Subsidy on gas cylinder : ಗೃಹಿಣಿಯರೇ ನಿಮಗೊಂದು ಗುಡ್ ನ್ಯೂಸ್! ದೊರಕಲಿದೆ ನಿಮಗೆ 500ರೂ. ಗೆ ಗ್ಯಾಸ್!

Subsidy on Gas Cylinder : ಇಂದಿನ ದಿನದಲ್ಲಿ ಎಲ್ ಪಿಜಿ ಅಡುಗೆ ಅನಿಲವು (LPG cylinder) ಜನರ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಅತಿಹೆಚ್ಚು ಜನರು ಇದರ ಮೂಲಕವೇ ಅಡುಗೆ ಮಾಡುತ್ತಾರೆ. ಆದರೆ, ಇತ್ತೀಚೆಗೆ ಈ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಇದರಿಂದ ಜನರು ಆತಂಕಕ್ಕೊಳಗಾಗಿದ್ದು, ಬಡ ಕುಟುಂಬಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ.

ಆದರೆ, ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿ ಇಲ್ಲಿದೆ. ಹೌದು, ಇದೀಗ ರಾಜಸ್ಥಾನ ಸರ್ಕಾರ ಮಹತ್ವದ ಘೋಷಣೆಯನ್ನು ಮಾಡಿದ್ದು, ‘ಮುಖ್ಯಮಂತ್ರಿ ಗ್ಯಾಸ್ ಸಿಲಿಂಡರ್ ಯೋಜನೆ’ಯಡಿ ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿಗಾಗಿ 750 ಕೋಟಿ ರೂ.ಗಳನ್ನು ಸರ್ಕಾರ ಅನುಮೋದಿಸಿದೆ (Subsidy on Gas Cylinder) ಎಂದು ವರದಿ ತಿಳಿಸಿದೆ.

ರಾಜಸ್ಥಾನ ಸರ್ಕಾರ ಬಡ ಕುಟುಂಬಗಳಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಿಂದ ಸುಮಾರು 73 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಯಾರಿಗೆಲ್ಲಾ ದುಬಾರಿ ಸಿಲಿಂಡರ್‌ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲವೋ ಅಂತಹ ಜನರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಹಾಗೆಯೇ ಪಿಪಿಎಲ್ ಕುಟುಂಬಗಳಿಗೆ 500 ರೂ.ಗೆ ಸಿಲಿಂಡರ್ ನೀಡಲಾಗುತ್ತದೆ. ಜೊತೆಗೆ ವರ್ಷಕ್ಕೆ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲಾಗುತ್ತದೆ.

ನೀವು PBL ಅಥವಾ ಉಜ್ವಲ ಯೋಜನೆ ಅಡಿಯಲ್ಲಿ ರಾಜಸ್ಥಾನ ರಾಜ್ಯದ ನಿವಾಸಿಯಾಗಿದ್ದರೆ, ನಿಮಗೆ ತಿಂಗಳಿಗೆ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ದೊರಕುತ್ತದೆ. ಇದಕ್ಕೆ ನಿಮ್ಮ ಬ್ಯಾಂಕ್ ಖಾತೆಯನ್ನು ಜನ್ ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು. ಆಗ ನೀವೂ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಪಡೆಯಬಹುದು.

ಈ ಯೋಜನೆಯು ಏಪ್ರಿಲ್ 1, 2023 ರಿಂದ ಜಾರಿಗೆ ಬಂದಿದ್ದು, ಈ ಯೋಜನೆಯನ್ನು ಜಾರಿಗೆ ತರಲು ರಾಜಸ್ಥಾನ ಸರ್ಕಾರವು ಕೇಂದ್ರ ಪೆಟ್ರೋಲಿಯಂ ಸಚಿವಾಲಯದಿಂದ ಉಜ್ವಲ ಯೋಜನೆಯ ಪಟ್ಟಿಯನ್ನು ನೀಡುವಂತೆ ಕೋರಿದೆ. ಈ ಡೇಟಾ ಲಭ್ಯವಾದ ನಂತರ, ಯೋಜನೆಯ ಪ್ರಕ್ರಿಯೆಯು ಆರಂಭವಾಗುತ್ತದೆ.

ಈ ಯೋಜನೆಯಡಿಯಲ್ಲಿ, ಸಬ್ಸಿಡಿ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಹಾಗೇ 610 ರೂಪಾಯಿ ಸಹಾಯಧನವನ್ನು ಫಲಾನುಭವಿಯ ಖಾತೆಗೆ ವರ್ಗಾಯಿಸಲಾಗುತ್ತದೆ. ಉಜ್ವಲ ಯೋಜನೆ ಫಲಾನುಭವಿಗಳ ಖಾತೆಗೆ 410 ರೂ.ಗಳನ್ನು ಹಾಕಲಾಗುತ್ತದೆ. ಜನಸಾಮಾನ್ಯರಿಗೆ ಈ ಸುದ್ಧಿ ಸಿಹಿ ಸುದ್ದಿಯೇ ಆಗಿದ್ದು, ಬಡ ಕುಟುಂಬಗಳ ಆರ್ಥಿಕ ಸಮಸ್ಯೆ ಪರಿಹರಿಸಲು ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಜನಸಾಮಾನ್ಯರು ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಬಹುದು.

Leave A Reply

Your email address will not be published.