿಹೋಗುವ ನಿರ್ಧಾರದ ಮಾಡಿದ್ದರಂತೆ. ತಾನೇಕೆ ಈ ನಿರ್ಧಾರ ಮಾಡಿದೆ ಎಂಬುದನ್ನೂ ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಉರ್ಫಿ ಬಿಚ್ಚಿಟ್ಟಿದ್ದಾರೆ. ಅದೇನೆಂದರೆ ಯಾರೋ ಪೋರ್ನ್ ಸೈಟ್‌ನಲ್ಲಿ ಉರ್ಫಿ ಅವರ ಫೋಟೋಗಳನ್ನು ಹಾಕಿದ್ದರಂತೆ. ಇದರಿಂದ ಎಲ್ಲಾ ಸಮಸ್ಯೆಗಳೂ ಪ್ರಾರಂಭವಾದವಂತೆ.

ಈ ಕುರಿತಂತೆ ಮಾತನಾಡಿ ಆಕ “ನಾನು 15 ವರ್ಷದವಳಾಗಿದ್ದಾಗ ಪೋರ್ನ್ ಸೈಟ್‌ನಲ್ಲಿ ನನ್ನ ಚಿತ್ರವನ್ನು ಯಾರೋ ಅಪ್‌ಲೋಡ್ ಮಾಡಿದ್ದಾರೆ. ಅದು ಸಾಮಾನ್ಯ ಚಿತ್ರವಾಗಿತ್ತು. ಅದು ನನ್ನ ಫೇಸ್‌ಬುಕ್ ಪ್ರೊಫೈಲ್ ಫೋಟೋ ಆಗಿತ್ತು. ಅದರಲ್ಲಿ ನಾನು ಟ್ಯೂಬ್ ಟಾಪ್ ಧರಿಸಿದ್ದೆ. ಯಾರೋ ಅದನ್ನು ಡೌನ್‌ಲೋಡ್ ಮಾಡಿ ಮಾರ್ಫಿಂಗ್ ಮಾಡದೆ ಪೋರ್ನ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ನಿಧಾನವಾಗಿ ಎಲ್ಲರಿಗೂ ವಿಷಯ ತಿಳಿಯಿತು. ಎಲ್ಲರೂ ನನ್ನನ್ನು ತುಂಬಾ ಕೆಟ್ಟದಾಗಿ ಬೈದುಕೊಳ್ಳಲು ಶುರುಮಾಡಿದರು. ನಾನು ಪೋರ್ನ್ ಸ್ಟಾರ್ ಅಂತ ಹೇಳಿದಾಗ ‘ವೀಡಿಯೋ ಎಲ್ಲಿದೆ?’ ಎಂದು ಕೇಳಿದೆ. ಆದರೆ ಅವರು, ‘ಇಲ್ಲ, ಇಲ್ಲ ನೀನು ಪೋರ್ನ್ ಸ್ಟಾರ್’ ಎಂದು ನನ್ನನ್ನು ಕರೆದರು’ ಎಂದಿದ್ದಾರೆ.

ಬಳಿಕ ಮಾತನಾಡಿದ ಅವರು ‘ನನ್ನ ತಂದೆ ಕೂಡ ನಾನು ಪಾರ್ನ್ ಸ್ಟಾರ್ ಆಗಿದ್ದೇನೆ ಎಂದು ನಂಬಿದ್ದರು. ಪಾರ್ನ್ ಸೈಟ್​ನವರು ಫೋಟೊ ತೆಗೆದುಹಾಕಲು ₹ 50 ಲಕ್ಷ ಕೇಳುತ್ತಿದ್ದಾರೆ ಎಂದು ಎಲ್ಲರಿಗೂ ಹೇಳುತ್ತಿದ್ದರು. ಇದೆಲ್ಲಾ ಸುಳ್ಳು ಎಂಬಂತೆ ನಾನಿದ್ದೆ. ಆದರೆ ಮನೆಯಲ್ಲಿ ಅವರು ನನ್ನನ್ನು ಹೊಡೆಯುತ್ತಿದ್ದರಿಂದ ನಾನು ಏನನ್ನೂ ಹೇಳಲು ಸಾಧ್ಯವಾಗುತ್ತಿರಲಿಲ್ಲ. ‘ಇಲ್ಲಿ ನಾನೇ ಬಲಿಪಶು, ಯಾಕೆ ಹೊಡೆಯುತ್ತಿದ್ದೀಯಾ?’ ಎಂದು ಕೇಳುತ್ತಿದ್ದೆ. ಅಷ್ಟು ಗೊಂದಲದಲ್ಲಿದ್ದೆ ನಾನು. ಆದರೆ ಯಾರೂ ಅದನ್ನು ನಂಬಲು ಸಿದ್ಧರಿರಲಿಲ್ಲ. ನಾನು ಅದನ್ನು ಎರಡು ವರ್ಷಗಳ ಕಾಲ ಸಹಿಸಿಕೊಂಡೆ. ಸಂಬಂಧಿಕರಿಂದ, ನನ್ನ ಸ್ವಂತ ತಂದೆಯಿಂದ ಅಪಮಾನ ಸಹಿಸಲು ತುಂಬಾ ಕಷ್ಟವಾಯಿತು. ಹೀಗಾಗಿ ಮನೆಯನ್ನು ತೊರೆಯಬೇಕಾಯಿತು” ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಸದ್ಯ ಅಜಿಯೋ ಮತ್ತು ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರಂತಹ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡುತ್ತಿರುವ ಉರ್ಫಿ ಅಂದು ಮನೆ ಬಿಟ್ಟು ಓಡಿಹೋದಾಗ ತುಂಬಾ ಕಷ್ಟದ ದಿನಗಳನ್ನು ಎದುರಿಸಬೇಕಾಗಿತ್ತು. ಆ ಸಮಯದಲ್ಲಿ ಆಕೆ ಮಕ್ಕಳಿಗೆ ಪಾಠ ಹೇಳುವ ಮೂಲಕ ಮನೆತ ಬಾಡಿಗೆ ಪಾವತಿಸಿದ್ದಳು. ನಂತರ ಅವಳು ದೆಹಲಿಗೆ ತೆರಳಿ ಅಲ್ಲಿ ಸ್ವಲ್ಪ ಸಮಯದವರೆಗೆ ಒಬ್ಬ ಸ್ನೇಹಿತನ ಫ್ಲಾಟ್‌ನಲ್ಲಿದ್ದಳು. ನಂತರ ಕಾಲ್ ಸೆಂಟರ್​ನಲ್ಲೂ ಕೆಲಸ ಮಾಡಿದಳು. ಅದಾದ ಮೇಲೆ ಅವರು ಮುಂಬೈಗೆ ತೆರಳಿ ಪಿಜಿಯಲ್ಲಿ ವಾಸಿಸುತ್ತಿದ್ದಳು. ಸಣ್ಣಪುಟ್ಟ ಪಾತ್ರಗಳಿಗಾಗಿ ಆಡಿಷನ್ ಮಾಡಿದಳು. ನಂತರ ಕಿರುತೆರೆಯಲ್ಲಿ ಅವಕಾಶ ಪಡೆದಳು.

Leave A Reply